Close X
- KannadaHanigalu Kavana

ಸ್ನೇಹ ಸಂಬಂಧ

ಪ್ರಣಯ ಪಕ್ಷಿಗಳಲ್ಲ
ಸೋತ ಪ್ರೇಮಿಗಳೂ ಅಲ್ಲ !
ಒಲವ ಝೇ೦ಕಾರವಿದೆ
ನಮ್ಮೊಳಗೆ
ಹೃದಯ ತುಡಿತವಿದೆ
ಮಾತೊಳಗೆ,
ನಕ್ಕು ನಗಿಸುವ ಮನಸು
ಮಾತು ಮುಗಿಸದ ಕವಿತೆ
ಇನ್ನೇನೋ ಹೇಳುವ
ಕನಸು ನಾಳೆಯಲಿ
ಜೊತೆಯಲೇ ಇರಬೇಕು
ಘಂಟೆ ಘಳಿಗೆ !
ಪ್ರೀತಿಸುವ ಬಗೆಯಿದೆ
ಪ್ರೇಮಿಗಳೂ ಅಲ್ಲ,
ನಲ್ಲ ನಲ್ಲೆಗೂ ಹೆಚ್ಚು
ಆ ಜೀವ ಧಾತನೆ ಬಲ್ಲ ..
ಅದೇ ನಾನು - ನೀನು !
ನೀ ನನ್ನ ಜೀವಕೆ ಗೆಳೆಯ
ನಾ ನಿನ್ನ ಭಾವಕೆ ಗೆಳತಿ..

-- ರಂಜಿತಾ ಹೆಗಡೆ


Rate this Joke

Rating: 3.6/5 (16 votes cast)

Views: 72708 | Submitted: 2009-08-09

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech