Bookmark and Share tell a friendTell a Friend

ಯಾರೋ ಗೆದ್ದರು.... ಯಾರೋ ಸೋತರು


ಅದೊಂದು ಊರು
ಅಲ್ಲಿರುವವು ನೂರಾರು ಸೂರು
ಇರುವುದು ಒಂದೇ ದ್ಯಾವ್ರ ಗೂಡು
ಸಗುತಿತ್ತು ಪ್ರೀತಿ, ಸಹಬಾಳ್ವೆ ಜಾಡು

ನಾಡಲಿ ಎಲೆಕ್ಷನ್ ಪ್ರಚಾರ ಭಾರಿ ಜೋರು
ಆಊರಿಗೆ ಬಂದಿತು ರಾಜಕಾರಣಿಗಳ ಕಾರು
ತಂದಿತು ಸಾವಿರಾರು ಬಾಟಲ್‍ಗಳಲಿ ಬೀರು
ಖುಷಿಯಲಿ ಎಲ್ಲರು ಕಂಠಪೂರ್ತಿ ಕುಡಿದರು

ಏರಿದ ಅಮಲಿನಲಿ... ಮಾತಿನ ಚಕಮಕಿಯಲಿ
ಹಿರಿಯರ ವಚನವ ಮರೆತರು... ಏಕತೆ ಮಂತ್ರವ ಸುಟ್ಟರು
ಹಣದ ಆಸೆಯಲಿ.. ತುಂಬಿದ ಮದದಲಿ
ಆ ಪಕ್ಷ ಈ ಪಕ್ಷ ಸೇರಿದರು

ಪ್ರೀತಿ, ಸಹಬಾಳ್ವೆ ದೂರಾದವು
ದ್ವೇಷ, ಹೊಡೆದಾಟ ಸನಿಹವಾದವು

ಕೊನೆಯಲಿ ಚುನಾವಣೆಯಲಿ
ಯಾರೋ ಗೆದ್ದರು... ಯಾರೋ ಸೋತರು !
ಗೆದ್ದವರಾಗಲಿ... ಸೋತವರಾಗಲಿ
ಇನ್ನೈದ್ವರ್ಷ ತಲೆಯನಂತೂ ಹಾಕರು !

ಈ ಊರಿನ "ನೆಮ್ಮದಿಯ ಹಲ್ಲಿ" ಎಲ್ಲೋ ಹಾರಿ ಹೋಗಿತ್ತು
ಹುಡುಕಿ ಕರೆತರಲು ಹೋದವರಿಗೆ ನೀವ್ಯಾರೆಂದು ಕೇಳಿತ್ತು !

-- ಸುನಿಲ್ ಮಲ್ಲೇನಹಳ್ಳಿ

Rate :

Rating: 2.8/5 (4 votes cast)

Views: 26583 | Submitted: 2008-06-17
0 comments so far (Add Comment)
Name:
Email:
URL:
Comments:

Test Question: + ??