Bookmark and Share tell a friendTell a Friend

ಅರಿಶಿನದ ಔಷಧೀಯ ಗುಣಗಳು


ನಾವು ನಮ್ಮ ದೈನಂದಿನ ಆಹಾರದಲ್ಲಿ ಬಳಸುವ ಅರಿಶಿನ ಅನ್ನನಾಳದ ಕ್ಯಾನ್ಸರ್ ಜೀವಕೋಶಗಳನ್ನು ಕೊಲ್ಲುವ ಶಕ್ತಿ ಹೊಂದಿದೆ. ಅಲ್ಲದೆ ಇದು ಗಂಟಲು ಕ್ಯಾನ್ಸರ್ ನಿವಾರಣೆಗೂ ಅತ್ಯುತ್ತಮ ಪರಿಹಾರವಾಗಲಿದೆ ಎಂಬುದಾಗಿ ಸಂಶೋಧಕರು ಹೇಳಿದ್ದಾರೆ. ಅನ್ನನಾಳದ ಕ್ಯಾನ್ಸರ್ ಜೀವಕೋಶಗಳಿಗೆ ಅರಿಶಿನದಲ್ಲಿರುವ ಕರ್ಕ್ಯುಮಿನ್ ಎಂಬ ರಾಸಾಯನಿಕದ ಮೂಲಕ ಚಿಕಿತ್ಸೆ ನೀಡಿದಾಗ, ಅದು ಕ್ಯಾನ್ಸರ್ ಕಣಗಳನ್ನು 24 ಗಂಟೆಗಳೊಳಗಾಗಿ ಕೊಲ್ಲಲು ಆರಂಭಿಸಿತು. ಅಲ್ಲದೆ ಜೀವಕೋಶಗಳು ತಮ್ಮಷ್ಟಕೆ ಜೀರ್ಣ ಪ್ರಕ್ರಿಯೆ ಆರಂಭಿಸಿದವು ಎಂಬುದಾಗಿ ಪ್ರಯೋಗಾಲಯದಲ್ಲಿ ಕೈಗೊಂಡಿರುವ ಸಂಶೋಧನೆಯಿಂದ ವ್ಯಕ್ತವಾಗಿದೆ.
turmeric

ಈ ಬೆಳವಣಿಗೆಯು ಕ್ಯಾನ್ಸರ್ಗೆ ಹೊಸ ಚಿಕಿತ್ಸೆಯ ಪತ್ತೆಗೆ ಸಹಾಯಕವಾಗಬಹುದು ಎಂಬುದಾಗಿ ಕಾರ್ಕ್ ಕ್ಯಾನ್ಸರ್ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಎಂಬುದಾಗಿ ಬ್ರಿಟಿಷ್ ನಿಯತಕಾಲಿಕವೊಂದು ಪ್ರಕಟಿಸಿದೆ.

"ನೈಸರ್ಗಿಕ ರಾಸಾಯನಿಕಗಳು ಕ್ಯಾನ್ಸರ್ ಹಬ್ಬುವ ಜೀವಕೋಶಗಳಿಗೆ ಚಿಕಿತ್ಸೆ ನೀಡುವಲ್ಲಿ ಸಮರ್ಥ ಎಂಬುದಾಗಿ ವಿಜ್ಞಾನಿಗಳು ಈ ಹಿಂದೆಯೇ ತಿಳಿದಿದ್ದರು ಮತ್ತು ಕರ್ಕ್ಯುಮಿನ್ ರಾಸಾಯನಿಕವು ಚಿಕಿತ್ಸಾ ಮೌಲ್ಯವನ್ನು ಹೊಂದಿರಬಹುದು" ಎಂಬುದನ್ನು ನಾವು ಊಹಿಸಿದ್ದೆವು ಎಂಬುದಾಗಿ ಸಂಶೋಧಕ ಡಾ| ಶರೋನ್ ಮೆಕೆನ್ನಾ ಹೇಳಿದ್ದಾರೆ.

ಅರಿಶಿನವು ಕ್ಯಾನ್ಸರ್ ಮಾತ್ರವಲ್ಲದೆ ಸಂಧಿನೋವು ಹಾಗೂ ಬುದ್ಧಿಮಾಂದ್ಯತೆ ದೂರಮಾಡುವ ಚಿಕಿತ್ಸೆಯಲ್ಲೂ ಹೆಚ್ಚಿನ ಪ್ರಯೋಜನಕಾರಿಯಾಗಿ ಕಂಡು ಬಂದಿದೆ. ಈ ದಿಸೆಯಲ್ಲಿ ನಾವು ಈಗಾಗಲೇ ಉತ್ತಮ ಫಲಿತಾಂಶಗಳನ್ನು ನಿರೀಕ್ಷಿಸುತ್ತಿದ್ದೇವೆ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ

ಹಾಗಾಗಿ ನೀವು ಬಳುಸುವ ಮಸಾಲೆಯಲ್ಲಿ ಅರಿಶಿನ ಕಡ್ಡಾಯವಾಗಿರಲಿ !!!

-- ನಳಿನಿ ಚಂದ್ರಶೇಖರ್

Rate :

Rating: 3.3/5 (7 votes cast)

Views: 49005 | Submitted: 2009-11-04
0 comments so far (Add Comment)
Name:
Email:
URL:
Comments:

Test Question: + ??