Close X
- KannadaHanigalu Health, Beauty and Kitchen Tips

ತುಳಸಿಯ ಔಷಧೀಯ ಗುಣ

ಧಾರ್ಮಿಕ ಹಿನ್ನಲೆಯುಳ್ಳ ತುಳಸಿ ಅಂಗಳಕ್ಕೆ ಶೋಭೆ ತರುವುದಲ್ಲದೇ ಆರೋಗ್ಯಕ್ಕೂ ಒಳ್ಳೆಯದು. ಮನೆಯಂಗಳದಲ್ಲಿ ಕುಳಿತ ಈ ತುಳಸಿ ಬಹಳಷ್ಟು ಔಷಧಗಳಲ್ಲಿ ಬಳಕೆಯಾಗುತ್ತದೆ. ಹಾಗೆಯೇ ನಿತ್ಯ ಸೇವನೆಯಿಂದ ನಿಮ್ಮ ಸೌಂದರ್ಯವು ಹೆಚ್ಚುತ್ತದೆ. ಕೆಲವು ತುಳಸಿಯ ಪ್ರಯೋಜನ ಮತ್ತು ಉಪಯೋಗಗಳನ್ನು ನೀಡಿದೆ :)

1. ಕೆಂಪುರಕ್ತ ಕಣಗಳನ್ನು ಹೆಚ್ಚಿಸಲು ನಿತ್ಯವೂ ತುಳಸಿ ರಸ ಸೇವಿಸುವುದು ಒಳ್ಳೆಯದು.

2. ತುಳಸಿ ಎಲೆ ಅಗಿಯುವುದರಿಂದ ಬಾಯಿಯ ದುರ್ಗಂಧ ನಿವಾರಣೆಯಾಗುತ್ತದೆ.

3. ತಲೆನೋವು ಶಮನ ಮಾಡಲು ತುಳಸಿ ರಸದಲ್ಲಿ ಏಲಕ್ಕಿ ಅರೆದು ಹಣೆ ಹಾಗೂ ಕಿವಿಯ ಭಾಗಕ್ಕೆ ಹಚ್ಚಿದರೆ, ನೋವು ಬಹುಬೇಗ ಉಪಶಮನವಾಗುತ್ತದೆ.

4. ತುಳಸಿ ರಸವನ್ನು ತಲೆಗೆ ಲೇಪಿಸುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ. ಇದರಿಂದ ಕೂದಲು ಉದುರುವುದೂ ಕಡಿಮೆಯಾಗುತ್ತದೆ.

5. ಹಸಿಶುಂಠಿ ಮತ್ತು ತುಳಸಿ ಎಲೆಗಳನ್ನು ಅರೆದು ಜೇನುತುಪ್ಪದಲ್ಲಿ ಸೇವಿಸಿದರೆ ಕೆಮ್ಮು, ಕಫ, ಗಂಟಲು ಕೆರೆತ ಗುಣವಾಗುತ್ತದೆ.

6. ಮನೆಯ ಸುತ್ತ ತುಳಸಿ ಗಿಡಗಳನ್ನು ಬೆಳೆಸುವುದರಿಂದ ಸೊಳ್ಳೆ ನಿವಾರಣೆ ಸಾಧ್ಯ.

7. ಹಲ್ಲು ನೋವು ಬಂದಾಗ 5-6 ತುಳಸಿ ಎಲೆಗಳನ್ನು ಅಗಿದರೆ ಕಡಿಮೆಯಾಗುತ್ತದೆ.

8. ಸ್ನಾನಕ್ಕೆ ಅರ್ಧಗಂಟೆ ಮೊದಲು ಅರಿಶಿನ ಹಾಗೂ ತುಳಸಿ ರಸ ಹಚ್ಚಿಕೊಂಡರೆ ಮುಖ ಮೃದುವಾಗಿ ಕಾಂತಿಯುತವಾಗುತ್ತದೆ.

9. ನಿಂಬೆ ರಸ ಹಾಗೂ ತುಳಸಿ ರಸ ಸೇರಿಸಿ ನಿತ್ಯವೂ ಸೇವಿಸಿದರೆ ಮೂತ್ರ ದೋಷ ನಿವಾರಣೆಯಾಗುತ್ತದೆ.

10. ತುಳಸಿ ಎಲೆ ಈರುಳ್ಳಿ ರಸ ಕರಿಮೆಣಸುಗಳನ್ನು ಸಮಪ್ರಮಾಣದಲ್ಲಿ ಅರೆದು ಗುಳಿಗೆ ಮಾಡಿ ದಿನಕ್ಕೆರಡರಂತೆ ತೆಗೆದುಕೊಂಡರೆ ಮೂಲವ್ಯಾಧಿಯ ಉರಿ ಕ್ರಮೇಣ ಕಡಿಮೆಯಾಗುತ್ತದೆ.

11. ದಿನಾಲು ನಾಲ್ಕೈದು ಚಮಚದಷ್ಟು ತುಳಸಿ ರಸ ಸೇವಿಸುತ್ತಿದ್ದರೆ ಕಾಮಾಲೆ ರೋಗ ವಾಸಿಯಾಗುವುದು.

12. ಮೇಲಿಂದ ಮೇಲೆ ಕೆಮ್ಮು ಬರುತ್ತಿದ್ದರೆ 5-6 ತುಳಸಿ ಎಲೆಯನ್ನು ಅಗಿದು ರಸ ನುಂಗುತ್ತಿರಿ. ಕೆಮ್ಮು ತಕ್ಷಣ ಹತೋಟಿಗೆ ಬರುತ್ತದೆ.

-- ಸಿಂಧು


Rate this Joke

Rating: 3.3/5 (19 votes cast)

Views: 40605 | Submitted: 2011-09-14

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech