|
| Tweet |
![]() | Tell a Friend |
ನೀಲಿ ಕಣ್ಣಿನ ಹುಡುಗಿ
ತಿಳಿ ನೀರ ಕೊಳದಲಿ
ಕಮಲವು ನಗುತಿರಲು
ನೀರ ತರಲೆಂದು ಬಂತು
ನೀಲಿ ಕಣ್ಣಿನ ಹುಡುಗಿ
ನೀಲಿ ಕಣ್ಣನು ಕಂಡು
ಕೊಳವು ನೀಲಿಯಾಗಿರಲು
ಈಕೆ ಯಾರೆಂದು ತಿಳಿಯಲು
ಮುಗಿಲ ಚಂದಿರ
ಬುವಿಗೆ ಬಂದು
ನೋಡುತಿಹನು ಬಿಂಬವಾಗಿ
ನೀರನೊತ್ತಿಕೊಂಡು
ಹೋಗುತಿಹಳು ಬಾಲೆ
ಕಾಲಗೆಜ್ಜೆ ಕುಣಿಸುತ
ಗಲ್-ಗಲ್ಲೆನುತ,
ಬಿಂಬವಾದ ಚಂದ್ರ
ಹೊರಟ ಆಕೆ ಹಿಂದೆ-ಹಿಂದೆ
-- ರೂಪ ಅನಿಲ್‍ಕುಮಾರ್
| Rate : |
| Views: 21333 | Submitted: 2010-02-01 |
0 comments so far (Add Comment)
ಮೇಷ್ಟ್ರು : ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಅಂತ ಹೇಳಿದ್ರೂ ಅವರು ಯಾಕೆ ಹೋಗ್ಲಿಲ್ಲ ?
ಆಕಾಶ್ : ಅವರಿಗೆ ಕನ್ನಡ ಅರ್ಥ ಆಗ್ಲಿಲ್ಲ ಅದಕ್ಕೆ !!!
ಆಕಾಶ್ : ಅವರಿಗೆ ಕನ್ನಡ ಅರ್ಥ ಆಗ್ಲಿಲ್ಲ ಅದಕ್ಕೆ !!!
