Close X
Kannadahanigalu - Yearly Astrology in Kannada
Yearly Astrology
2017
aries
ಮೇಷ - Aries

ಈ ವರ್ಷ ನಿಮ್ಮ ಎಲ್ಲಾ ಇಷ್ಟಾರ್ಥಗಳು ಸಿದ್ಧಿಯಾಗುವುದು. ಮಾನಸಿಕ ಸ್ಥಿರತೆ, ಶಾಂತಿ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ಹಣದ ಅನುಕೂಲತೆಯೂ ಇರುವುದರಿಂದ ಕೈ ಹಾಕಿದ ಕಾರ್ಯಗಳು ನಿರ್ವಿಘ್ನದಿಂದ ಸಾಗುತ್ತವೆ. ಉದ್ಯೋಗದಲ್ಲಿ ಉನ್ನತಿ. ಸಂಗೀತ, ಸಾಹಿತ್ಯ, ನೃತ್ಯ, ಚಿತ್ರಕಲೆ ಇತ್ಯಾದಿ ಕಲಾವಿದರಿಗೆ ಅನುಕೂಲಕರವಾದ ವರ್ಷ. ಕಾರ್ಮಿಕರಿಗೆ ಹಾಗೂ ಕಾರ್ಖಾನೆ ಉದ್ಯಮಿಗಳಿಗೆ ಉತ್ತಮ ಲಾಭ. ಹೈನುಗಾರಿಕೆ ಉದ್ಯಮಿಗಳಿಗೆ, ತರಕಾರಿ ವ್ಯಾಪಾರಸ್ಥರಿಗೆ ಈ ವರ್ಷ ನೆಮ್ಮದಿಯ ವರ್ಷ. ರಾಜಕೀಯ ವ್ಯಕ್ತಿಗಳಿಗೆ ಹೆಚ್ಚಿನ ಆದ್ಯತೆ. ಹೋಟೆಲ್ ಉದ್ಯಮದವರಿಗೆ ಲಾಭಕರ ವರ್ಷ.

taurus
ವೃಷಭ - Taurus

ಈ ವರ್ಷ ನಿಮ್ಮ ಪಾಲಿಗೆ ಅತ್ಯಂತ ಶುಭ ಸಮಯ. ಆರೋಗ್ಯದಲ್ಲಿ ಉತ್ತಮ ಬದಲಾವಣೆ. ರೈತರ ಬಾಳು ಆನಂದಮಯವಾಗಲಿದೆ. ಮಕ್ಕಳನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಅಥವಾ ದೂರದ ಊರಿಗೆ ಕಳುಹಿಸುವಲ್ಲಿ ಯಶಸ್ವಿಯಾಗುವಿರಿ. ವಿದ್ಯುತ್ ಇಲಾಖೆ, ನ್ಯಾಯಾಲಯಗಳಲ್ಲಿ ದುಡಿಯುವವರಿಗೆ ಉದ್ಯೋಗದಲ್ಲಿ ಉತ್ಕರ್ಷ. ಈ ವರ್ಷ ಶಾರೀರಿಕ ಹಾಗೂ ಮಾನಸಿಕ ಸುಖಶಾಂತಿ. ವಿದೇಶ ಪ್ರಯಾಣ ಸಾಧ್ಯ. ರಾಜಕಾರಣಿಗಳಲ್ಲಿ ನಾಯಕತ್ವ ಬದಲಾವಣೆಯಾಗಿ ತೃಪ್ತಿ ಕಾಣುವರು. ರೇಷ್ಮೆ ನೇಕಾರರಿಗೆ ವರ್ಷದ ಮಧ್ಯ ಭಾಗದಿಂದ ಲಾಭ.

gemini
ಮಿಥುನ - Gemini

ಆರ್ಥಿಕ, ಮಾನಸಿಕ ಹಾಗೂ ದೈಹಿಕ ಆರೋಗ್ಯದ ವಿಷಯದಲ್ಲಿ ಹೆಚ್ಚಿನ ನೆಮ್ಮದಿಯನ್ನು ತರುವ ಸಂವತ್ಸರ. ಇಚ್ಛಾಕಾರ್ಯಗಳ ಸಿದ್ಧಿಯ ಕಾಲ. ಸಮಾಜದಲ್ಲಿ ಗೌರವ, ಕಾರ್ಯಕ್ಷೇತ್ರದಲ್ಲಿ ಪ್ರಭಾವ, ಪ್ರವಾಸ, ಬಂಧು-ಮಿತ್ರರೊಡನೆ ಪ್ರೀತಿ, ಸಹಕಾರ ಒದಗಿ ಬರಲಿದೆ. ಇಷ್ಟು ವರ್ಷಗಳ ನಿಮ್ಮ ಹೋರಾಟಕ್ಕೆ, ಪಟ್ಟ ಶ್ರಕ್ಕೆ ತಕ್ಕ ಪ್ರತಿಫಲ ಕಾಣುವ ಶುಭ ಸಂವತ್ಸರ ಇದಾಗಿದೆ. ಮಾನಸಿಕ ಕ್ಷೋಭೆ, ಕುಟುಂಬದಲ್ಲಿ ಸಮಸ್ಯೆಗಳು ದೂರವಾಗಲಿದೆ. ನೂತನ ವಾಹನ ಅಥವಾ ಆಸ್ತಿ ಯೋಗವಿದೆ. ಆರೋಗ್ಯದಲ್ಲಿ ಸುಧಾರಣೆ ಆಗಲಿದೆ.

cancer
ಕರ್ಕಾಟಕ - Cancer

ನಿಮಗೆ ವಿದೇಶ ಪ್ರಯಾಣದ ಅವಕಾಶವಿದೆ. ನ್ಯಾಯಾಧೀಶರಿಗೆ, ಕಾನೂನು ಇಲಾಖೆಯವರಿಗೆ ಅಧಿಕ ಕೆಲಸದ ಒತ್ತಡಗಳಿದ್ದರೂ ಧನ ಹಾಗೂ ಸಂತಾನದಿಂದ ಕೀರ್ತಿಯ ಲಾಭ. ವಿವಿಧ ಮೂಲಗಳಿಂದ ಧನ ಸಂಪಾದನೆಯ ಜೊತೆಗೆ ಪ್ರಶಸ್ತಿ, ಗೌರವ ದೊರೆಯಲಿದೆ. ರಾಜಕೀಯದಲ್ಲಿ ಪ್ರಗತಿ ಹಾಗೂ ಉತ್ತಮ ಸ್ಥಾನ ಪ್ರಾಪ್ತಿ. ವೈಭವ ವಿಲಾಸದಿಂದ ಕೂಡಿದ ವರ್ಷ ಇದಾಗಿದೆ. ನವ ದಂಪತಿಗಳಿಗೆ ಸಂತಾನಪ್ರಾಪ್ತಿ. ಔಷಧಿ ಹಾಗೂ ರಾಸಾಯನಿಕ ವ್ಯಾಪಾರಿಗಳಿಗೆ ಮತ್ತು ಉದ್ಯೋಗಿಗಳಿಗೆ ಹರ್ಷದಾಯಕ ವರ್ಷ. ಉತ್ಪನ್ನಗಳ ಬೆಲೆ ಏರಿ ಕೃಷಿಕರಿಗೆ ಒಳ್ಳೆಯ ಆದಾಯ, ಸಂತೃಪ್ತಿ ಸಿಗುವ ವರ್ಷ. ನಾಟಕ, ಸಿನಿಮಾ ರಂಗದಲ್ಲಿ ಕೆಲಸ ನಿರ್ವಹಿಸುವವರಿಗೆ ಯಶಸ್ಸು. ತಾಂತ್ರಿಕ ಕ್ಷೇತ್ರದಲ್ಲಿ ಪರಿಣತರಿಗೆ ಉತ್ತಮ -ಅವಕಾಶ.

leo
ಸಿಂಹ - Leo

ಸರ್ಕಾರದಲ್ಲಿ ಉನ್ನತ ಪದವಿ ಗಳಿಸುವಲ್ಲಿ ಯಶಸ್ವಿಯಾಗುವಿರಿ. ವಿದ್ಯಾರ್ಥಿಗಳು ಉತ್ತಮ ದರ್ಜೆಯಲ್ಲಿ ಯಶಸ್ವಿಯಾಗುವರು. ಮಧ್ಯ ವಯಸ್ಸಿನವರಿಗೆ ಅನಿರೀಕ್ಷಿತವಾಗಿ ಉನ್ನತ ಹುದ್ದೆ ಪ್ರಾಪ್ತಿ. ವಾಹನ ಚಾಲಕರಿಗೆ ಸ್ವಂತ ವಾಹನ ಖರೀದಿ ಯೋಗ. ವಿವಾಹ, ಗೃಹಪ್ರವೇಶದ ಶುಭ ಯೋಗ ಪ್ರಾಪ್ತಿ. ಸಂಗೀತ, ವಾದ್ಯ, ನೃತ್ಯ ನಾಟಕ, ಚಿತ್ರಕಲೆ ಪರಿಣತರಿಗೆ ಅನುಕೂಲವಾದ ವರ್ಷ. ಶೇರು ದಲ್ಲಾಳಿಗಳು, ಬಾರ್ ಮಾಲೀಕರು, ಸಿದ್ಧ ಉಡುಪು ಮಾರಾಟಗಾರರಿಗೆ ಅಧಿಕ ಲಾಭ. ಕಬ್ಬಿಣ ಜಲ್ಲಿ, ಖನಿಜ ಪದಾರ್ಥಗಳ ಮಾರಾಟಗಾರರಿಗೆ ವಿಶೇಷ ಲಾಭ. ವಿದೇಶದಲ್ಲಿ ಉತ್ತಮ ಅವಕಾಶ.

virgo
ಕನ್ಯಾ - Virgo

ರಾಜಕೀಯ ಕ್ಷೇತ್ರದಲ್ಲಿ ಉನ್ನತ ಸ್ಥಾನ. ಲೇಖಕರು, ಪ್ರಕಾಶಕರು, ಪ್ರಾಚಾರ್ಯರು, ದೇವಾಲಯದ ಅರ್ಚಕರುಗಳಿಗೆ ಅಧಿಕ ವರಮಾನ. ರಬ್ಬರ್, ಕಬ್ಬು, ಬಾಳೆ, ತೆಂಗು ಬೆಳೆಗಾರರಿಗೆ, ಸಿಹಿತಿಂಡಿ ತಯಾರಕರಿಗೆ ಬೇಡಿಕೆ. ದೈವ ಬಲದಿಂದ ಎಲ್ಲ ಕಾರ್ಯಗಳು ಯಶಸ್ಸಿನತ್ತ. ಈ ವರ್ಷ ವೈದ್ಯರಿಗೆ ಬಡ್ತಿ. ದೂರದ ನೆಂಟರ ಸಹಾಯದಿಂದ ಮಗಳ ಮದುವೆ ನೆರವೇರುವುದು. ಯಂತ್ರೋಪಕರಣಗಳ ವ್ಯಾಪಾರಿಗಳಿಗೆ ಅಧಿಕ ಲಾಭ. ಸಂವತ್ಸರದ ಆರಂಭವು ವಿದೇಶ ಯಾತ್ರೆಯೊಂದಿಗೆ ಆರಂಭ. ದೈವ ಕೃಪೆಯಿಂದ ಎಲ್ಲವೂ ಶುಭಕರ. ಅಧ್ಯಾಪಕ ವರ್ಗದವರಿಗೆ ಶಾಲಾ ಕಾಲೇಜುಗಳಲ್ಲಿ ಹೆಚ್ಚಿನ ಗೌರವ, ಸನ್ಮಾನ ಪ್ರಾಪ್ತಿ.

libra
ತುಲಾ - Libra

ದಾಂಪತ್ಯದಲ್ಲಿ ವಿಶೇಷವಾದ ನೆಮ್ಮದಿ. ಸರಕಾರಿ ಕೆಲಸದಲ್ಲಿ ವಿಶೇಷ ಫಲ ದೊರೆಯಲಿದೆ. ಹೊಸ ವಾಹನ ಖರೀದಿ ಯೋಗ. ದಿನಗೂಲಿ ನೌಕರರಿಗೆ, ವಿಮಾ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಸಂತೃಪ್ತ ಬದುಕು ಸಿಗಲಿದೆ. ಕಲಾವಿದರು, ಬುದ್ಧಿಜೀವಿಗಳು, ಆಭರಣ ತಯಾರಕರು ಹಾಗೂ ಮಾರಾಟಗಾರರಿಗೆ, ಕಂಪ್ಯೂಟರ್ ಉದ್ಯಮಿಗಳಿಗೆ, ಸಾಫ್ಟ್‌ವೇರ್ ನೌಕರರಿಗೆ ಅಭಿವೃದ್ಧಿ. ತರಕಾರಿ, ಹಣ್ಣು ಮಾರುವವರಿಗೆ ತೃಪ್ತಿಕರವಾದ ವರ್ಷ. ನ್ಯಾಯಾಲಯದಲ್ಲಿ ವಿವಾದ, ವ್ಯಾಜ್ಯ ನಿಮ್ಮಿಚ್ಛೆಯಂತೆ ಪರಿಹಾರ. ವಿದೇಶದಲ್ಲಿದ್ದ ಸೋದರನ ಆಗಮನ. ಶುಭ ಕಾರ್ಯ ನಡೆಯಲಿದೆ.

scorpio
ವೃಶ್ಚಿಕ - Scorpio

ನೂತನ ಮನೆ, ಆಸ್ತಿಯನ್ನು ಖರೀದಿಸುವ ಶುಭ ಅವಕಾಶ. ರೈತರ ಬಾಳಿನಲ್ಲಿ ಹೊಸ ಆಶಾಕಿರಣ. ಭೂಮಿ, ಮನೆ, ವಾಹನಗಳನ್ನು ಹೊಂದುವಿರಿ. ಚರ್ಮ, ಕಬ್ಬಿಣ, ಗೊಬ್ಬರ ವ್ಯಾಪಾರಿಗಳಿಗೆ ಅಧಿಕ ಲಾಭ. ಕಬ್ಬು, ಬಾಳೆ, ತರಕಾರಿ ಹಾಗೂ ಹೂವು ಬೆಳೆಯುವವರಿಗೆ ಅದೃಷ್ಟ. ಮಾಂಗಲ್ಯ ಭಾಗ್ಯ, ಉದ್ಯೋಗದಲ್ಲಿ ಉನ್ನತ ಹುದ್ದೆ. ಜನವರಿಯ ನಂತರ ಭೂಮಿ, ಮನೆ, ಯಂತ್ರೋಪಕರಣಗಳ ಮೂಲಕ ಲಾಭ. ಸಹೋದರರೊಡನೆ ಇದ್ದ ಭಿನ್ನಾಭಿಪ್ರಾಯ ದೂರ. ಸಣ್ಣ ಕೈಗಾರಿಕೆ ನಡೆಸುವವರು, ವಿದ್ಯುತ್ ಉಪಕರಣ ಮಾರಾಟಗಾರರು,ಚಾಲಕರಿಗೆ ಪರಿಶ್ರಮಕ್ಕೆ ತಕ್ಕ ಫಲ. ಅಬಕಾರಿ ಇಲಾಖೆಯವರಿಗೂ ಸ್ಥಾನೋನ್ನತಿ. ಕ್ರೀಡಾಪಟುಗಳಿಗೆ ಸಂತಸದ ಕಾಲ.

sagittarius
ಧನು - Sagittarius

ಸರಕಾರದಿಂದ ಆಗಬೇಕಾದ ಎಲ್ಲಾ ಕೆಲಸಗಳು ಸುಲಭವಾಗಿ ನೆರವೇರುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ವಿಶೇಷ ಆಸಕ್ತಿ. ಮಕ್ಕಳಿಂದ ಉತ್ತಮ ಲಾಭ. ಉಪನ್ಯಾಸಕ, ವಿದ್ಯಾ ಇಲಾಖೆಯಲ್ಲಿ ಕೆಲಸ ಮಾಡುವವರು, ಗುಮಾಸ್ತ, ವಕೀಲ ವೃತ್ತಿ ಮಾಡುವವರು, ನ್ಯಾಯಾಧೀಶರು, ಪೋಲಿಸ್ ಇಲಾಖೆಗಳಲ್ಲಿ ಕೆಲಸಮಾಡುವವರಿಗೆ ಉದ್ಯೋಗದಲ್ಲಿ ನೆಮ್ಮದಿ. ವಿವಾಹ ಯೋಗ. ನವ ವಿವಾಹಿತರಿಗೆ ಸಂತಾನ. ಗೃಹ, ವಾಹನ, ಆಭರಣ ಲಾಭ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಹಾಗೂ ಉನ್ನತ ವ್ಯಾಸಂಗಕ್ಕೆ ವಿದೇಶದಲ್ಲಿ ಅವಕಾಶ. ಕಬ್ಬಿಣ, ಗಾಜು, ಸೀಸ, ಪ್ಲಾಸ್ಟಿಕ್, ರಾಸಾಯನಿಕ, ಗಣಿ ಉದ್ಯಮ, ಖನಿಜಗಳ ವ್ಯವಹಾರದಲ್ಲಿ ಲಾಭ.

capricorn
ಮಕರ - Capricorn

ಈ ವರ್ಷ ಪರಿಪೂರ್ಣವಾದ ದೈವಾನುಗ್ರಹವಿದೆ. ಶುಭ ಕಾರ್ಯಗಳು ಫಲಿಸುವವು. ಆಹಾರ ಪದಾರ್ಥಗಳು, ಜವಳಿ, ಮತ್ಸ್ಯೋದ್ಯಮ, ಕಂಪ್ಯೂಟರ್ ಬಿಡಿಭಾಗ, ಜೈವಿಕ, ರಾಸಾಯನಿಕ ವಸ್ತುಗಳ ಮಾರಾಟಗಾರರಿಗೆ ಆದಾಯವು ಹೆಚ್ಚುತ್ತದೆ. ಸೀಸ, ತವರ, ರಬ್ಬರ್, ಸಿಡಿಮದ್ದು, ಪೆಟ್ರೋಲಿಯಂ ಉದ್ಯಮಿಗಳು ಲಾಭ ಗಳಿಸುವರು. ಬುದ್ಧಿಜೀವಿ, ಕಲಾವಿದರು, ಸಾಹಿತಿಗಳಿಗೂ ಗೌರವಾದರ ಪ್ರಾಪ್ತಿ. ಧಾರ್ಮಿಕ ಮುಖಂಡರಿಗೆ ಗೌರವ. ಸಂಗೀತಗಾರರಿಗೆ ಪ್ರಶಸ್ತಿ, ಅವಿವಾಹಿತರಿಗೆ ವಿವಾಹ ಯೋಗವಿದೆ. ವಿದ್ಯಾರ್ಥಿಗಳಿಗೆ ವ್ಯಾಸಂಗದಲ್ಲಿ ಉನ್ನತ ಪ್ರಗತಿ.

aquarius
ಕುಂಭ - Aquarius

ಕವಿ, ಸಾಹಿತಿ, ಅಧ್ಯಾಪಕರಿಗೆ ಧನಾಗಮ. ಕ್ರೀಡಾಳು, ಸೈನಿಕ, ಗೃಹರಕ್ಷಕ ದಳ, ಸೇನಾಪಡೆಗೆ ಸೇರಿದವರಿಗೆ ಇದು ಶುಭ ವರ್ಷ. ಸರಕಾರದಿಂದ ಸೇವಾ ಪದಕ ಹಾಗೂ ಸನ್ಮಾನ. ಮನೆ ಅಭಿವೃದ್ಧಿ ಕುರಿತು ಹೊಸ ಯೋಜನೆಗಳನ್ನು ಹಾಕಿ ಯಶಸ್ವಿಯಾಗುವಿರಿ. ವಾಹನ, ಆಸ್ತಿ ಮತ್ತು ಮನೆಗಳ ವ್ಯವಹಾರಗಳು ಸುಗಮವಾಗಿ ಸಾಗುತ್ತದೆ. ಮಂಗಳ ಕಾರ್ಯಗಳು ಜರುಗುತ್ತವೆ. ಗಣ್ಯ ವ್ಯಕ್ತಿಗಳ ಸಹವಾಸದಿಂದ ಮನಸ್ಸು ಪ್ರಫುಲ್ಲ. ಆರೋಗ್ಯದಲ್ಲಿ ಪ್ರಗತಿ, ವ್ಯಾಪಾರದಲ್ಲಿ ಉನ್ನತಿ. ಉದ್ಯೋಗದಲ್ಲಿ ಲಾಭ. ಆಭರಣ ಮಾರಾಟಗಾರರಿಗೆ ಲಾಭ. ಉನ್ನತ ಅಧಿಕಾರಿಗಳಿಗೆ, ಆದಾಯ ಇಲಾಖೆಯವರಿಗೆ ಬಡ್ತಿ.

pisces
ಮೀನ - Pisces

ಲೇಖಕರಿಗೆ ಗೌರವ ಪ್ರಾಪ್ತಿ. ವೈದ್ಯರಿಗೆ, ಹೋಟೆಲ್ ಉದ್ಯಮಿಗಳಿಗೆ ಸಂತೃಪ್ತಿ. ಮಕ್ಕಳ ಉತ್ತ ಫಲಿತಾಂಶ ಮುದ ನೀಡುವುದು. ನಿಮ್ಮ ಎಲ್ಲಾ ಕಾರ್ಯಗಳನ್ನು ಮಾಡಿ ಮುಗಿಸುವಿರಿ. ರೈತರಿಗೆ, ಆಸ್ತಿ ವಿಭಜನೆಯಿಂದ ಅಧಿಕ ಲಾಭ. ಸರಕಾರಿ ಕೆಲಸಗಳಲ್ಲಿ ಲಾಭ. ದೂರ ದೇಶ ಪ್ರಯಾಣ ಮಾಡುವಿರಿ. ವಿದ್ಯಾರ್ಥಿಗಳಿಗೆ ಕೀರ್ತಿ ಲಭಿಸಲಿದೆ. ವ್ಯವಹಾರ, ವ್ಯಾಪಾರ, ಉದ್ಯೋಗ ರಂಗದಲ್ಲಿ ಸ್ಥಾನಮಾನ, ಗೌರವ, ಅಭಿವೃದ್ಧಿ. ಕೈಗೊಂಡ ಕಾರ್ಯಗಳೆಲ್ಲವೂ ಜಯಪ್ರದ.

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech