Close X
Family Jokes - KannadaHanigalu Jokes

ಬಹುಮಾನ

Women at Wellಅತ್ತೆ ತನ್ನ ನಾಲ್ಕು ಅಳಿಯಂದಿರನ್ನು ಪರೀಕ್ಷಿಸಬೇಕೆಂದು ನಿರ್ಧರಿಸಿದಳು. ನಾನು ನಾಲ್ಕು ಬಾರಿ ನೀರಿಗೆ ಹಾರುತ್ತೇನೆ. ಪ್ರತೀ ಸಾರಿ ನಿಮ್ಮಲ್ಲಿ ಒಬ್ಬೊಬ್ಬರು ನನ್ನನ್ನು ಮೇಲೆತ್ತಿ ಬದುಕಿಸಬೇಕೆಂದು ಎಲ್ಲರನ್ನೂ ಕರೆದು ಹೇಳಿದಳು. 

 

ಮೊದಲನೆ ಬಾರಿ ಹಿರಿ ಅಳಿಯ ಅತ್ತೆಯನ್ನು ಬದುಕಿಸಿ ಕರೆದುಕೊಂಡು ಬಂದಾಗ ಅವನಿಗೆ ಕಾರು ಬಹುಮಾನವಾಗಿ ಸಿಕ್ಕಿತು.

 

ಎರಡನೆ ಅಳಿಯ ಸ್ಕೂಟರ್ ಬಹುಮಾನ ಪಡೆದ.

 

ಮೂರನೆಯ ಅಳಿಯನಿಗೆ ಅತ್ತೆಯನ್ನು ನೀರಿನಿಂದ ಎತ್ತಿದ್ದಕ್ಕಾಗಿ ಕೇವಲ ಮೊಪೆಡ್ ಬಹುಮಾನವಾಗಿ ಸಿಕ್ಕಿತು.

 

ನಾಲ್ಕನೆ ಅಳಿಯ ಯೋಚಿಸಿದ. ಬಹುಮಾನಗಳ ಸರಣಿಯನ್ನು ನೋಡಿದರೆ ನನಗೆ ಸಿಗುವುದು ಬಹುಶಃ ಸೈಕಲ್ ಮಾತ್ರ, ಅದಕ್ಕಾಗಿ ಇಷ್ಟೆಲ್ಲಾ ಯಾಕೆ ಕಷ್ಟಪಡಬೇಕೆಂದು ಅತ್ತೆ ನೀರಿಗೆ ಹಾರಿದರೂ ಸುಮ್ಮನೆ ನೋಡುತ್ತಾ ನಿಂತಿದ್ದ.

 

ಈಜು ಬರದ ಅತ್ತೆ ಸತ್ತೇ ಹೋದಳು. ಮಾವ ಕೊನೇ ಅಳಿಯನಿಗೆ ಮರ್ಸಿಡೀಸ್ ಬೆನ್ಜ್ ಕಾರನ್ನು ಬಹುಮಾನವಾಗಿ ನೀಡಿದ ! 

-- ವಸಂತ್


Rate this Joke

Rating: 4.3/5 (4 votes cast)

Views: 52188 | Submitted: 2012-12-02

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech