|
| Tweet |
![]() | Tell a Friend |
ನನ್ನವರು
ನನ್ನ ಮನದಾಗ ಇದ್ದು
ಮರೆದಾಂಗ ಇದ್ದವರು
ನನ್ನ ಕಾಲೇಜ್ಯಾಗಿನ
ಆತ್ಮೀಯ ಗೆಳೆಯ್ಯಾರು
ನನ್ನ ದನಿಯ ಅಳುವನ್ನು
ನಿರ್ನಾಮ ಮಡ್ಯಾರೊ
ಅವರೆಲ್ಲ ಕೂಡಿ ಬಂದಾರೊ
ನಗುವಿನ ಮೊಗವನ್ನು ತಂದಾರೊ
ಶಿವಣ್ಣ ನ ಸಿಸ್ಟಮ್ ಚಂದ
ಅಮೀತ ನ ಹಿತಮಾತು ಅಂದ
ಕಾರ್ತಿಕ ನ ಕಿರುನಗೆ ಚಂದ
ಸೋಮು ವಿನ ಸ್ಮಾರ್ಟ್ ನೆಸ್ ಅಂದ
ಪ್ರಕಾಶ ನ ಪರವಿಷಯ ಪರಸಂಗ
ಅದನ ಮನಬಿಚ್ಚಿ ಹೇಳಲಿ ನಾ ಹೆಂಗ
ಮಹೇಂದ್ರ ನ ಮರುಮಾತು ಮರೆತರೆಂಗ
ವಿಚಾರ ಮಾಡಿದರೂ ಅದು ತುಂಟು ತನದಂಗ
ಮಹೇಶ-ಜೋಶಿ ಯವರ ಮಾತಿನ್ಯಾಗ
ಇಡೀ ಪ್ರಪಂಚವೇ ಬರುತೈತಿ ಕಾಲೇಜಿನ್ಯಾಗ
ಮಾಂತ್ಯ,ಮಂಜ,ಉಮೇಶ
ಇವರ ನಡುವಿನಾಗ ಮರೆತಿಲ್ಲ ಸಂತೋಷ
ಇದ್ದರ ಇರಬೇಕು ವಿಜು-ಅಶ್ವಿನಿ ಹಾಂಗ
ಅದನ್ನ,ಅವರ ಮರೆತರ ಹ್ಯಾಂಗ
ರಾಹುಲ-ಮಮತ-ರಾಜಿಯರ ಸಂಗ
ನಾ ಮರೆತನೆಂದ್ರೂ ಮರಿವಲ್ತು ನಂಗ
ಪರಸುವಿ ನ ಮತಿನ್ಯಾಗ ದುಃಖದ ಮಾತೆಲ್ಲಿ
ನಗು ತುಂಬಿ ತುಳುಕುತೈತಿ ಅಲ್ಲಿ
ಶಶಿ,ಮಲ್ಯಾ ಇವರು ಇದ್ರ
ಕಂಪೂಟರಗೂ ಪ್ರೀತಿಗೂ ಹತ್ರ ಹತ್ರ
ಹರ್ಬ್ಸ ಇರುತೈತಿ ಎಲ್ಲಿ
ಒಗ್ಗಟ್ಟಿನ ಬಲವೈತಿ ಅಲ್ಲಿ
ಅರ್ನಾಲ್ಡ,ರಾಕ್ ಇವರು ಅದಾರ
ಹೆಸರಿಗೆ ತಕ್ಕಾಂಗ ಕಾಲೇಜಿಗೆ ಬರ್ತಾರ
ಚೈತ್ರಾ-ನೇತ್ರಾ ಇವರ್ನೂ ಮರೆತಿಲ್ಲ
ಕಂಡಾಗೊಮ್ಮೆ ಅಂತಾರೆ ಹಾಯ್-ಬಾಯ್ ಎಲ್ಲ
ಶ್ವೇತಾ ನು ಅಂತಾಳೆ ಇದೆಲ್ಲಾ
ಆದರೆ ಕ್ಲಾಸಿನ್ಯಾಗ ಸೈಲೇಂಟಾಗಿರ್ತಾಳಲ್ಲ
ಯಾರ್ನಂತ ಹೇಳಲಿ ಯಾರ್ನಂತ ಬೀಡಲಿ
ಅರುಣ,ಆತೀಫ,ಯಾಸಿನ,ಮಂಜ,ಇವರೆಲ್ಲ ಇರಲಿ
ಇವರ ಜೊತೆ ಅನುಪಮ,ಶಿವಾನಿ ಇವರು ಇರಲಿ
ಗೌರಿ,ಯೋಗಿತಾ,ಅಕ್ಷತ ಇವರ್ನೆಂಗ ಮರಿಲಿ
ಎಷ್ಟು ಹೇಳಿದ್ರು ಸಾಲ್ವಲ್ತು
ಎಷ್ಟು ಬರಿದ್ರು ನಿಲ್ವಲ್ತು
ನನಗಾಗಿ ಬಂದವರು
ನನ್ನ ಆತ್ಮೀಯ ಗೆಳೆಯ್ಯಾರು
ಯರ್ನಾದರು ಬಿಟ್ಟಿದ್ರ ಕ್ಷಮೆ ಇರಲಿ
ಇಲ್ಲಿಲ್ಲಿದ್ರೂ ಇರುವಿರಿ ನನ್ನ ಮನದಲ್ಲಿ
-- ರಘುನಂದನ ಕುಲಕರ್ಣಿ
| Rate : |
| Views: 16536 | Submitted: 2009-06-18 |
ಆಕಾಶ್ : ಅವರಿಗೆ ಕನ್ನಡ ಅರ್ಥ ಆಗ್ಲಿಲ್ಲ ಅದಕ್ಕೆ !!!
