Close X
A Kannada Poem by ritish (krishna kumar m) - KannadaHanigalu Kavana

ಕಳೆದರು ಆ ದಿನದ ಆ ಕ್ಷಣ

ಕಳೆದರು ಆ ದಿನದ ಆ ಕ್ಷಣ..
ಇಂದು ಕೂಡ ನಿನ್ನ ಎದುರು ನೋಡುತಿದೆ ಈ ನನ್ನ ಮನ..

ಮನದಲ್ಲಿ ನೂರಾರು ಮಾತಿತ್ತು..
ನಿನ್ನಲ್ಲಿ ಹೇಳಲು ಕಾಯುತ್ತಿತ್ತು..
ನನ್ನೆದುರು ನೀ ಬಂದ ಕ್ಷಣ ಈ ಎದೆಯೂ ಮೌನಿಯಾಗಿತ್ತು..
ನೀ ಹೋದ ಕ್ಷಣ ಪ್ರೀತಿ ಮೋಡ ಕವಿದು..
ಕಣ್ಣೀರ ಹನಿ ಮಳೆಯಾಗಿ ಧರೆಯ ತಾಗಿತ್ತು..

ತಿರುಗಿ ನೀ ನನ್ನ ಕಂಡರು..
ಕಣ್ಣ ಹನಿ ನಿನಗೆ ತಿಳಿಯಲಿಲ್ಲ...
ಧರೆಯಲಿ ಆದ ಕಲೆಯನ್ನು ನೀ ನೋಡಲಿಲ್ಲ..
ತಪ್ಪು ಯಾರದೂ ?
ಮೌನಿಯಾದ ಈ ಪ್ರೀತಿಯದೆ ? ಇಲ್ಲ ಎನ್ನ ಮೌನಿಯಾಗಿಸಿದ ನಿನ್ನ ಕಣ್ಣಿನದೆ ?

ನಿನಗೆಂದು ನಾ ತಂದ..
ಗುಲಾಬಿಯೂ ಬಾಡಿ ಹೋಗಿದೆ..
ಧರೆಯ ಮೇಲಾದ ಕಲೆಯ ಪಕ್ಕ ಅದು ಅಸುನೀಗಿದೆ..
ಮೌನದಲು ಈ ಪ್ರೀತಿ ನಿನ್ನ ಕೂಗಿದೆ...
ನನ್ನ ಒಪ್ಪಿಕೋ ಇಲ್ಲ ಕಾಲವಾದ ಬಳಿಕವಾದರೂ ಎನ್ನ ತಬ್ಬಿಕೋ...

-- ರಿತೀಶ್ (ಕೃಷ್ಣ ಕುಮಾರ್. ಎಂ)


Rate this Joke

Rating: 3.5/5 (2 votes cast)

Views: 22300 | Submitted: 2012-02-07

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech