Close X
Kannada Kavana by Prakash Srinivas - KannadaHanigalu Kavana

ಚಿಂತಿಸದಿರು ಮನವೇ .....!

ನೀರಿನೊಳಗೆ ಅಳುವ ಮೀನಿನ ವೇದನೆಯ ಸಂದೇಶ
ದಡಕ್ಕೆ ಬಂದು ತಲುಪುವುದಿಲ್ಲ !
ಮನವೇ ನೀ ಒಳಗೊಳಗೇ ಅಳುವಾಗ
ಯಾರೂ ಬಂದು ಆ ಕಣ್ಣೀರ ಒರೆಸುವುದಿಲ್ಲ!

ನಿನ್ನ ಕಣ್ಣೀರಿನ ಒಂದೊಂದು ಹನಿಗೂ
ಕಾರಣವ ಹುಡುಕುತ್ತಾ ಕೂರದಿರು!
ಮನವೇ ನಿನಗೆ ನೀನೇ ಎಂದು ಇನ್ನಾದರೂ ತಿಳಿದಿರು !

ಬೀಳುವ ಮಳೆ ಹನಿಗಳು ಮೋಡಗಳ ಕಣ್ಣೀರ!?
ಇಲ್ಲ ನೇಸರನ ಬೆವರ!?
ಎನ್ನನ್ನೂ ಕೇಳದೆ ತನ್ನೊಳಗೆ ಎಲ್ಲವನ್ನು
ಬಚ್ಚಿಟ್ಟು ಕೊಳ್ಳುವುದಿಲ್ಲವೇ ಸಾಗರ!

ದುಃಖವ ಹೇಳಲು ಒಬ್ಬರು,
ಖುಷಿಯ ಹೇಳಲು ಮತ್ತೊಬ್ಬರು ಬೇಕು ಎಂದು
ನೀ ಬಯಸುವ ಮುನ್ನ!
ನಿನ್ನೊಳಗೆ ನಿನ್ನನ್ನೇ ನೆನದು
ಒಮ್ಮೆ ಮೌನವಾಗು ಮನವೇ!

-- ಪ್ರಕಾಶ್ ಶ್ರೀನಿವಾಸ್


Rate this Joke

Rating: 0.0/5 (0 votes cast)

Views: 69978 | Submitted: 2012-04-04

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech