Close X
- KannadaHanigalu Kavana

ಒಂಟಿ ಬದುಕು

ನನ್ನವರೇ ನನಗಿಲ್ಲ
ಈ ಬಾಳ ದಾರಿಯಲಿ
ನೊ೦ದು ಬೆ೦ದಿತು ತನುವು
ಕಣ್ಣೀರ ಧಾರೆಯಲಿ
ಮೂಕವಾಯ್ತು ಮನ
ಬದುಕಿನಾ ಬೇಗೆಯಲಿ
ನನ್ನವರೇ ನನಗಿಲ್ಲ
ಈ ಬಾಳ ದಾರಿಯಲಿ

ನಗುವೆಲ್ಲಾ ಮರೆಯಾಯ್ತು
ಗುಳಿ ಇಡುವ ಕೆನ್ನೆಯಲಿ
ಮಾತು ಮುತ್ತಾಗೇ ಉಳಿದೊಯ್ತು
ಮಾಯದಾ ಲೋಕದಲಿ
ನನ್ನವರೇ ನನಗಿಲ್ಲ
ಈ ಬಾಳ ದಾರಿಯಲಿ

ಕೈ ಹಿಡಿದು ನಡೆಸಲು
ಕ೦ದಮ್ಮ ಇಲ್ಲಾ
ಕಣ್ಣೀರ ಒರೆಸಲು
ಜೊತೆಯಲಿ ಹೆತ್ತಮ್ಮ ಇಲ್ಲ
ನನ್ನವರೇ ನನಗಿಲ್ಲ
ಈ ಬಾಳ ದಾರಿಯಲಿ

ಬಾವನೆಗಳೇ ಬತ್ತೋಯ್ತು
ಬದಿಕೆ೦ಬ ಬಳ್ಳಿಯಲಿ
ಕಣ್ಣೀರು ಮುಗಿದೋಯ್ತು
ಈ ಒ೦ಟಿ ಜೀವಿಯಲಿ
ನನ್ನವರೇ ನನಗಿಲ್ಲ
ಈ ಬಾಳ ದಾರಿಯಲಿ

ಮಾತಿ೦ದ ಮನ ಕುಗ್ಗಿಸುವ
ನರಕದಾ ಜನರಿಲ್ಲಿ
ಕಣ್ಣೀರ ನೋಡಿ
ಖುಷಿ ಪಡುವ ಬಗೆಯಲ್ಲಿ
ಬದುಕೇ ಸಾಕಾಯ್ತು
ಈ ಮೂಕ ಪಯಣದಲಿ
ನನ್ನವರೇ ನನಗಿಲ್ಲ
ಈ ಬಾಳ ದಾರಿಯಲಿ

-- ರಂಜಿತ ಹೆಗ್ಡೆ


Rate this Joke

Rating: 4.4/5 (17 votes cast)

Views: 93059 | Submitted: 2009-05-05

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech