Close X
A kannada poem - KannadaHanigalu Kavana

ಕಾಣದ ಈ ಪ್ರೀತಿಲಿ ನೋವೆನೇ ಈ ಮನಸಲಿ

ಕಾಣದ ಈ ಪ್ರೀತಿಲಿ ನೋವೆನೇ ಈ ಮನಸಲಿ
ಬಾಡಿದೆ ಮನವೆಲ್ಲ ಬಾರೆ ನೀ ಬೇಗ ಓ ಪ್ರಿಯೆ
ಆರದೇ ಹೋಗಿದೆ ಕಣ್ಣಿನ ಈ ಹನಿಗಳು
ಬೇಗ ನೀ ಒರೆಸೆಲೆ, ಕರೆದಿದೆ ನಿನ್ನ ಪ್ರೀತಿಯ
ದೂರದಿ ಕೇಳದೇ ಓ ಪ್ರಿಯೆ

ಸಾವಲಿ ನಾ ಬಿದ್ದಿಹೆ, ನಿನ್ನ ಪ್ರೀತಿಯ ಮನ ಬಯಸಿದೆ
ಗೆಲ್ಲಲು ಈ ಸಾವನೂ ನೀ ಬಾರೆ..
ಉಸಿರಲು ತೇವ ತುಂಬಿದೆ, ದುಖವೇ ನನ್ನ ಅಪ್ಪಿದೆ
ಬಾರೆ ನೀ ನಗೂವಾಗಿ ಓ ಪ್ರಿಯೆ

ಕನಸಲೂ ನೀ ಬಂದಿದೆ, ನನಸಲೂ ನಿನ್ನ ಕಾಣುವೆ
ಎದೆಯಲ್ಲಿ ನಿನ್ನೆಸರೇ ಓ ಪ್ರಿಯೆ
ನೋಡು ಬಾ ಹೇಳು ಬಾ ನಾ ಬೇಕೆಂದು    
ಒಬ್ಬನೇ ನಾ ಬಂದಿಹೆ, ಬಾಚಿ ನಿನ್ನನು ಕರೆದಿಹೆ
ಕೊರಗಿದೆ ನಾ ಸೊರಗಿದೆ, ಬಾರೆ ಬೇಗ ನೀ ಪ್ರಿಯೆ

ಕನ್ನಡಿಯಲಿ ನಾ ನಿಂತಿಹೆ, ನಿನ್ನ ರೂಪವೇ ಕಾಣುತಿದೆ
ನನ್ನ ಕೊಲ್ಲುತಿದೆ ಏಕೆ ಹೀಗೆ, ನೀ ಹೇಳೆ ಓ ಪ್ರಿಯೆ
ನೂರಾರು ಮಾತು ನನ್ನಿಂದ, ಕೇಳೆಲೇ ನಿನ್ನ ಮನದಿಂದ,
ಕೂಗಿದೆ ನಾ ಹಾಡಿದೆ, ನೀ ಕೇಳೆ ...

-- ರಿತೀಶ್ (ಕೃಷ್ಣ ಕುಮಾರ್. ಎಂ)


Rate this Joke

Rating: 5.0/5 (1 vote cast)

Views: 21704 | Submitted: 2012-03-19

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech