Close X
A Kannada Poem about love and life - KannadaHanigalu Kavana

ನನ್ನವಳೇ ನನ್ನ ಮರೆತದೋ ಯಾಕೋ ?

ನನ್ನವಳೇ ನನ್ನ ಮರೆತದೋ ಯಾಕೋ ?
ಎಣಿಸಿ ಬಂದೆ ನಿನ್ನ ನೆನಪುಗಳ ನಾನು..
ಹೃದಯವ ಅಂದು ಕೆತ್ತಿದವಳು ನೀನೆ..
ನೆಮ್ಮದಿಯನ್ನು ಇಂದು ದೋಚಿದವಳು ನೀನೆ...

ಪ್ರಿಯೆ ನಮ್ಮ ಪ್ರೀತಿ ಒಂದಾಗೋ ಸಮಯ ಬಂದ್ರೆ..
ನನಗಾಗಿ ನೀನು ಏನು ಮಾಡ್ತೀಯಾ ಅಂತ ನೀ ಅಂದ್ರೆ..
ನೀ ಕೆತ್ತಿದ ಈ ಹೃದಯವ ನಿನಗೊಪ್ಪಿಸುವೆ..
ನಿನಗಾಗಿ ಇರುವ ಎದೆಯಲಿ ನಿನ್ನ ಬಚ್ಚಿ ನಾ ಪ್ರೀತಿಸುವೆ..

ಪ್ರತಿ ಜನ್ಮಕ್ಕಾಗಿ ನಾ ಕಾಯಲಾರೆ..
ಈಗಿನ ಜನ್ಮದಿ ನಾ ನಿನ್ನ ಬಿಡಲಾರೆ..
ಎಲ್ಲ ಜನ್ಮದ ಪ್ರೀತಿಯ ಈ ಜನ್ಮದಿ ಕೊಡದೇ ನಾ ಸಾಯಲಾರೆ..
ಒಂದು ಕ್ಷಣವೂ ನಾ ಮರೆಯಲಾರೆ..
ನಿನ್ನ ಒರಟು ಜಗದಿ ನಾ ಬಾಳಲಾರೆ...

ಕಾವಲಾಗಿ ನಿಲ್ಲುವೆ ಈ ಸಾಗರದಿ,
ಅಂದು ಬರೆದ ನಮ್ಮೆಸೆರ ರಕ್ಷಿಸಲು...
ಒಂಟಿಯಾಗಿಯೇ ಕಾಯುವೆ ಈ ರಸ್ತೆಯಲಿ,
ನಾವು ಸೇರಿದ ಆ ಕ್ಷಣವ ಮರುಕಳಿಸಲು...

ಕಾಯುವೆನು !! ಇಂದು ನಾ ಕಾಯುವೆನು !!
ನಾ ಕೊನೆಯಾಗುವ ಮುಂಚೆಯಾದರೂ ನಿನ್ನ ಸೇರುವೆನು !!
ಇದೇ ಪ್ರೀತಿಯಲಿ !! ನಿನಗಾಗಿ ಇದೇ ಪ್ರೀತಿಯಲಿ !!

-- ರಿತೀಶ್ (ಕೃಷ್ಣ ಕುಮಾರ್. ಎಂ)


Rate this Joke

Rating: 3.3/5 (4 votes cast)

Views: 21352 | Submitted: 2012-03-19

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech