Bookmark and Share tell a friendTell a Friend

ಗೆಳತಿಗಾಗಿ ಒಂದು ಕವನ


ಓ ಗೆಳತಿ..
ನಿತ್ಯ ನಿನಗಾಗಿ ಕವನ ಬರೆಯಲು
ನನ್ನಾಣೆಗೂ ನಾ ಕವಿಯಲ್ಲ
ಕಾವ್ಯ, ಕವನದ ಒಗಟು
ನನಗೆ ತಿಳಿಯದ ಗುಟ್ಟು

ಅದರೆ ಏನು ಮಾಡಲಿ?
ನಿನ್ನೊಮ್ಮೆ ನೆನೆದ ಕ್ಷಣದಲಿ
ಮನದ ಭಾವಗಳ ಸರಮಾಲೆ
ಪದಗಳ ರೂಪದಲಿ ಉದ್ಭವಿಸಿ
ನರನಾಡಿಗಳಲಿ ಸಾಲು ಸಾಲಾಗಿ ಹರಿದು
ಉಸಿರಿನ ಕಣಗಳಲಿ ಪ್ರಾಸಬದ್ಧವಾಗಿ ಬೆರೆತು

ಎದೆಯ ಗುಡಿಯ ಒಳಗೆ ಒಂದು ಹೊಸ ಮಿಡಿತ
ಒಲವಿನ ಪುಟದ ಹಾಳೆಯ ಮೇಲೆ ಒಂದು ಹೊಸ ಕವನ
ಒಮ್ಮಿಂದೊಮ್ಮೆಲೆ ಉದಯಿಸುವುದು!

ಹೃದಯದಂಗಳದ ಅಣೆಕಟ್ಟೆಯಲಿ
ಮುಗಿಲೆತ್ತರದ ಪ್ರೀತಿ ತುಂಬಿ ತುಳುಕುತ್ತಿದ್ದರೂ
ಆ ನನ್ನ ಹೊಸ ಕವನಕ್ಕೆ.. ಆ ನನ್ನ ಹೊಸ ಮಿಡಿತಕ್ಕೆ
ಸ್ನೇಹದ ಬಣ್ಣ ಹಚ್ಚಿ.. ಪ್ರೇಮದ ಕಾಲುವೆಯನು ಮುಚ್ಚಿ
ಓದಲು ನಿನ್ನ ಕೈಯಂಚಲಿ ಇಟ್ಟಿರುವೆನು!

-- ಸುನಿಲ್ ಮಲ್ಲೇನಹಳ್ಳಿ

Rate :

Rating: 3.4/5 (5 votes cast)

Views: 26832 | Submitted: 2008-07-03
1 comments so far (Add Comment)
Venkatesh Balwadgi
Sunday, 01.4.09 @ 21:09pm

Uttam prayatna dayavittu munduvarisi,Sahity seveyannu gambheervaagi tegedukolli. Naanu saha anek kavanagalann brediddene Pustak roopadalliyu sah prakatvaagive. Samparkvirali.

Name:
Email:
URL:
Comments:

Test Question: + ??