Close X
3 - KannadaHanigalu Kavana

ಮನಸಿನ ಮಾತು

ಮನಸು ಭಾರವಾದಾಗ
ಮನಸು ಮನಸಲಿಲ್ಲದಿದ್ದಾಗ
ಮನತುಂಬಿ ಬರುವುದು ಕಣ್ಣೀರು ಆಗ
ಕಣ್ಣೀರೆ ಜೊತೆಯಾಯ್ತು ನನಗಾಗ

ಮನಸು ಭಾರವಾದಾಗ
ಮೌನ ನಲಿದಾಡುವುದಾಗ
ಭಾವನೆಗೆ ಮಿಡಿವ ಸ್ನೇಹ ಬೇಕೆನಿಸುವುದಾಗ
ಭಾವನೆಗಳ ಬೆಲೆಯು ತಿಳಿಯುವುದು ಆಗ

ಮನಸು ಭಾರವಾದಾಗ
ಗೆಳೆಯರಾರು ಸಿಗದಾಗ
ಒಂಟಿತನ ಕಾಡುವುದು ನನಗಾಗ
ಗೆಳೆತನದ ಮೌಲ್ಯ ಅರಿಯುವುದು ಆಗ

ಮನಸು ಭಾರವಾದಗ
ಭಾವನೆಗೆ ಬೆಲೆಯು ಬೇಕು ಆಗ
ಆದರೆ ಭಾವನೆಗೆ ಬೆಲೆಯಿಲ್ಲವಾದಾಗ
ಬಾಳುವುದೇಕೆ ಎನಿಸುವುದು ಆಗ

-- ರಮ್ಯಶ್ರೀ


Rate this Joke

Rating: 5.0/5 (1 vote cast)

Views: 145294 | Submitted: 2008-06-17

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech