Close X
- KannadaHanigalu Kavana

ಹೊಸ ವರುಷ

ಈ ಹೊಸದಾದ ವರುಷ | ಪ್ರತಿ ಕ್ಷಣ ಪ್ರತಿ ನಿಮಿಷ |
ಎಲ್ಲರ ಬಾಳಲಿ ತರಲಿ ತುಂಬು ಹರುಷ |

ಈ ದಿನದಿಂದ | ಈ ಕ್ಷಣದಿಂದ |
ಮುಖದಲಿ ಸದಾ ಬೀರುತಾ ಸಂತಸ |
ಬದುಕಲಿ ಸದಾ ತೋರುತಾ ಸೊಗಸ |

ಇರುವೆಡೆಯೆಲ್ಲ ನಾವ್ ಹಂಚುತಾ ಉಲ್ಲಾಸ |
ಧರೆಯ ಆಗಿಸೋಣ ನವಿರು ಕಳೆಯ ನಿವಾಸ |
ಅದ ನೋಡಿ ಬೆಕ್ಕಸ ಬೆರಗು ಆಗಲಿ ಆ ಕೈಲಾಸ |

ಹೀಗೆ ಮೂಡಿಬಂದ ಮುಗುಳ್ನಗೆ |
ನಾಂದಿಯಾಗಲಿ ಹೊಸ ಬಗೆಯ ಗೆಲುವಿಗೆ |
ಔಷಧವಾಗಲಿ ಒಳಮನದ ನೋವಿಗೆ |
ಅರಳಿಸಲಿ ಹೊಸಬಯಕೆಗಳ ಮಲ್ಲಿಗೆ ||

-- ಸುನಿಲ್ ಮಲ್ಲೇನಹಳ್ಳಿ


Rate this Joke

Rating: 2.3/5 (7 votes cast)

Views: 43337 | Submitted: 2009-01-06

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech