Close X
- KannadaHanigalu Kavana

ಮಿಂಚಾಗಿ ಮಿಸ್ಸು ಬರಲು

ಮಿಂಚಾಗಿ ಮಿಸ್ಸು ಬರಲು

ನಿಂತಲ್ಲಿಯೇ ನಡುಕಾಟ

ಬೆಚ್ಚಗೆರಡೇಟು ಕೊಡಲು

ಕೂತಲ್ಲಿಯೇ ಕುಣಿದಾಟ

ಬಾಯ್ತುಂಬ ಉಗುಳಲು ನನಗೆ

ಎದೆಯಲಿ ಢವಢವ ಗಾನ

ಇನ್ಮುಂದೆ ಮಾಡೆನು ಹುಡುಗಾಟ [ಮಿಂಚಾಗಿ]



ನಾ ನಮ್ಮ ಕ್ಲಾಸಿನ ಹಾಸ್ಯಗಾರನು

ಎಷ್ಟೇ ಉಗಿಸಿಕೊಂಡರೂ ನಗಿಸುತಿರುವೆನು

ನಾ ನಮ್ಮ ಕ್ಲಾಸಿನಾ ಬರಹಗಾರನು

ತಪ್ಪು ಮಾಡಿ ಅಪ್ಪಲಜಿ ಬರೆಯುತಿರುವೆನು

ಕ್ಷಮಿಸಿ ಮಿಸ್ಸ್ ಎನ್ನುತ ಮಾಡಿದ್ದನ್ನೇ ಮಾಡುತಾ

ಹೇಳಿ ಕೇಳಿ ಮೊದಲೇ ಚೂರು ಕಳ್ಳ ನಾನು.

-- RJ ಪ್ರಭಾಕರ ಪ್ರಭು


Rate this Joke

Rating: 3.3/5 (9 votes cast)

Views: 32540 | Submitted: 2010-09-13

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech