Bookmark and Share tell a friendTell a Friend

ನೀಲಿ ಕಣ್ಣಿನ ಹುಡುಗಿ


ತಿಳಿ ನೀರ ಕೊಳದಲಿ
ಕಮಲವು ನಗುತಿರಲು
ನೀರ ತರಲೆಂದು ಬಂತು
ನೀಲಿ ಕಣ್ಣಿನ ಹುಡುಗಿ

ನೀಲಿ ಕಣ್ಣನು ಕಂಡು
ಕೊಳವು ನೀಲಿಯಾಗಿರಲು
ಈಕೆ ಯಾರೆಂದು ತಿಳಿಯಲು
ಮುಗಿಲ ಚಂದಿರ
ಬುವಿಗೆ ಬಂದು
ನೋಡುತಿಹನು ಬಿಂಬವಾಗಿ

ನೀರನೊತ್ತಿಕೊಂಡು
ಹೋಗುತಿಹಳು ಬಾಲೆ
ಕಾಲಗೆಜ್ಜೆ ಕುಣಿಸುತ
ಗಲ್-ಗಲ್ಲೆನುತ,
ಬಿಂಬವಾದ ಚಂದ್ರ
ಹೊರಟ ಆಕೆ ಹಿಂದೆ-ಹಿಂದೆ

-- ರೂಪ ಅನಿಲ್‍ಕುಮಾರ್

Rate :

Rating: 4.4/5 (7 votes cast)

Views: 21626 | Submitted: 2010-02-01
0 comments so far (Add Comment)
Name:
Email:
URL:
Comments:

Test Question: + ??