Close X
- KannadaHanigalu Kavana

ಭಾವನೆ

ಭಾವನೆಗಳನ್ನು ಬಚ್ಚಿಟ್ಟ ಮನಸ್ಸೆ
ನನ್ನೀ ದುಃಖವನು ಹಾಕುವೆನು
ನಿನ್ನ ಮಡಿಲಿಗೆ
ಯಾರಿಗೂ ಕಾಣದ ಹಾಗೆ
ಯಾರಿಗೂ ಕೇಳದ ಹಾಗೆ
ನನ್ನೊಡಲನು ಸುಟ್ಟರು ಸರಿಯೇ
ಕಾಪಾಡು ನನ್ನೀ ದುಃಖವನು ನಿನ್ನೋಡಲಲಿ

ಕಣ್ಣೀರು ಬಾರದಿರಲಿ
ರೆಪ್ಪೆಯಿಂದ ಹೊರಗೆ
ಬಾರದಿರಲಿ ಹತಾಷೆಯ ಕಿಡಿ ಮಾತು
ಮನಸ್ಸಿನಿಂದ ಹೊರಗೆ

ಹಂಚಿಕೋ ಸಂತೋಷವನು ಎಲ್ಲರೊಡನೆ
ಆದರೆ ಬಚ್ಚಿಡು ದುಃಖವನು ನಿನ್ನೀ ಮನಸ್ಸಿನಲ್ಲೆ

ಬಚ್ಚಿಟ್ಟ ದುಃಖ ಕೊಲ್ಲುವುದು
ಮನಸ್ಸನ್ನು ಅಣು ಅಣುವಾಗಿ
ಬಿಚ್ಚಿಟ್ಟ ದುಃಖ ಕೊಲ್ಲುವುದು
ಮನುಷ್ಯನನ್ನು ಸಂಪೂರ್ಣವಾಗಿ

ದ್ವಂದ್ವದಲಿ ಸಿಲುಕಿರುವ ಪ್ರಶ್ನೆಗೆ
ಉತ್ತರವ ನೀನೇ ಹುಡುಕು ಓ ಮನಸ್ಸೆ
ಯಾರೆ ನನ್ನ ಕೈ ಬಿಟ್ಟರು
ನೀ ನನ್ನ ಜೊತೆ ಇರುವೆ ಎಂಬ ನಂಬಿಕೆ ಇದೆ
ಓ ಮನಸ್ಸೆ

ನೀನೂ ನನ್ನಿಂದ ದೂರಾದರೆ
ಬದುಕೇಕೆ ಈ ಭೂಮಿ ಮೇಲೆ

-- ರಮ್ಯಶ್ರೀ


Rate this Joke

Rating: 3.2/5 (10 votes cast)

Views: 98060 | Submitted: 2008-10-17

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech