Close X
A Kannada poem by prakash srinivas - KannadaHanigalu Kavana

ಅಗಲಿಕೆ!

ಅಗಲಿಕೆಯ ನೆನದು ಚಿಂತಿಸದಿರು

ನಿನ್ನ ಕಣ್ಣ ರೆಪ್ಪೆಯ ಅಗಲಿಕೆಯಲ್ಲೇ

ಈ ಸುಂದರ ಭೂಮಿ ಕಾಣುವುದು!

ಗರ್ಭದ ಅಗಲಿಕೆಯಲ್ಲೇ ನಾವು

ತಾಯಿಯ ಮುಖವ ನೋಡುವುದು!

ಬೀಜದ ಅಗಲಿಕೆಯಲ್ಲೇ

ಮರ ನೆರಳಾಗುವುದು!

ತುಟಿಗಳ ಅಗಲಿಕೆಯಲ್ಲೇ

ಮನದ ಮಾತು ಹೊರಬರುವುದು!

ಕೊಳಲಿನಿಂದ ಹೊಮ್ಮುವ

ಗಾಳಿಯೇ ರಾಗವಾಗುವುದು!

-- ಪ್ರಕಾಶ್ ಶ್ರೀನಿವಾಸ್


Rate this Joke

Rating: 0.0/5 (0 votes cast)

Views: 79329 | Submitted: 2012-02-07

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech