Close X
A kannada poem. - KannadaHanigalu Kavana

ಲವ್ವಾಗಿದೆ... ನಾ ಹಾರಾಡಿದೆ

ಲವ್ವಾಗಿದೆ...
ನಾ ಹಾರಾಡಿದೆ..
ನಿನ್ನ ಕಂಡಾಗ ಯಾಕೋ ನಗು ಮೂಡಿದೆ..
ಕಣ್ ಮುಚ್ಚಿದೆ, ನಾನು ಕಣ್ ತೆರೆದಿದೆ..
ಅದೇನು ವಿಷ್ಮಯ ನಾನು ನಿನ್ನೇ ನೋಡಿದೆ...
ನಾ ಹಾಡಿದೆ, ತಿಳಿಯದೇ ಕವಿಯಾಗಿದೆ...
ಪ್ರತಿ ಕವಿತೆಗೆ ನೀನೆ ಸ್ಪೂರ್ತಿಯಾಗಿದೆ...

ಒದ್ದಾಡಿದೆ, ಹುಡುಕಾಡಿದೆ...
ನಿನ್ನ ಕಾಣದಿದ್ದರೂ ಮನದಲೆ ಮುದ್ದಾಡಿದೆ..
ಮೌನವಾಗಿ ನೀ ಇದ್ದರು ನಿನ್ನೊಡನೆ ನಾ ಮಾತಡಿದೇ...
ಈ ನನ್ನ ಪ್ರೀತಿಯ ನಿನಗೆ ನಾ ನೀಡಿದೆ..

ಪ್ರತೀ ಕ್ಷಣವೂ ನಾ ನಿನ್ನ ಸೇರುವೆ...
ನನ್ನ ನೆರಳಲು ನಾ ನಿನ್ನನ್ನೇ ಕಾಣುವೆ...
ನನ್ನ ಎದೆ ಬಡಿತವೂ ನಿನ್ನ ಕೇಳಿದೆ...
ನಿನ್ನ ನೆನೆದು ಅದು ಹುಡುಕಾಡಿದೆ...
ಸೇರಲಾರೆಯ ನೀ ನನ್ನ ತೋಳನು..
ಕೇಳಲಾರೆಯಾ ಈ ಹೃದಯ ಬಡಿತವನು...

ನೋವನು ನಿನಗೆ ನಾ ನೀಡೆನು..
ನಿನ್ನ ನೋವಿಗೆ ನಾ ಎದೆ ಕೊಡುವೆನು...
ಜಗದಲ್ಲಿ ನಿನಗೆಂದು ನಾ ಇರುವೆನು..
ನೀ ಕಣ್ಮುಚ್ಚುವಾಗ ನಾ ಸಾಯುವೇನು...
ಅಲ್ಲೂ ನಿನ್ನ ಸೇರುವೆನು....
ಎಂದಿಗೂ ನನ್ನದು ನಿಜ ಪ್ರೀತಿಯೂ..
ಬದಲಾಗದು ನಾ ಪ್ರೀತಿಸುವ ಈ ರೀತಿಯೂ....

-- ರಿತೀಶ್ (ಕೃಷ್ಣ ಕುಮಾರ್. ಎಂ)


Rate this Joke

Rating: 4.0/5 (1 vote cast)

Views: 21634 | Submitted: 2012-02-07

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech