Close X
- KannadaHanigalu Jokes

ಹೆಂಡತಿಯಾಬ್ಬಳು ಮನೆಯಾಳಗಿದ್ದರೆ

ಸುಪ್ರಸಿದ್ದ ಕವಿ ಕೆ.ಎಸ್.ನರಸಿಂಹಸ್ವಾಮಿಯವರ ಗೀತೆಯನ್ನ ಅನುಸರಿಸಿ, ಅದರ ಭಾವಾರ್ಥವನ್ನ ಬದಲಿಸಿ ರಚಿಸಿದ ಒಂದು ಗೀತೆ......

ಹೆಂಡತಿಯಾಬ್ಬಳು ಮನೆಯಾಳಗಿದ್ದರೆ
ಖರ್ಚೋ ಖರ್ಚು ರುಪಾಯಿ
ಹೆಂಡತಿಯಾಬ್ಬಳು ಹತ್ತಿರವಿದ್ದರೆ
ನಾನೊಬ್ಬಾ ಬಡಪಾಯಿ !!

ಹೆಂಡತಿಯಾಬ್ಬಳು ಮನೆಯಾಳಗಿದ್ದರೆ
ಆರದು ಕೋಪದ ದೀಪ
ಹೆಂಡತಿ ತೌರಿಗೆ ಹೊರಡುವೆನೆಂದರೆ
ಬಿಡುಗಡೆ ಆಯಿತು ಶಾಪ.

ಹೆಂಡತಿಯಾಂದಿಗೆ ದಿನದಿನ ಹಗೆತನ
ಭಯವಾ ತಂದಿದೆಯಲ್ಲಾ
ಹೆಂಡತಿ ಎದುರಿಗೆ ಹೆಂಡಾ ಕುಡಿಯುವ
ಗುಂಡಿಗೆಯು ನನಗಿಲ್ಲಾ.

ಕೈ ಹಿಡಿದವಳು , ಕೈ ಬಿಡಬಹುದು
ಮಾಡುವೆ ಅಡಿಗೆ ಇಂದಿನಿಂದ
ಜಡೆಯು ಜುಟ್ಟು ಇಲ್ಲದ ಇವಳು
ಬಂದದ್ದು ಬೇರೆ ದೇಶದಿಂದ

ಯುದ್ದವ ಮಾಡಲು ನಿಂತಿಹಳಲ್ಲ
ನನ್ನಮ್ಮನು ಹತ್ತಿರವಿಲ್ಲ
ಕೆನ್ನೆಗೆ ಏಟು ತಪ್ಪುವುದಿಲ್ಲ
ನೋಟಿಗೆ ಬಡತನವಲ್ಲ

ತಾಳಿಯನಂತು ತೊಡುವುದೇ ಇಲ್ಲ
ಶ್ರೀಮಂತನ ಮಗಳೀ ಬಾಲೆ.
ಮುಖಕ್ಕೆ ಮಂಗಳಾರತಿ ಎತ್ತಿಹಳಲ್ಲ
ಇವಳು ಕೋಪದ ಜ್ವಾಲೆ.

ಹೆಂಡತಿಯಾಬ್ಬಳು ಮನೆಯಾಳಗಿದ್ದರೆ
ಖರ್ಚೋ ಖರ್ಚು ರುಪಾಯಿ
ಹೆಂಡತಿಯಾಬ್ಬಳು ಹತ್ತಿರವಿದ್ದರೆ
ನಾನೊಬ್ಬಾ ಬಡಪಾಯಿ !!!

-- ಉಮಾ ಭಾರದ್ವಾಜ್


Rate this Joke

Rating: 4.6/5 (11 votes cast)

Views: 17500 | Submitted: 2009-04-02

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech