Close X
A kannada poem by prakash srinivas. - KannadaHanigalu Kavana

ಮೋಡ ಕವಿದಿದೆ ಗೆಳತಿ!

ಮೋಡ ಕವಿದಿದೆ ಗೆಳತಿ 
ನೆನಪಿದೆಯ ನಿನಗೆ ,
ಎಲ್ಲಿ ಮಳೆ ಬಂದು ಬಿಡುತ್ತದೋ ಎಂದು 
ನಮ್ಮ ಮನೆಯಲ್ಲೇ ಇರುತ್ತಿದ್ದೆ !
ನೀ ನನ್ನ ಜೊತೆ ಇರಲೆಂದೇ ಮಳೆಯೂ ಸಹ 
ಬಿಟ್ಟು ಬಿಟ್ಟು ಬರುತ್ತಿತ್ತು
ಮಣ್ಣಿನ ವಾಸನೆ ..
ಹೇಳಲಾಗದ ಕಲ್ಪನೆ!
ನಿನ್ನ ಬಳಿ ಇದ್ದ ಪುಸ್ತಕದಿಂದ
ಹಾಳೆಗಳನ್ನು ಹರಿದು 
ಅದರ ಮೇಲೆ ನಿನ್ನ ನನ್ನ ಹೆಸರ ಬರೆದು
ಯಾರು ಗೆಲ್ಲುತ್ತಾರೆ ನೋಡು ಎಂದು 
ದೋಣಿ ಮಾಡಿ ಬಿಟ್ಟು 
ನಲಿಯುತ್ತಿದ್ದೆಯಲ್ಲ ಗೆಳತಿ 
ಮಗುವಿನ ರೀತಿ !
ನಿನ್ನ ಸ್ಪರ್ಶಿಸಲೆಂದೇ ಮಳೆಹನಿಗಳಲ್ಲಿ 
ಯುದ್ಧವೇ ನಡೆಯುತ್ತಿತ್ತು !
ಮಳೆಯ ಜೊತೆಯಲ್ಲೇ ತಣ್ಣನೆಯ ಗಾಳಿಯ ಆಟ!
ಈಗ ಮತ್ತದೇ 
ಮೋಡ ಕವಿದಿದೆ ಗೆಳತಿ ,
ಮಣ್ಣಿನ ವಾಸನೆಯೊಂದಿಗೆ ಮಳೆಯ ನರ್ತನ !
ನಿನ್ನ ನೆನಪಿನೊಂದಿಗೆ ಈ ನನ್ನ ಕವನ !

-- ಪ್ರಕಾಶ್ ಶ್ರೀನಿವಾಸ್


Rate this Joke

Rating: 4.5/5 (2 votes cast)

Views: 86096 | Submitted: 2012-02-14

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech