Close X
A Kannada Poem by Ritish Kumar - KannadaHanigalu Kavana

ಸಂಬಂದ ಕಳೆದರು, ಕನಸ ಮರೆತರು..

ಸಂಬಂದ ಕಳೆದರು, ಕನಸ ಮರೆತರು..
ನೆನಪುಗಳು ಅಳಿಯುವುದಿಲ್ಲ, ಒಪ್ಪಿಕೊ ಹೆಣ್ಣೇ..
ಸೂರ್ಯನು ಮರೆಯಾದರೂ, ಚಂದ್ರನು ಬರುವನು..
ಕತ್ತಲು ಬರುವುದು, ಎಂದಿಗೂ ಇದು ನಿಜವೇ ಹೆಣ್ಣೇ...

ಪ್ರಿಯೆಯೇ ಎನ್ನ ಮರೆತದೋ ಯಾಕೋ ?, ಮೊದಲ ನೋವಿದು ಎನಗಿದು ಸಾಕೋ..
ಈ ಬಾಳಿನ ಗಿಡದಿ ಹೂಗಳು ನೀನೆ, ಇದನ್ನು ನೀ ಮರೆತದೋ ಯಾಕೋ..
ಈ ಪ್ರಾಣ ಹೋಗುವ ಮುಂಚೆ.. ನೀ ಎನ್ನ ಕಂಡರು ಸಾಕು..
ಆ ಕ್ಷಣವೇ ನಗುತಲೇ ಹೊರಡುವೆ ಹೆಣ್ಣೇ ಹೆಣ್ಣೇ..

ಮನ ಬಯಸಿದೆ ನಿನ್ನ ಸೇರಲು, ಎದೆ ಬಯಸಿದೆ ನಿನ್ನ ಕಾಣಲು..
ಕಣ್ಣೀರು ಬಯಸಿದೆ ನಿನ್ನ ಕೈ ಸೇರಲು, ನೀ ಎನ್ನ ಕರೆದರೆ ಸಾಕು..
ಓಡಿ ಬರುವೆನು ನಿನ್ನ ಸೇರಲು, ನಿನ್ನ ಮಡಿಲಲಿ ನಾ ಮಲಗಲು..
ಎನ್ನ ಉಸಿರನು ನಿನ್ನಲ್ಲೆ ಸೇರಿಸಲು..

ಎನ್ನ ಪ್ರೀತಿಯೂ ಕಮ್ಮಿ ಇಲ್ಲ, ಯಾರ ಪ್ರೀತಿಯೂ ಸುಳ್ಳು ಅಲ್ಲ..
ನಿನ್ನ ಹಾಗೆ ಮೋಡಿ ಮಾಡಲು ಇದುವರೆಗೂ ಯಾರು ಬಂದಿಲ್ಲ ಹೆಣ್ಣೇ.... !!!
ನೀ ಎನ್ನ ಬಿಟ್ಟು ಎಲ್ಲೆ ಹೋದರು ಈ ಮನ ನಿನ್ನಲ್ಲೇ ಬಾಳುವುದು ಹೆಣ್ಣೇ ಹೆಣ್ಣೇ... !!!!

-- ರಿತೀಶ್ ಕುಮಾರ್ ಎಮ್.


Rate this Joke

Rating: 4.0/5 (1 vote cast)

Views: 19948 | Submitted: 2012-03-19

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech