|
| Tweet |
![]() | Tell a Friend |
ನಮ್ಮ ಅತ್ತಿಗೆ
ನಿತ್ಯ ನಮ್ಮ ಮನೆಯಲಿ
ಅತ್ತಿಗೆಯ ಮಾತುಗಳದ್ದೇ ಸದ್ದು|
ಸದಾ ಬಿಡುವಿರದ ನಗುವೇ
ಸಕಲಾರೋಗ್ಯ ತಂದಿರುವ ಮದ್ದು|
ಕೆಲಸದಲಿ ಅವಳೆಂದೆಂದೂ ಮುಂದು|
ಒಂದು ಕ್ಷಣವೂ ಕೂತವಳಲ್ಲ ಮನನೊಂದು|
ಅವಳು ಮಾಡುವ ಬಿಸಿಬಿಸಿ ಮುದ್ದೆ|
ತಿಂದರೆ ತರುವುದು ಸವಿಸವಿ ನಿದ್ದೆ|
ಅವಳ ಕೈ ಅಡುಗೆ ರುಚಿಯ ಗಮ್ಮತ್ತು|
ಎಂದೋ ಮರೆಸಿಹುದು ಅಮೃತದ ಕಿಮ್ಮತ್ತು|
ಆದರೆ ಅವಳು ಊರಿಗೆ ಹೋದಾಗ
ಬರುವದು ಊಟಕ್ಕೆ ವಿಪತ್ತು|
ವಿಧಿಯಿಲ್ಲದೆ ಅಲ್ಲಿ ಇಲ್ಲಿ ತಿನ್ನುವ ತಿಂಡಿ
ತರುವುದು ಹೊಟ್ಟೆಗೆ ಅಪತ್ತು|
ಬರುವ ಅಥಿತಿಗಳಿಗೆಲ್ಲ ಅವಳೇ ಆಸರೆಯ ಸಾರಥಿ|
ಅವಳಕ್ಕರೆಯ ಮಾತುಗಳೇ ಅವರಿಗಾನಂದದ ಆರತಿ|
ಅವಳ ಆದರ-ಅಭಿಮಾನದ ಸತ್ಕಾರವೇ ಎಲ್ಲರಿಗೊಂದು ಸ್ಪೂರ್ತಿ|
ಬದುಕಲಿ ಅಣ್ಣನಿಗೆ ಒಲಿದ ಅವಳೊಂದು ಗುಣಸಂಪನ್ನ ಮೂರ್ತಿ|
-- ಸುನಿಲ್ ಮಲ್ಲೇನಹಳ್ಳಿ
| Rate : |
| Views: 26722 | Submitted: 2008-07-09 |
0 comments so far (Add Comment)
ಒಮ್ಮೆ ತೀರಾ ದಪ್ಪದ ಮನುಷ್ಯನೊಬ್ಬ ತೂಕದ ಮೆಷೀನಿನ ಮೇಲೆ ಹತ್ತಿ ನಿಂತು ಒಂದು ರೂಪಾಯಿ ಕಾಯಿನ್ ತೂರಿಸಿದ. ಕೂಡಲೇ ಉತ್ತರದ ಚೀಟಿ ಬಂದು ಬಿತ್ತು;
'ದಯವಿಟ್ಟು ಒಬ್ಬರ ನಂತರ ಒಬ್ಬರಂತೆ ಹತ್ತಿರಿ'.
'ದಯವಿಟ್ಟು ಒಬ್ಬರ ನಂತರ ಒಬ್ಬರಂತೆ ಹತ್ತಿರಿ'.
| sharada: | excellent... sir. really |
| lokesh: | hi my dear friends |
| sharada: | houdu mallesh namage tum |
| ravikumar: | nice kavana nimma manasu |
| ravi kumar: | supar sms supriya you fr |
| mallesha: | ya |
| Raghavendra: | Hi.. sowmya .. tumba c |
| Ramesh : | Good, totally positive i |
