Close X
A valentine day special poem in kannada - KannadaHanigalu Kavana

ಜೀವಕಳೆದೆ ಅದು ನಿನ್ನಲ್ಲೇನೋ

ಜೀವಕಳೆದೆ ಅದು ನಿನ್ನಲ್ಲೇನೋ...
ಇದು ನನ್ನ ಕನಸೋ ? ನನಸೋ ?
ಮತ್ತೆ ನಿನ್ನ ನೋಡೊ ಆಸೆ ಈ ಮನಕೆ..
ನೀನು ಬೇಕು ಈ ಮನಕೆ ಈ ಮನಕೆ..

ಪ್ರೀತಿ ಬಂದು ಈ ಮನಸಲಿ..
ನಾನೇ ಇಲ್ಲ ಇಂದು ನನ್ನಲ್ಲೇ..
ನೀನೆ ಇರುವೆ ನನ್ನಲ್ಲೆಲ್ಲ..

ಪ್ರೀತಿ ಉಸಿರು ನೀನೆ ನನಗೆ..
ನಿನ್ನ ಪ್ರೀತಿಯೇ ಸಾಂತ್ವನ ಎನಗೆ..
ನಿನ್ನ ಕಾಣುವ ದಿನಕೆ ನಾ ಕಾದೆ..
ಒಬ್ಬನೆ ಇಂದು ಅಳುತ್ತ ಇದ್ದೆ..

ಕನಸು ಮುಗಿದು ಕಣ್ ಬಿಡುವವರೆಗೂ ನಿನ್ನ ನೋಡುವ ಇಂಗಿತ ಈ ಮನಸಿಗಿದೆ..
ಮನ ಬಯಸಿದ ಮೊದ ಮೊದಲ ಪ್ರೀತಿ ನೀನೆ ಸಖಿ..

ನೆನ್ನೆದೆಯಲಿ ಉಕ್ಕಿ ಹರಿದಿದೆ ಪ್ರೀತಿ ನದಿಯು..
ನಿನ್ನಲ್ಲಿ ಮುಳುಗಿ ಎದ್ಡಿದೆ ಈ ಎದೆ ಬಡಿತವೂ..
ಎಲ್ಲೆಲ್ಲೂ ನಿನ್ನನ್ನೆ ಕಂಡಿದೆ ಈ ನಯನವೂ..
ಕನಸಲೂ ನಿನ್ನ ಸೇರುವ ನೆನಪಲೆ ಕಳೆದಿದೆ ಈ ಜೀವವೂ..

-- ರಿತೀಶ್ (ಕೃಷ್ಣ ಕುಮಾರ್. ಎಂ)


Rate this Joke

Rating: 5.0/5 (1 vote cast)

Views: 23941 | Submitted: 2012-02-07

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech