Close X
Kannada Poem by Ritish Kumar - KannadaHanigalu Kavana

ಉಸಿರೇ ನಾನಿಂದು ನಿನ್ನ ಹುಡುಕುತ್ತಿದ್ದೆ,

ಉಸಿರೇ ನಾನಿಂದು ನಿನ್ನ ಹುಡುಕುತ್ತಿದ್ದೆ,
ಪ್ರೀತಿ ಉಸಿರು ನಿನ್ನನ್ನೇ ಹುಡುಕುತಿದೆ,
ಉಸಿರಾಗಿ ಅಂದು ಬಂದೆ ನಾ ನಿನ್ನ ದೂರಿದೆ,
ಉಸಿರಾಗಿ ನಿನ್ನ ನಾ ಇಂದು ಕಂಡೆ...
ಪ್ರಿಯೆ ಈಗ ನೀ ಸಿಗದೆ ಹುಡುಕುತ ನಾನು ನಿಂತೆ...
ದಿನಗಳು ಉರುಳಿ, ನೋವೆಲ್ಲ ಸುಖವಾಗಿದೆ...

ನೂರಾರು ಮಾತಲಿ ನೀ ಹೇಳಿದಾಗ ಈ ಪ್ರೀತಿಯೂ ತಿಳಿಯಲಿಲ್ಲ..
ಇಂದು ನಿನ್ನಾಯ ಮೌನವೂ ಸುಮ್ಮನೇ ಎನ್ನ ಬಿಡುತ್ತಿಲ್ಲ..
ಬೇಕೆಂದಿದೆ, ಸೇರೆಂದಿದೆ ಬಾ ಬಾರೆ ಒಲವೆ ನೀ ಇಂದು..
ದೂರಲಾರೆ ನಿನ್ನನು ನಾ ಇಂದು ಎಂದೆಂದೂ...
ಇದೇನಾ ಪ್ರೀತಿಯೂ, ಮರ್ಮಾವೋ ಕೇಳಿದೆ ಮನ ನನ್ನನ್ನಿಂದು..

ನೀನಂದು ತಿಳಿಸಿದ ಪ್ರೀತಿಯೂ..
ಇಂದು ಅರಳಿದೆ ಈ ಉಸಿರಲಿ ಓ ಒಲವೆ..
ಬಾಡುವ ಮುಂಚೆ ನಿನ್ನ ಕೇಳಿದೆ..
ಸೇರುವ ಹಂಬಲದಿ ಕಾಯುತ ಓ ಒಲವೆ...
ಎನ್ನ ಮನ್ನಿಸು ಆಲಂಗಿಸು ಬಾ ಬಾರೆ ಚೆಲುವೆ ನೀ ಇಂದು...

-- ರಿತೀಶ್ (ಕೃಷ್ಣ ಕುಮಾರ್. ಎಂ)


Rate this Joke

Rating: 0.0/5 (0 votes cast)

Views: 21031 | Submitted: 2012-03-19

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech