Close X
- KannadaHanigalu Kavana

ಬಂಗಾರದ ಮನುಷ್ಯನಿಗೆ ಹೃದಯಸ್ಪರ್ಶಿ ನಮನ

ಶಿವಪ್ಪನಿಗೆ ಕಣ್ಣನ್ನು ಕೊಟ್ಟು
ಶಬ್ಧವೇದಿಯ ಜಾಡನ್ನು ಹಿಡಿದು
ದೂರದ ಬೆಟ್ಟ ಏರಿ ಗಿರಿ ಕನ್ಯೆ ರೂಪಕ್ಕೆ ಕರಗಿ
ಗುರಿ ಮರೆತು ದಾರಿ ತಪ್ಪಿದ ಮಗನಾಗಿ
ಪ್ರಾಯಶ್ಚಿತ್ತಕೊಸ್ಕರ ಮನದಲ್ಲಿ ಅನುರಾಗ ಅರಳಿಸಿಕೊಂಡು
ಅದೇ ಕಣ್ಣಲ್ಲಿ ಸಾಧನೆಗೈದು ತ್ರಿಮೂರ್ತಿಗಳ ವರ ಪಡೆದು
ಭಲೇ ಹುಚ್ಚನಾಗಿ ಜಾಣ್ಮೆಯನ್ನು ತೋರಿ
ಬಹದ್ದೂರ್ ಗಂಡಾಗಿ ಶೌರ್ಯತೆಯನ್ನು ಮೆರಸಿ

ಆಕಸ್ಮಿಕವಾಗಿ ಕಸ್ತೂರಿ ನಿವಾಸಕ್ಕೆ ಬಂದು
ಜೀವನ ಚೈತ್ರದಲ್ಲಿ ಮಿಂದು
ಒಡಹುಟ್ಟಿದವರೊಡಗೂಡಿ
ಶ್ರಾವಣ ಬಂತೆಂದು ಹಾಡಿ
ಭಾಗ್ಯದ ಬಾಗಿಲಲ್ಲಿ
ಹೊಸ ಬೆಳಕನು ಚೆಲ್ಲಿ

ನೀತಿ ಇಲ್ಲದ ಸಿರಿವಂತರ ಸಂಪತ್ತಿಗೆ ಸವಾಲ್ ಹಾಕುವ ಛಲದಲ್ಲಿ
ಮೇಯರ್ ಮುತ್ತಣ್ಣನಾಗಿ
ಭಾಗ್ಯದ ಲಕ್ಷ್ಮಿ ಬಾರಮ್ಮನಿಗೆ ಹೃದಯಕೊಟ್ಟು
ಎರಡು ಕನಸನು ಕಂಡು
ಚೂರಿ ಚಿಕ್ಕಣ್ಣನ ವೇ ಧರಿಸಿ
ಅಪರೇನ್ ಡೈಮಂಡ್ ರಾಕೆಟ್‌ನಲ್ಲಿ ಬಾನಂಗಳಕ್ಕೆ ಪ್ರಯಾಣಿಸಿ
ಧ್ರುವತಾರೆಯನು ಹೊತ್ತು ತಂದು ಸಂಭ್ರಮಿಸಿ
ಗಂಧದ ಗುಡಿಯಲಿ ಇರಿಸಿ
ಕಾಮನಬಿಲ್ಲಿನಲ್ಲಿ ಬೆಸೆದು ಉಡುಗೊರೆಯಾನ್ನಾಗಿಸಿ
ಪ್ರೇಮದಕಾಣಿಕೆಯಾಗಿ ನೀಡಿ
ಯಾವ ಕವಿಯು ಬರೆಯಲಾರದ ಗೀತೆಯನ್ನು ಹಾಡಿ

ಕನ್ನಡಿಗರ ಹೃದಯವನ್ನು ಸದ್ದಿಲ್ಲದೆ ಕದ್ದು
ತನ್ನ ಅಭಿನಯದಲ್ಲಿ ಇರಿಸಿ
ಬಂಗಾರದ ಮನುಯೆಂಬ ಹೆಸರನಿಟ್ಟ
ತಾಯಿಗೆ ತಕ್ಕಮಗನಾಗಿ ಬಾಳಿ
ಒಲವನ್ನು ಸಾಕ್ಷಾತ್ಕಾರಿಸಿಕೊಂಡು ಹೋದರು ನಮ್ಮಣ್ಣ ರಾಜಣ್ಣ
ನೆಡೆ ನುಡಿ ನಟನೆಯಲ್ಲಿ ಅವರಿಗೆ ಅವರೇ ಸಾಟಿ
ವಿಧಿಕರೆಗೆ ಓಗೊಟ್ಟು ಅವರು ಹೋದಾಗ ಕಂಬನಿ ಧಾರೆ ಹರಿಸಿದ
ಜೀವಗಳವು ಕೋಟಿ

-- ಸುನಿಲ್ ಮಲ್ಲೇನಹಳ್ಳ


Rate this Joke

Rating: 2.6/5 (10 votes cast)

Views: 41379 | Submitted: 2008-06-14

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech