Close X
A Kannada Poetry by Prakash Srinivas - KannadaHanigalu Kavana

ಮದುವೆ ಅಂದರೆ !

ಎರಡು ದೇಹ ಒಂದೇ ಜೀವ ಆಗಬೇಕು 
ಕೋಪದಲ್ಲಿನ ಪ್ರೀತಿ!
ಮೌನದಲ್ಲಿನ ಮಾತು
ನಗುವಿನ ಹಿಂದಿನ ನೋವು ಹೇಳದೆ ಅರ್ಥ ಆಗಬೇಕು 
ನಾ ಎಲೆ ಹಾಕಿದರೆ ಅವಳು ಬಡಿಸಬೇಕು 
ನಾವು ಒಂದೇ ಎಲೆಯಲ್ಲಿ ಊಟ ಮಾಡಬೇಕು!
ಕೋಪ ಮಾಡಿಕೊಳ್ಳಬೇಕು 
ನಾನು ಸಮಾಧಾನದ ಮಾತು ಹೇಳಿದೊಡನೆ
ಶಾಂತವಾಗಬೇಕು!
ನನಗಾಗಿ ಅವಳು 
ಅವಳಿಗಾಗಿ ನಾನು ಬಾಳಬೇಕು !
ಬದುಕಿನಲ್ಲಿ ಎಲ್ಲದರಲ್ಲೂ ಒಂದಾಗಿರಬೇಕು!
ಕತ್ತಲ ಬದುಕಿನಲ್ಲಿ ನಮ್ಮ ನಗುವೇ ಬೆಳಕಾಗಿರಬೇಕು!
ಜೀವನದಲ್ಲಿ ಪ್ರತಿಯೊಂದಕ್ಕ್ಕೂ ಹೊಂದಾಣಿಕೆ ಬೇಕು 
ಇಬ್ಬರೂ ಸಹ ಯಾರ ಮುಂದೆಯೂ 
ಒಬ್ಬರನೊಬ್ಬರು ಬಿಟ್ಟು ಕೊಡದಿರಬೇಕು !
ಕಷ್ಟ, ಸುಖವನ್ನು ಸಮವಾಗಿ ಹಂಚ್ಚಿಕೊಳ್ಳಬೇಕು!
ಒಬ್ಬರಿಗೊಬ್ಬರು ಸಣ್ಣ ಪುಟ್ಟ ಸಹಾಯ ಮಾಡಬೇಕು !
ತಾವು ಏನೇ ನಿರ್ಧಾರ ಮಾಡಿದರೂ 
ಅದು ಮನೆಯ ಹಿರಿಯರಿಗೂ ತಿಳಿಸಬೇಕು 
ಎನ್ನುವ ಅರಿವಿರಬೇಕು !
ನನಗೆ ನೀನು 
ನಿನಗೆ ನಾನು ಅನ್ನೋ ಮಾತು ಮನಸ್ಸಿನಲ್ಲಿದ್ದರೆ ಸಾಕು
ಎಂದೂ ಮಧುರ ಮದುವೆಯ ಬದುಕು !!!

-- ಪ್ರಕಾಶ್ ಶ್ರೀನಿವಾಸ್


Rate this Joke

Rating: 4.4/5 (5 votes cast)

Views: 100383 | Submitted: 2012-02-04

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech