Close X
- KannadaHanigalu Jokes

ಮೋಸಹೋದ ಹೆಣ್ಣಿನ(ಆತ್ಮದ) ಹಾಡು

ಕಾದಿಹೆ ಚೆಲುವ ನಿನಗಾಗಿ|ಎಲ್ಲಿರುವೆ ಗೆಳೆಯ ನೀ ಮರೆಯಾಗಿ
ಹುಡುಕುತಲಿರುವೆ ನಿನಗಾಗಿ ಬಾ ಸೇರೋಣ ಒಂದಾಗಿ
ಗೆಳೆಯಾ......ಇನಿಯಾ...... ||ಪ||

ನಂಬಿಸಿ ನನ್ನ ವಂಚಿಸಬಹುದೇನೋ
ಸೂತ್ರವು ಹರಿದ ಪಟನಾ ಆದೆನೋ
ಪಾತ್ರವ ಮುಗಿಸು ಬರುವೆ ನಾನಿನ್ನು ||ಪ||

ತುಂಗೆಯ ತೀರದಿ ಹೊಂಗೆಯ ನೆರಳಲಿ
ಮಂಗನ ತೆರದಲಿ ಮುದ್ದಿಸಬಹುದೇನೋ
ತಾಳಿ ಕಟ್ಟುವ ಮುನ್ನ ಎನ್ನ ತಾಯಿಯ ಮಾಡಬಹುದೇನೋ || ಕಾ||

ಮಾವಿನ ಮರದಡಿ ನೀ ಮಾಡಿದ ಬಾಷೆಯ ಮರೆತೇನೋ
ಮಾವಿನ ಹಣ್ಣಿನ ಆಸೆಯ ತಿಳಿಸಲು ಕೂಸನೆ ತೆಗೆಸೆಂದೇನೋ
ಮನುಷ್ಯತ್ವ ವಿರದ ಮೃಗದಂತಾದೇನೋ ||ಕಾ||

ಸ್ನೇಹದ ಸಂಚಲಿ ಮೋಹದ ಬಲೆಬೀಸಿ ನನ್ನ ಹಿಡಿದೇನೋ
ಪ್ರೇಮದ ಅಮಲಲಿ ಕಾಮವ ಸುರಿಸಿದೇನೋ
ನನ್ನ ಹೆಣ್ತನ ಕಳೆದೇನೋ ನನ್ನ ದೂರ ತಳ್ಳಿ ನೀನು ಉಳಿದೇನೋ ||ಕಾ||

-- ವಿ ಕೃಷ್ಣಮೂರ್ತಿ ಅಜ್ಜಹಳ್ಳಿ


Rate this Joke

Rating: 3.2/5 (6 votes cast)

Views: 15132 | Submitted: 2009-07-16

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech