Close X
- KannadaHanigalu Kavana

ನನಸಾಗದ ಕನಸು

ಮುಸ್ಸಂಜೆ ವೇಳೆಯಲಿ
ಆ ಕಡಲ ತೀರದಲಿ
ಒಂಟಿ ಬಂಡೆಯ ಕೆಳಗೆ
ನಿನ್ನೊಟ್ಟಿಗೆ ಮಾತನಾಡುವಸೆ

ನಮ್ಮಿಬ್ಬರ ನೋಡಿ
ನಾಚಿ ಕೆ೦ಪಾದ ಸೂರ್ಯನ
ಮುಳುಗುವ ಮುನ್ನ
ಒಮ್ಮೆ ಹಿಡಿಯುವಾಸೆ

ನಮ್ಮೀ ಒಲವಿನ ಮಾತಿಗೆ
ಅಲೆಗಳು ಸ೦ಗೀತ ಕೊಡಲು
ನಿನ್ನೊ೦ದಿಗೆ ಹೆಜ್ಜೆ ಹಾಕುವಾಸೆ

ಹೂವಾದ ಭಾವಗಳು
ಅಲೆಗಳೆಡೆ ಮುನ್ನುಗ್ಗುತಿರಲು
'ಕೈಯೊಳಗೆ ಕೈ ಇಟ್ಟು
ಒಮ್ಮೆ ನಿನ್ನೆದೆಗೊರಗುವ ಆಸೆ '

ನಿಜ ಹೇಳು ನಲ್ಲಾ , !
ನೀ ಬರುವೆಯಾ ನನ್ನೊಟ್ಟಿಗೆ
ಈ ಸ೦ಜೆ ತ೦ಪಾಗಿಸಲು ?
ನನ್ನೀ ಬಯಕೆ ತೀರಿಸಲು ! ? ?

-- ರಂಜಿತ ಹೆಗ್ಡೆ


Rate this Joke

Rating: 3.7/5 (11 votes cast)

Views: 77177 | Submitted: 2009-05-05

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech