Close X
A kannada poem on true friendship by prakash srinivas - KannadaHanigalu Kavana

ಗೆಳತಿ ಇದು ನಿನಗಾಗಿ !

ಕಾರಣಗಳು ಇಲ್ಲದೆ ಬೇರೆಯಾಗಬಹುದು 
ಕಾರಣ ಹೇಳಿನೂ ನಾವು ದೂರಾಗಬಹುದು! 
ನಿನ್ನ ಹಾಗೆ ಮುಖವ ಕಂಡಾಗ 
ನಿನ್ನ ನೆನಪು ಬರದೆ ಇರಲಾಗದು !
 
ನನ್ನ ಕನಸುಗಳೆಲ್ಲ ನಿನಗೆ ಹೇಳಲಾ 
ಹೊಸದೊಂದು ಕವಿತೆ ಹೇಳಲಾ
ನೀ ಜೊತೆ ಇದ್ದರೆ 
ಬದುಕು ಇನ್ನೂ ಸುಂದರ !
 
ಖುಷಿಯ ಹೇಳುವೆ ಜೊತೆಯಲ್ಲೇ 
ನನ್ನ ದುಃಖವ ಹೇಳುವೆ
ನನಗೆ ನೋವಾದರೆ 
ನಿನ್ನ ತೋಳೆ ಆಸರೆ !
  
ಬಂಧನಗಳಲ್ಲಿ ನೀ ಬಂಧಿಯಾದರೂ
ಗಂಡ,ಅತ್ತೆ,ಮಕ್ಕಳು ಎನ್ನುವ ಸಂಬಂಧಗಳು
ನೂರಾರು ಬಂದರೂ!
ಆಗಲೂ 
ನಾವು ಗೆಳೆಯರು !
 
ಏನೇ ಬದಲಾದರೂ
ನಮ್ಮ ಸ್ನೇಹ ಬದಲಾಗದು !

-- ಪ್ರಕಾಶ್ ಶ್ರೀನಿವಾಸ್


Rate this Joke

Rating: 3.0/5 (2 votes cast)

Views: 76838 | Submitted: 2012-02-10

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech