Close X
- KannadaHanigalu Entertainment

ನೆಲ್ಲಿಕಾಯಿ ತಂಬುಳಿ

ಬೇಕಾಗುವ ಸಾಮಾನುಗಳು :

ಬೆಟ್ಟದ ನೆಲ್ಲಿಕಾಯಿ ೧, ತೆಂಗಿನ ತುರಿ ಸ್ವಲ್ಪ, ಜೀರಿಗೆ ಸ್ವಲ್ಪ, ಕಡೆದ ಮಜ್ಜಿಗೆ ಸ್ವಲ್ಪ, ಒಗ್ಗರಣೆಗೆ ಎಣ್ಣೆ, ಸಾಸಿವೆ, ಕರಿಬೇವಿನ ಸೊಪ್ಪು, ಒಣಮೆಣಸಿನ ಕಾಯಿ.



ಮಾಡುವ ವಿಧಾನ : ಬೆಟ್ಟದ ನೆಲ್ಲಿಕಾಯಿಯನ್ನು ತೊಳೆದು ಸಣ್ಣಗೆ ಹೆಚ್ಚಿ ಅದರ ಜೊತೆಗೆ ಸ್ವಲ್ಪ ತೆಂಗಿನ ತುರಿಯನ್ನು ಹಾಕಿ ನುಣ್ಣಗೆ ರುಬ್ಬಬೇಕು. ಅದಕ್ಕೆ ಕಡೆದ ತೆಳ್ಳನೆಯ ಮಜ್ಜಿಗೆಯನ್ನು ಸೇರಿಸಿ, ಒಗ್ಗರಣೆಗೆ ಜೀರಿಗೆ, ಸಾಸಿವೆ, ಕರಿಬೇವಿನ ಸೊಪ್ಪು, ಒಣಮೆಣಸಿನ ಕಾಯಿ ಹಾಕಿ ಒಗ್ಗರಣೆ ಕೊಡಬೇಕು. ಉಪ್ಪು ಹಾಕಿದರೆ ತಣ್ಣನೆಯ ತಂಬುಳಿ ಸಿದ್ದ. ಈ ಬೇಸಿಗೆಯಲ್ಲಿ ಇಂತಹ ತಂಬುಳಿ ಸವಿಯಲೂ ಆರಾಮು. ದೇಹಕ್ಕೂ ಹಿತಕರ.

-- ಹೇಮಾವತಿ ಹೆಗಡೆ


Rate this Joke

Rating: 4.3/5 (6 votes cast)

Views: 3832 | Submitted: 2010-03-05

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech