Close X
- KannadaHanigalu Kavana

ಆಸೆ

ಇನಿಯಾ ,
ನೀ ಬರುವ ದಾರಿಯಲಿ
ಹೂಮಳೆಯ ಚೆಲ್ಲಿ ,
ಮುತ್ತಿನ ರತ್ನಗಂಬಳಿ
ಹಾಕುವ ಬಯಕೆ ....!

ನಕ್ಕು ನಲಿಯುತಾ
ನೋವ ಮರೆಯುತಾ
ಕೈಯೊಳಗೆ ಕೈ ಇಟ್ಟು
ನಿನ್ನೊಡನೆ ಬರುವಾಸೆ ......
ಗೆಳೆಯಾ ,

ನೀನೊಮ್ಮೆ ನಕ್ಕು ಬಿಡು
ನಾನೊಮ್ಮೆ ನಗಿಸುವೆ
ಆಹಾ !
ಅದು ಸ್ವರ್ಗವೇ
ಧರೆಗಿಳಿದ ಸಮಾಯಾ

ಮುಂಜಾನೆಯ ಮಂಜಿನಲಿ
ಮುತ್ತು ಮಾಲೆಯ ಹೊತ್ತು
ನಿನ್ನಂತರಂಗದಲಿ
ನನ್ನೀ ಮನಸ ಬೆರೆಸಿ
ಅಮೃತದ ಸಿಂಚನ
ಮಾಡುವಾಸೆ ನಲ್ಲಾ ,

ಒಮ್ಮೆ ಮುದ್ದಿಸಿ
ಇನ್ನೊಮ್ಮೆ ಮುತ್ತಿಕ್ಕಿ
ಸುರಿಸು ಪ್ರತಿ ಮಾತಿನಲೂ
ಪ್ರೀತಿಯ ಮಳೆಯ .........
ನಿನ್ನೀ ಸವಿ ಮಾತ ಸವಿಯುತ
ನಿನ್ನೆದೆಯ ಮೇಲೆ
ಕೊನೆ ಉಸಿರೆಳೆವಾಸೆ
ಇನಿಯಾ ,.......................

-- ರಂಜಿತ ಹೆಗ್ಡೆ


Rate this Joke

Rating: 3.1/5 (14 votes cast)

Views: 75888 | Submitted: 2009-05-05

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech