Close X
Kannadahanigalu - Weekly Astrology in Kannada
Weekly Astrology
(16-23 October 2017)
aries
ಮೇಷ - Aries

ಸರಳತನವೇ ಒಡವೆ ಎಂಬುದು ನಿಮ್ಮ ಸಿದ್ದಾಂತ, ಪಿತೃವರ್ಗ ಶ್ರೇಯಸ್ಸಿನಿಂದ ಘನತೆ ಹೆಚ್ಚಳ, ಪಿತೃವರ್ಗ ಆಕ್ಷೇಪಣೆಯಿಂದ ಸ್ವತ್ತು ವಿವಾದಗಳ ಮುಂದೂಡಿಕೆ, ಅಧ್ಯಯನಕ್ಕೆ ಅಡೆತಡೆಗಳು, ವಾಹನ ದುರಸ್ತಿಗೆ ವಿಪರೀತ ಖರ್ಚು, ಗೃಹ ನಿರ್ಮಾಣ ಕಾರ್ಯ ಮುಂದೂಡಿಕೆ, ಪಿತೃ ಸಲಹೆಗಳಿಗೆ ಮಾನ್ಯತೆ, ಆದಾಯ ಕಡಿಮೆ. ಅದೃಷ್ಟ ಸಂಖ್ಯೆ 6

taurus
ವೃಷಭ - Taurus

ಪಾರಮಾರ್ಥಿಕ ಚಿಂತನೆಗಳಿಂದ ಮಾನಸಿಕ ಶಾಂತಿಗೆ ವಿಶೇಷ ಪ್ರಯತ್ನ, ಪಿತೃ ಮೇಲ್ಮೆಯಿಂದ ಮನೋಲ್ಲಾಸ, ಪುತ್ರ ಪುತ್ರಿ ಸಮೇತ ದೈವ ಕಾರ್ಯಗಳ ಆರಂಭ, ತ್ಯಾಗ ಮನೋಭಾವ, ಮಠಾಧಿಪತಿಗಳ ಸೇವೆಗೆ ಅಮಿತ ಉತ್ಸಾಹ, ದೇವಾಲಯಗಳ ನಿರ್ಮಾಣದಲ್ಲಿ ಅಪಾರ ಶ್ರದ್ಧೆ, ಪಿತೃವರ್ಗ ಸಹಕಾರದಿಂದ ಧರ್ಮ ಕಾರ್ಯಗಳು. ಅದೃಷ್ಟ ಸಂಖ್ಯೆ 5

gemini
ಮಿಥುನ - Gemini

ಸದವಕಾಶದಿಂದ ಹೊಸಹುರಿಪಿನೊಂದಿಗೆ ಉತ್ತಮ ನಿರ್ವಹಣೆಗೆ ಸಜ್ಜಾಗುವಿರಿ, ವೈವಾಹಿಕ ಮಾತುಕತೆಗಳಿಗೆ ಸೂಕ್ತ ವಾತಾವರಣ, ಶೈಕ್ಷಣಿಕ ದಿಗ್ಗಜರೊಡನೆ ಅಖಾಡಕ್ಕೆ ಇಳಿಯಲು ಕಾತರ, ಕುಟುಂಬವನ್ನು ವ್ಯವಸ್ಥಿತಗೊಳಿಸಲು ದಿಟ್ಟ ನಿರ್ಧಾರ, ಅಧ್ಯಯನದಲ್ಲಿ ಉತ್ಸಾಹ ಕೊರತೆ, ನೆಂಟರೊಡನೆ ಕ್ಷುಲ್ಲಕ ಕಲಹಗಳು, ಪುತ್ರ ಸಂಕಷ್ಟ. ಅದೃಷ್ಟ ಸಂಖ್ಯೆ 9

cancer
ಕರ್ಕಾಟಕ - Cancer

ಉತ್ಸಾಹದಿಂದ ಆರಂಭಿಸಿದರೂ ಕಾರ್ಯಗಳು ಕಲಸು ಮೇಲೋಗರ, ಆರೋಗ್ಯದಲ್ಲಿ ಏರುಪೇರಿನಿಂದ ಸಂಚಾರಕ್ಕೆ ಸಂಚಕಾರ, ಪ್ರಯಾಣ ಮುಂದೂಡಿಕೆಯಿಂದ ತುರ್ತು ಕಾರ್ಯ ಸ್ಥಗಿತ, ಮಾತೃ ಅನಾರೋಗ್ಯ, ಸ್ವತ್ತು ತಗಾದೆಗಳಲ್ಲಿ ಕಾಲಹರಣ, ಪುತ್ರವರ್ಗಕ್ಕೆ ಸುವರ್ಣಾವಕಾಶ, ತ್ವರಿತಗತಿಯಲ್ಲಿ ಸತ್ಕಾರ‌್ಯ ನಿರ್ವಹಣೆ. ಅದೃಷ್ಟ ಸಂಖ್ಯೆ 1

leo
ಸಿಂಹ - Leo

ಪರಿಶ್ರಮದಿಂದ ವೈಯಕ್ತಿಕ ಸಮಸ್ಯೆ ಬಗೆಹರಿಸುವಿರಿ, ಸಮೀಪವರ್ತಿಗಳಿಂದ ಪಡೆದ ಸಾಲ ಮರುಪಾವತಿ, ಆರೋಗ್ಯದ ನಿಗಾ ಅಗತ್ಯ, ಶತ್ರು ಕೀಟಲೆಯಿಂದ ವಿಷಣ್ಣತೆ, ಅನುಭವಿ ರಾಜಕಾರಣಿಗಳ ಮಾರ್ಗದರ್ಶನದಲ್ಲಿ ರಾಜಕೀಯ ರಂಗಪ್ರವೇಶ, ದಗಲ್ಬಾಜಿಗಳಿಂದ ವಂಚಿತರಾಗುವ ಸಂಭವ, ಕಾರ್ಯನಿರ್ವಹಣಾಧಿಕಾರಿಗಳಿಗೆ ಶ್ರಮ. ಅದೃಷ್ಟ ಸಂಖ್ಯೆ 2

virgo
ಕನ್ಯಾ - Virgo

ಕೈಹಿಡಿತವಿಲ್ಲದ ಔದಾರ್ಯ ಕ್ರಿಯಾಶೀಲತೆಯನ್ನು ಮೊಟಕುಗೊಳಿಸುತ್ತದೆ, ಸಾಲಕ್ಕೆ ಅಣುವಾಗುವ ಸಂಭವ, ಖಟ್ಲೆ ಉಲ್ಬಣದಿಂದ ಕಾರ್ಯಕ್ಕೆ ಧಕ್ಕೆ, ವಾತಬಾಧೆಯಿಂದ ನರಳುವಿಕೆ, ವೈವಾಹಿಕ ಮಾತುಕತೆ ಮುಂದುವರಿಕೆ, ಪತ್ನಿ ಅನಾರೋಗ್ಯದಿಂದ ವೆಚ್ಚ, ಪಿತೃವರ್ಗ ಸಹಕಾರದಿಂದ ಮಾನಸಿಕ ಶಾಂತಿ, ಸುತ್ತಾಟದಿಂದ ಶ್ರಮಾಧಿಕ್ಯ. ಅದೃಷ್ಟ ಸಂಖ್ಯೆ 2

libra
ತುಲಾ - Libra

ಅಡಚಣೆಗಳ ಇಳಿಮುಖದಿಂದ ವೈಯಕ್ತಿಕ ಸಮಸ್ಯೆ ಪರಿಹಾರ ಸುಗಮ, ಕುಟುಂಬ ನಿರ್ವಹಣೆಗೆ ದ್ರವ್ಯಾನುಕೂಲ, ಸೋದರ ಸಮಸ್ಯೆ ನಿಭಾವಣೆ ದುಸ್ತರ, ತುರ್ತು ಕಾರ್ಯ ಹಿನ್ನಡೆ, ಮಾತೃ ಅನಾರೋಗ್ಯ ಉಲ್ಬಣದಿಂದ ಖರ್ಚು, ಸ್ವತ್ತು ವಿವಾದ ಮುಂದೂಡಿಕೆ, ಅಧ್ಯಯನಕ್ಕೆ ತಡೆ, ಸಂಶೋಧನೆಯಲ್ಲಿ ಪ್ರಗತಿ, ಸಮಾಜ ಸೇವೆ ಸುಗಮ. ಅದೃಷ್ಟ ಸಂಖ್ಯೆ 7

scorpio
ವೃಶ್ಚಿಕ - Scorpio

ಜರೂರು ಕಾರ್ಯ ವಿಳಂಬದಿಂದ ಬಂಧು ತರಾಟೆ, ಸೋದರ ವರ್ಗ ಉಡಾಫೆಯಿಂದ ಮನೋವೇದನೆ, ಸ್ವತ್ತು ವಿವಾದಗಳಲ್ಲಿ ಒಡಹುಟ್ಟಿದವರೊಡನೆ ಭಿನ್ನಾಭಿಪ್ರಾಯಗಳು, ವಾಹನ ಖರೀದಿಗೆ ಅಕಾಲ, ಅಚಾತುರ‌್ಯದಿಂದ ಪುತ್ರ ವ್ಯವಹಾರ ಹಿಗ್ಗಾಮುಗ್ಗಾ, ಶತ್ರುಗಳ ತೆರೆಮರೆಯ ಚಟುವಟಿಕೆಗಳಿಂದ ಕುಟುಂಬದಲ್ಲಿ ಅಶಾಂತಿ, ಪ್ರಯಾಣ. ಅದೃಷ್ಟ ಸಂಖ್ಯೆ 5

sagittarius
ಧನು - Sagittarius

ರೀತಿ ನೀತಿ ಇಲ್ಲದೆ ಹಣ ಉಡಾಯಿಸುವುದರಿಂದ ಜರ್ಝರಿತರಾಗುವಿರಿ, ಕುಟುಂಬ ಗೊಂದಲದಿಂದ ಪಾರಾಗಲು ಶತಪ್ರಯತ್ನ, ಸಮೀಪವರ್ತಿಗಳಿಂದ ಪಡೆದ ಹಣದ ಮರುಪಾವತಿಗೆ ತೀವ್ರ ಒತ್ತಡ, ವಾಹನ ವಿಲೇವಾರಿಯಲ್ಲಿ ಲಾಭ, ರಚನಾತ್ಮಕ ಕಾರ್ಯ ನಿರ್ವಹಣೆ ವಿಳಂಬ, ಪಿತೃ ಅನಾರೋಗ್ಯ ಉಲ್ಬಣ. ಅದೃಷ್ಟ ಸಂಖ್ಯೆ 4

capricorn
ಮಕರ - Capricorn

ಪುತ್ರ ದೇಹಾಲಸ್ಯದಿಂದ ಕಾರ್ಯ ಮುಂದೂಡಿಕೆ, ಸತ್ಕಾರ್ಯ ನಿರ್ವಹಣೆಯಲ್ಲಿ ನಿಮ್ಮ ಲೆಕ್ಕಾಚಾರ ತಲೆಕೆಳಗು, ದುಗುಡ, ನೆಂಟರೊಡನೆ ಮನಸ್ತಾಪದಲ್ಲಿ ಇಳಿಮುಖ, ಖಟ್ಲೆಗಳಲ್ಲಿ ಇರುಸು ಮುರುಸು, ಕಲಾತ್ಮಕ ಚಟುವಟಿಕೆಗಳಿಗೆ ವಿರಾಮ, ಸ್ವತ್ತು ವ್ಯವಹಾರ ಸ್ಥಗಿತ, ಕುಟುಂಬ ನಿರ್ವಹಣೆಗೆ ಸಾಲ, ಪುತ್ರಾಗಮನ. ಅದೃಷ್ಟ ಸಂಖ್ಯೆ 7

aquarius
ಕುಂಭ - Aquarius

ಸಾರ್ವಜನಿಕ ಬದುಕಿನಲ್ಲಿ ಮಾನವೀಯ ಮೌಲ್ಯ ಎತ್ತಿ ಹಿಡಿಯಲು ಹರಸಾಹಸ, ಸ್ವತ್ತು ವಿವಾದಗಳ ಪರಿಹಾರ ಪ್ರಯಾಸಕರ, ಪಿತೃವರ್ಗ ಸಮಸ್ಯೆಗಳ ಪರಿಶೀಲನೆ, ವೈವಾಹಿಕ ಮಾತುಕತೆ ಅರ್ಧ, ವಾಹನ ದುರಸ್ತಿಗೆ ಖರ್ಚು, ಸೋದರ ಆಕ್ರೋಶ ವಿಕೋಪ, ಸಹೋದರರ ಸಹಕಾರದಿಂದ ರಚನಾತ್ಮಕ ಕಾರ್ಯ ನಿರ್ವಹಣೆ. ಅದೃಷ್ಟ ಸಂಖ್ಯೆ 4

pisces
ಮೀನ - Pisces

ವಾಹನ ವಿವಾದ ಬಗೆಹರಿಯದೆ ಕಂಗಾಲಾಗುವಿರಿ, ನೆಂಟರೊಡನೆ ಮನಸ್ತಾಪ ಬೃಹದಾಕಾರ ತಳೆಯುವುದರಿಂದ ಕುಟುಂಬದಲ್ಲಿ ಅಶಾಂತಿ, ಬಿಕ್ಕಟ್ಟು ಉಲ್ಬಣ, ಧನಾಗಮದಲ್ಲಿ ಏರುಪೇರು, ಸಮಸ್ಯೆಗಳು ತಲೆದೋರುವ ಸಂಭವ, ಗೃಹ ನಿರ್ಮಾಣ ಕಾರ್ಯಕ್ಕೆ ವಿಘ್ನಗಳು, ವೈವಾಹಿಕ ಮಾತುಕತೆಗಳ ಮುಂದೂಡಿಕೆ, ಅಪಾರ ವೆಚ್ಚ. ಅದೃಷ್ಟ ಸಂಖ್ಯೆ 9

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech