Close X
A Kannada poem on lovers for valentine day special. - KannadaHanigalu Kavana

ತೇವ ತುಂಬಿದೆ ನನ್ನ ಉಸಿರಲಿ..

ತೇವ ತುಂಬಿದೆ ನನ್ನ ಉಸಿರಲಿ..
ಈ ಜೀವ ಸೇರಿದೆ ನಿನ್ನ ಹೆಸರಲಿ..
ಪ್ರೀತಿ ಹುಟ್ಟಿತು ಅಂದು ಈ ಚಿಕ್ಕ ಮನಸಲಿ..
ಬೂದಿಯಾಗಿದೆ ಈ ಹೃದಯ ಇಂದು ವಿರಹ ಬೆಂಕಿಯಲಿ..

ನಿದ್ರೆಯಲ್ಲಿಯೂ ನಾ ಕಣ್ಣಿರಾಕಿದೆ..
ನಾ ಎದುರು ನಿಂತರು ನೀ ಸೇರದೇ ಹೋಗಿದೆ..
ಈ ಪ್ರೀತಿ ಬದಿಯಲಿ ಮನ ಬಿದ್ದು ಎದ್ಡಿದೆ..
ನಿನ್ನ ನೆರಳನು ಮುಟ್ಟಿ ಎದೆ ಬಡಿತವ ಸಾಗಿಸಿದೆ..

ಪ್ರೀತಿಯಲಿ ನಾ ಕುರುಡನಾದೆನು..
ಕತ್ತಲಲ್ಲಿ ನಿನ್ನ ನೆರಳನು ಹುಡುಕುವೆನು..
ನಿನ್ನ ಕಣ್ಮರೆಯಿಂದ ಈ ಮನ ಬರಿದಾಗಿದೆ..
ನಿನ್ನ ಸೇರುವ ಹಂಬಲದಿ ಪ್ರತೀ ಕ್ಷಣವು ಅಸುನೀಗಿದೆ...
ಕಾಯುತ್ತಲೇ ನಿನಗಾಗಿ....

-- ರಿತೀಶ್ (ಕೃಷ್ಣ ಕುಮಾರ್. ಎಂ)


Rate this Joke

Rating: 1.0/5 (2 votes cast)

Views: 23241 | Submitted: 2012-02-07

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech