|
| Tweet |
![]() | Tell a Friend |
ಕಡಲೆ ಬೀಜದ ಪಕೋಡ
ಬೇಕಾಗುವ ಪದಾರ್ಥಗಳು :
ಮೈದಾಹಿಟ್ಟು 1 ಬಟ್ಟಲು, ಕಡಲೆ ಬೀಜ ಅರ್ಧ ಬಟ್ಟಲು, ಈರುಳ್ಳಿ 1 ಬಟ್ಟಲು (6) , ಸೋಂಪು 1 ಚಮಚ, ಕರಿಬೇವು 4 ಎಸಳು, ಕರಿಯಲು ಎಣ್ಣೆ.

ಮಾಡುವ ವಿಧಾನ :
ಈರುಳ್ಳಿಯನ್ನು ಉದ್ದುದ್ದ ಹೆಚ್ಚಿ ಮೈದಾಹಿಟ್ಟಿಗೆ ಹಾಕಿ ಸೋಂಪು, ಬಿಡಿಸಿದ ಕರಿಬೇವು, ಕಡಲೇಬೀಜ ಮತ್ತು ಉಪ್ಪು ಹಾಕಿ ಕಾದ ಎಣ್ಣೆಯನ್ನು 3-4 ಚಮಚ ಹಾಕಿ ಚೆನ್ನಾಗಿ ಸಾಟಿ ಮಾಡಿ ಸ್ವಲ್ಪ ನೀರು ಸೇರಿಸಿ ಪಕೋಡ ಹಿಟ್ಟಿನ ಹದಕ್ಕೆ ಕಲಸಿ ಕಾದ ಎಣ್ಣೆಗೆ ಹಾಕಿ ಹೊಂಬಣ್ಣ ಬರುವವರೆಗೂ ಕರಿದು ತೆಗೆಯಿರಿ. ಈ ಕಡಲೆ ಬೀಜದ ಪಕೋಡವನ್ನು ಬಿಸಿಯಾದ ಸಾರನ್ನ ಹುಳಿಯನ್ನದ ಊಟಕ್ಕೆ ನೆಂಚಿಕೊಳ್ಳಲು ಬಹಳ ರುಚಿ ಇರುತ್ತದೆ.
-- ಎಸ್. ವಿಜಯಾ ಗುರುರಾಜ
| Rate this Recipe: |
| Views: 21241 | Submitted: 2009-01-28 |
0 comments so far (Add Comment)
