Close X
- KannadaHanigalu Health, Beauty and Kitchen Tips

ಕಿಚನ್ ಕೇರ್


೧. ಅಂಟಿನ ಬಾಟಲಿಯಲ್ಲಿ ಅಂಟು ಒಣಗಿದ್ದರೆ ಅದಕ್ಕೆ ಸ್ವಲ್ಪ ವಿನೆಗರ್ ಹಾಕಿ ಕಲಕಿ. ನೀರಾಗುತ್ತದೆ.

೨. ನೇಲ್ ಪಾಲಿಶ್ ಅನ್ನು ಫ್ರಿಜ್‍ನಲ್ಲಿಟ್ಟರೆ ನೇಲ್ ಪಾಲಿಶ್ ಬೇಗ ಒಣಗುವುದಿಲ್ಲ.

೩. ಮನೆಯ ಗ್ರಿಲ್ ಅಥವಾ ಕಿಟಕಿಗಳ ಬಾಗಿಲುಗಳು ಜಂಗು ಹಿಡಿದಿದ್ದರೆ ಆ ಜಂಗನ್ನು ಚೆನ್ನಾಗಿ ಒರೆಸಿ ಮತ್ತು ಅದರ ಮೇಲೆ ತಕ್ಷಣ ಪೇಂಟ್ ಮಾಡಿ.

೪. ಬಟ್ಟೆಗಳ ಮೇಲೆ ಆದ ಮಣ್ಣಿನ ಕಲೆಯನ್ನು ತೆಗೆಯಲು ಆಲೂಗಡ್ಡೆ ಬೇಯಿಸಿದ ನೀರಿನಲ್ಲಿ ಬಟ್ಟೆಯನ್ನು ನೆನೆಸಿಡಿ. ನಂತರ ತೊಳೆಯಿರಿ.

೫. ಅಲ್ಯೂಮಿನಿಯಂ ಪಾತ್ರೆಗಳು ಮೊದಲಿನಂತೆಯೇ ಫಳಫಳನೆ ಹೊಳೆಯಲು ಅವುಗಳನ್ನು ಎಮರೀ ಪೇಪರ್‌ನಿಂದ ಚೆನ್ನಾಗಿ ಉಜ್ಜಿ. ಬರೇ ತೊಳೆಯಿಉವುದರಿಂದ ಅದರ ಮೇಲಿನ ಕಪ್ಪು ಕಲೆಗಳು ಹೋಗುವುದಿಲ್ಲ.

೬. ಒಣಗಿಹೋದ ಸ್ಕೆಚ್‍ಪೆನಿನ್ನ ಸ್ಪಾಂಜ್‍ನೊಳಗೆ ೩-೪ ಹನಿ ಬಿಸಿ ನೀರನ್ನು ಹಾಕಿ ಸ್ವಲ್ಪ ಸಮಯ ಬಿಟ್ಟು ಬರೆಯಲು ಶುರುಮಾಡಿ. ಮೊದಲಿ ನಂತೆಯೇ ಆಗುತ್ತದೆ.

೭. ಹೊಸ ಚಪ್ಪಲಿಗಳ ಸೋಲ್ ಅನ್ನು ಮರಳು ಪೇಪರ್ ನಿಂದ ಚೆನ್ನಾಗಿ ಉಜ್ಜಿ, ಹೀಗೆ ಮಾಡುವುದರಿಂದ ಕಾಲಿಗೆ ಚಪ್ಪಲಿ ಕಚ್ಚುವುದಿಲ್ಲ. ಜೊತೆಗೆ ನಯಸ್ಸಾಗಿದ್ದರೆ ಅದು ಜಾರುವುದಿಲ್ಲ.

೮. ಪ್ಲವರ್ ವಾಜ್‍ನಲ್ಲಿ ಹೂವುಗಳನ್ನು ಇಡುವಾಗ ಅದರಲ್ಲಿ ಬಿ ಕಾಂಪ್ಲೆಕ್ಸ್ ಮಾತ್ರೆಗಳನ್ನು ಹಾಕಿಟ್ಟರೆ ಹೂವುಗಳು ಬಹು ದೀರ್ಘಕಾಲದವರೆಗೆ ತಾಜಾ ಆಗಿಯೇ ಇರುತ್ತವೆ.

-- ಸುಪ್ರಿಯಾ


Rate this Joke

Rating: 2.4/5 (8 votes cast)

Views: 33785 | Submitted: 2011-09-13

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech