Close X
Kannadahanigalu - Monthly Astrology in Kannada
Monthly Astrology
March 2017
aries
ಮೇಷ - Aries

ಕಡಿಮೆ ಮೌಲ್ಯದ ವಸ್ತುಗಳನ್ನು ಬಯಸುವುದರಿಂದ ಇತರರಿಗೆ ತೊಂದರೆಯಾಗುವುದಿಲ್ಲ. ವರ್ಷದ ಆರಂಭದಿಂದ ಅಂತ್ಯದವರೆಗೆ ಶುಭಫಲಗಳು ದೊರೆಯಲಿವೆ. ಗೆಳೆಯರನ್ನು ನಂಬಿ ಮೋಸಹೋಗಬೇಡಿ, ದುಂದು ವೆಚ್ಚ ಸಲ್ಲದು. ಮುಂದಿನ ದಿನಗಳಲ್ಲಿ ಹಣಕಾಸಿನ ವ್ಯವಹಾರದಲ್ಲಿ ಏರುಪೇರಾಗುವ ಸಾಧ್ಯತೆಗಳಿವೆ. ಅವಿವಾಹಿತರಿಗೆ ಶೀಘ್ರದಲ್ಲಿ ವಿವಾಹಯೋಗವಿದೆ. ನಿರುದ್ಯೋಗಿಗಳಿಗೆ ದೂರದ ಉರಿನಿಂದ ಉದ್ಯೋಗವಕಾಶಗಳು ದೊರೆಯಲಿವೆ.ಶೂಗಳು, ಹೂವುಗಳು, ಕವಿತೆಗಳಿರುವ ಪುಸ್ತಕ, ಸಂಗೀತದ ಉಪಕರಣ, ಆಯಿಲ್ ಪೇಂಟ್, ಟ್ರಾವೆಲ್ ಬ್ಯಾಗ್, ಪಾಸ್‌ಪೋರ್ಟ್ ಕವರ್, ರೋಮಾಂಟಿಕ್ ಕಥೆ ಪುಸ್ತಕ, ಟಾಯ್‌ಗಳನ್ನು ಕೂಡಾ ಉಡುಗೊರೆಯಾಗಿ ನೀಡಬಹುದು.

taurus
ವೃಷಭ - Taurus

ವಿಜ್ಞಾನ, ತಂತ್ರಜ್ಞಾನ ಮತ್ತು ರಾಜಕೀಯ ಬದಲಾವಣೆಗಳನ್ನು ಗಮನಿಸುತ್ತಿರುತ್ತಾರೆ. ಪ್ರೀತಿಸಿದ ವ್ಯಕ್ತಿಯೊಂದಿಗೆ ಸಂಜೆ ವಿಹಾರಕ್ಕೆ ತೆರಳಿ ಮನಬಿಚ್ಚಿ ಮಾತನಾಡಿದಲ್ಲಿ ತುಂಬಾ ಸಂತೋಷವಾಗುತ್ತದೆ. ಏಕಾಂಗಿಯಾಗಿರಲು ಇಷ್ಟಪಡದೆ ಸದಾ ಗುಂಪಿನಲ್ಲಿರಲು ಬಯಸುತ್ತಾರೆ. ಹೆಚ್ಚಿನ ಶಿಕ್ಷಣಕ್ಕಾಗಿ ವಿದೇಶಗಳಿಗೆ ತೆರಳುವ ಯೋಗವಿದೆ. ವಾಹನ ಚಾಲನೆಯಲ್ಲಿ ಎಚ್ಚರಿಕೆಯಿರಲಿ ಅಪಘಾತವಾಗುವ ಸಾಧ್ಯತೆಗಳು ಹೆಚ್ಚು. ಅತ್ಯಾಧುನಿಕ ಎಲೆಕ್ಟ್ರಾನಿಕ್ ವಸ್ತುಗಳು, ಬೆಡ್‌ರೂಂಗಾಗಿ ಪೋರ್ಟೇಬಲ್ ಟಿವಿ, ಡಿಜಿಟಲ್ ಕ್ಯಾಮರಾ, ಡಿವಿಡಿ ಪ್ಲೇಯರ್, ಮೊಬೈಲ್ ಫೋನ್, ಚಿನ್ನಾಭರಣಗಳು, ರೇಷ್ಮೆ ಬಟ್ಟೆಗಳನ್ನು ಉಡುಗೊರೆಯಾಗಿ ನೀಡಬಹುದು.

gemini
ಮಿಥುನ - Gemini

ಸುಗಂಧ ದ್ರವ್ಯಗಳನ್ನು ತುಂಬಾ ಇಷ್ಟಪಡುತ್ತಾರೆ. ಮನೆಯಲ್ಲಿ ಕುಟುಂಬದವರ ಇಚ್ಚೆಗೆ ಅನುಸಾರವಾಗಿ ನಡೆದು ಪ್ರೀತಿಗೆ ಪಾತ್ರರಾಗುತ್ತಾರೆ. ಹಿರಿಯರನ್ನು ಗೌರವಿಸಿದಲ್ಲಿ ಕುಟುಂಬದಲ್ಲಿ ನಿಮ್ಮ ಘನತೆ, ಗೌರವಗಳು ಹೆಚ್ಚಾಗುತ್ತವೆ. ವಿದೇಶ ಪ್ರಯಾಣದ ಯೋಗವಿದೆ. ಗೆಳೆಯರನ್ನು ನಂಬಿ ದುಂದು ವೆಚ್ಚ ಮಾಡಿದಲ್ಲಿ ನಷ್ಟ ಎದುರಿಸುವ ಸಾಧ್ಯತೆಗಳಿವೆ. ಅವಿವಾಹಿತರಿಗೆ ಶೀಘ್ರದಲ್ಲಿ ಕಂಕಣಬಲ ಕೂಡಿ ಬರಲಿದೆ. ನಿರುದ್ಯೋಗಿಗಳಿಗೆ ಶೀಘ್ರದಲ್ಲಿ ಉದ್ಯೋಗದ ಅವಕಾಶಗಳು ದೊರೆಯಲಿವೆ. ಚಿನ್ನಾಭರಣಗಳು, ಬ್ರೀಫ್‌ಕೇಸ್, ಮಾಹಿತಿ ಪೂರ್ಣ ಪುಸ್ತಕಗಳು ಮತ್ತು ವಿಡಿಯೋಗಳು, ಸುಗಂಧ ದ್ರವ್ಯಗಳು, ಸ್ಕಾರ್ಫ್ ಗೃಹಾಲಂಕೃತ ವಸ್ತುಗಳಾದ ಪರದೆಗಳು, ಬೆಡ್‌ಶೀಟ್‌ಗಳನ್ನು ಉಡುಗೊರೆಯಾಗಿ ನೀಡಬಹುದು.

cancer
ಕರ್ಕಾಟಕ - Cancer

ಧಾರ್ಮಿಕ ಭಾವನೆಗಳನ್ನು ಹೆಚ್ಚಾಗಿ ಗೌರವಿಸುತ್ತಾರೆ. ಮನೆಯಲ್ಲಿ ಶುಭಕಾರ್ಯಗಳು ನಡೆಯಲಿವೆ. ನಿಮ್ಮ ಪ್ರೇಮ ಸಲ್ಲಾಪಗಳು ಮುಂದುವರಿಯಲಿವೆ. ನೀವು ಪ್ರೀತಿಸಿದ ವ್ಯಕ್ತಿಯೊಂದಿಗೆ ವಿವಾಹವಾಗಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಸಾಧ್ಯತೆಗಳಿವೆ. ಅವಿವಾಹಿತರಿಗೆ ವಿವಾಹ ಯೋಗ ಶೀಘ್ರದಲ್ಲಿ ಕೂಡಿಬರಲಿದೆ. ದಾಂಪತ್ಯ ಜೀವನ ಸುಖಮಯವಾಗಲಿದೆ. ಹಣಕಾಸಿನ ವ್ಯವಹಾರದಲ್ಲಿ ದುಂದು ವೆಚ್ಚ ಬೇಡ. ನೆರೆಹೊರೆಯವರನ್ನು ಮತ್ತು ಗೆಳೆಯರ ಸಲಹೆಗಳಿಗೆ ಸ್ಪಂದಿಸಿ.ಪುಸ್ತಕಗಳು( ವಿಶೇಷವಾಗಿ ಸಾಮಾಜಿಕ, ರಾಜಕೀಯ, ಮಾನವತೆ, ಸ್ವಯಂ ಅಭಿವೃದ್ಧಿ, ಪ್ರವಾಸ, ವಿದೇಶದ ಮಹತ್ವದ ಸ್ಥಳಗಳು), ಕ್ಯಾಮರಾ, ರಾತ್ರಿ ಭೋಜನಕೂಟ, ವಿದೇಶಿ ಕಲಾಕೃತಿಗಳನ್ನು ಉಡುಗೊರೆಯಾಗಿ ನೀಡಬಹುದು.

leo
ಸಿಂಹ - Leo

ಆಕರ್ಷಕ ವಸ್ತುಗಳನ್ನು ಉಡುಗೊರೆಯಾಗಿ ಬಯಸುತ್ತಾರೆ. ಯಾವುದೇ ಉದ್ಯೋಗದಲ್ಲಿರಲಿ ತುಂಬಾ ಬಿಜಿಯಾಗಿರಲು ಬಯಸುತ್ತಾರೆ. ಮನೆಯಲ್ಲಿ ಶುಭಕಾರ್ಯಗಳು ನಡೆಯಲಿವೆ. ನೀವು ಪ್ರೀತಿಸಿದ ವ್ಯಕ್ತಿಯೊಂದಿಗೆ ಮದುವೆಯಾಗುವ ಸಾಧ್ಯತೆಗಳಿವೆ. ಗುರುಹಿರಿಯರನ್ನು ಗೌರವಿಸಿ. ಗೆಳೆಯರನ್ನು ನಂಬಿ ಹಣಕಾಸಿನ ವ್ಯವಹಾರ ಮಾಡಬೇಡಿ. ದುಂದುವೆಚ್ಚ ಮಾಡಿದಲ್ಲಿ ತುಂಬಾ ನಷ್ಟ ಉಂಟಾಗುವ ಸಾಧ್ಯತೆಗಳಿವೆ.ಚಿನ್ನದ ಉಂಗುರ, ಗಿಫ್ಟ್ ವೋಚರ್, ಸಿಡಿ, ಪೇಟಿಂಗ್ ಚಿತ್ರಗಳು, ಉನ್ನತ ಬ್ರಾಂಡ್‌ನ ಸುಗಂಧ ದ್ರವ್ಯಗಳನ್ನು ಉಡುಗೊರೆಯಾಗಿ ನೀಡಬಹುದು.

virgo
ಕನ್ಯಾ - Virgo

ಇಷ್ಟವಾದ ಸ್ಥಳಕ್ಕೆ ಪ್ರವಾಸಕ್ಕೆ ತೆರಳುವ ಅವಕಾಶಗಳಿವೆ. ನೀವು ಮೆಚ್ಚಿದವರೊಂದಿಗೆ ವಿವಾಹವಾಗಲಿದೆ. ಗೆಳೆಯರನ್ನು ನಂಬಿ ಹಣದ ವಹಿವಾಟು ಮಾಡದಿರುವುದು ಲೇಸು. ದುಂದು ವೆಚ್ಚ ನಿಮಗೆ ನಷ್ಟ ತರಲಿದೆ. ಮನೆಯಲ್ಲಿರುವ ಹಿರಿಯರನ್ನು ಗೌರವಿಸಿದಲ್ಲಿ ಮುಂದಿನ ದಿನಗಳಲ್ಲಿ ನಿಮಗೆ ಶುಭವಾಗಲಿದೆ. ಸಂತಸದ ಕ್ಷಣಗಳು ನಿಮ್ಮದಾಗಲಿವೆ.ಕಥೆಗಳ ಪುಸ್ತಕ, ವಿಡಿಯೋ ಕ್ಯಾಮರಾ, ಸನ್‌ಗ್ಲಾಸ್‌ಗಳು, ಸ್ಕಾರ್ಫ್ ಅಥವಾ ಟೋಪಿ, ವಾಚ್‌ಗಳು, ರೇಷ್ಮೆ ಕುರ್ತಿಸ್‌ಗಳು, ಹ್ಯಾಂಡ್‌ಬ್ಯಾಗ್‌ಗಳು ಉಡುಗೊರೆಯಾಗಿ ನೀಡಬಹುದು.

libra
ತುಲಾ - Libra

ಇಂತಹ ವ್ಯಕ್ತಿಗಳಿಗೆ ಭಾರಿ ಮೌಲ್ಯದ ಉಡುಗೊರೆಗಳು ಇಷ್ಟವಾಗುತ್ತವೆ. ಶಿಸ್ತುಬದ್ಧ ಜೀವನದಿಂದಾಗಿ ಇತರರಿಗೆ ಮಾದರಿಯಾಗಿ ಕಾಣಿಸುತ್ತಾರೆ. ನೃತ್ಯ, ಪುಸ್ತಕಗಳನ್ನು ತುಂಬಾ ಇಷ್ಟಪಡುತ್ತಾರೆ. ರುಚಿ, ರುಚಿಯಾದ ಅಡುಗೆ ಮಾಡುವುದರಲ್ಲೂ ಪ್ರವೀಣರಾಗಿರುತ್ತಾರೆ. ಮನೆಯಲ್ಲಿ ಶುಭಕಾರ್ಯಗಳು ನಡೆಯಲಿವೆ. ಗೆಳೆಯರೊಂದಿಗೆ ಹಣಕಾಸಿನ ವ್ಯವಹಾರಗಳಲ್ಲಿ ಇತಿ ಮಿತಿಗಳಿರಲಿ. ಇಲ್ಲವಾದಲ್ಲಿ ನಷ್ಟವಾಗುವ ಸಾಧ್ಯತೆಗಳಿವೆ. ನೀವು ಇಷ್ಟಪಟ್ಟ ವ್ಯಕ್ತಿಗಳೊಂದಿಗೆ ನಿಮ್ಮ ವಿವಾಹವಾಗಲಿದೆ. ದೂರದ ಊರಿನಿಂದ ಉದ್ಯೋಗಕ್ಕಾಗಿ ಕರೆ ಬರುವ ಸಾಧ್ಯತೆಗಳಿವೆ.ಇಷ್ಟವಾದ ಲೇಖಕನ ಪುಸ್ತಕಗಳು, ಅಡುಗೆ ತಯಾರಿಸುವ ವಸ್ತುಗಳು, ಐಸ್‌ಕ್ರೀಮ್ ತಯಾರಿಕೆ ಉಪಕರಣ, ವಿಳಾಸದ ಪುಸ್ತಕಗಳು, ಹ್ಯಾಂಡ್‌ಬ್ಯಾಗ್‌ಗಳನ್ನು ಉಡುಗೊರೆಯಾಗಿ ನೀಡಬಹುದು.

scorpio
ವೃಶ್ಚಿಕ - Scorpio

ಆಕರ್ಷಕ ಉಡುಗೊರೆಗಳನ್ನು ನೀಡಿದಲ್ಲಿ ತುಂಬಾ ಸಂತಸದಿಂದ ಸ್ವೀಕರಿಸುತ್ತಾರೆ. ಸಂಜೆಯ ಸಮಯದಲ್ಲಿ ಪ್ರೀತಿ ಪಾತ್ರರೊಂದಿಗೆ ಕಳೆಯುವುದು ತುಂಬಾ ಇಷ್ಟವಾಗುತ್ತದೆ. ವಿದೇಶ ಪ್ರಯಾಣ ಯೋಗವಿದೆ. ನಿಮ್ಮ ಬಾಳಲ್ಲಿ ಹೊಸ ಸಂತಸ ಮೂಡಿಬರಲಿದೆ. ದುಂದುವೆಚ್ಚದಿಂದ ದೂರವಿರಿ. ಗೆಳೆಯರನ್ನು ನಂಬಿ ಹಣಕಾಸಿನ ವೆಚ್ಚ ಬೇಡ. ಮನೆಯಲ್ಲಿ ಶುಭಕಾರ್ಯಗಳು ನಡೆಯಲಿವೆ. ಡಿಸೈನ್‌ ಬ್ಯಾಗ್‌ಗಳು, ವಾಚ್‌ಗಳು ಪರ್ಸ್‌ ಮತ್ತು ಬಟ್ಟೆಗಳು ಹಾಗೂ ದುಬಾರಿಯಾದ ಸುಗಂಧ ದ್ರವ್ಯಗಳು ಉಡುಗೊರೆಯಾಗಿ ನೀಡುವುದರಿಂದ ಅವರ ಮನಸ್ಸನ್ನು ಗೆಲ್ಲಬಹುದು.

sagittarius
ಧನು - Sagittarius

ವಿವಾಹ ಬಂಧನ ಸಾಧ್ಯತೆ. ದುಂದು ವೆಚ್ಚ ಬೇಡ. ಗೆಳೆಯರನ್ನು ನಂಬಿ ಹಣಕಾಸಿನ ವ್ಯವಹಾರ ಮಾಡಬೇಡಿ. ನೀವು ಪ್ರೀತಿಸಿದವರೊಂದಿಗೆ ನಿಮ್ಮ ವಿವಾಹವಾಗುವ ಸಾಧ್ಯತೆಗಳಿವೆ. ವಿದೇಶಿ ಪ್ರವಾಸದ ಯೋಗವಿದೆ. ಮನೆಯಲ್ಲಿ ಶುಭಕಾರ್ಯಗಳು ನಡೆಯಲಿವೆ. ಹಿರಿಯರನ್ನು ಗೌರವಿಸುವುದರಿಂದ ನಿಮ್ಮ ಘನತೆ ಗೌರವ ಹೆಚ್ಚಾಗಲಿದೆ. ಕ್ಯಾಮರಾ, ಐದು ವರ್ಷಗಳ ಡೈರಿ, ಅಡುಗೆ ಪುಸ್ತಕಗಳು, ಟೆಡ್ಡಿ ಬಿಯರ್, ಅಲಂಕೃತವಾದ ಗ್ಲಾಸ್‌ಗಳು, ವೈಯಕ್ತಿಕತೆಗೆ ಸ್ಪಂದಿಸುವ ಉಡುಗೊರೆಗಳು ತುಂಬಾ ಇಷ್ಟವಾಗುತ್ತವೆ.

capricorn
ಮಕರ - Capricorn

ಈ ರಾಶಿಯವರಿಗೆ ಉಡುಗೊರೆ ತುಂಬಾ ಇಷ್ಟವಾಗುತ್ತದೆ. ಕಣ್ಣಿಗೆ ಆಕರ್ಷಕವಾಗಿ ಕಾಣುವ ಉಡುಗೊರೆ ಇವರ ಮನವನ್ನು ಸೆಳೆಯುತ್ತದೆ. ನೀವು ಪ್ರೀತಿಸುವ ವ್ಯಕ್ತಿಗಳಿಗೆ ಕ್ರಿಸ್ಟ್‌ಮಸ್ ಕೊಡುಗೆ ತುಂಬಾ ಸ್ಮರಣಿಯವಾಗಿರಲಿದೆ. ನಿಮ್ಮ ಆಸೆಗಳು ಈಡೇರಲಿವೆ. ಬಯಸಿದ ವ್ಯಕ್ತಿಯೊಂದಿಗೆ ನಿಮ್ಮ ಮದುವೆಯಾಗಲಿದೆ. ಮನೆಯಲ್ಲಿ ಶುಭ ಕಾರ್ಯಗಳು ನಡೆಯಲಿವೆ. ನಿಮ್ಮನ್ನು ಪ್ರಿತಿಸುವವರಿಗೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಉಡುಗೊರೆಯಾಗಿ ನೀಡಿ. ದುಂದು ವೆಚ್ಚ ಬೇಡ. ಗೆಳೆಯರನ್ನು ನಂಬಿ ಹಣಕಾಸಿನ ವ್ಯವಹಾರ ಬೇಡ. ಮನೆಯಲ್ಲಿ ಶುಭಕಾರ್ಯಗಳು ನಡೆಯಲಿವೆ. ಗುರು ಹಿರಿಯರನ್ನು ಗೌರವಿಸಿ. ಉತ್ತಮ ಆರೋಗ್ಯ ವಿದೇಶ ಪ್ರವಾಸ ಸಾಧ್ಯತೆ.

aquarius
ಕುಂಭ - Aquarius

ನಿಸರ್ಗದ ಚೆಲುವಿಗೆ, ಪುಸ್ತಕಗಳಿಗೆ ಮಾರುಹೋಗುವ ಗುಣವನ್ನು ಹೊಂದಿರುತ್ತಾರೆ. ನಿಮ್ಮ ಅಭಿಲಾಷೆಗಳು ಪ್ರಸಕ್ತ ವರ್ಷದಲ್ಲಿ ಈಡೇರಲಿವೆ. ನೀವು ಮೆಚ್ಚಿದ ಯುವಕ ಅಥವಾ ಯುವತಿಯೊಂದಿಗೆ ವಿವಾಹ ನೇರವೇರುತ್ತದೆ. ದೂರದ ಊರಿನಿಂದ ಉದ್ಯೋಗದ ಕರೆ ಬರುವ ನಿರೀಕ್ಷೆಗಳಿವೆ. ಇತರರೊಂದಿಗೆ ಹಣದ ವ್ಯವಹಾರ ನಿಮಗೆ ನಷ್ಟ ತರಲಿದೆ. ಗೆಳೆಯರನ್ನು ನಂಬಿ ಹಣ ನೀಡಬೇಡಿ. ಪತಿ ಮತ್ತು ಪತ್ನಿಯ ಮಧ್ಯೆ ಪ್ರೇಮ ಸಲ್ಲಾಪ ಹೆಚ್ಚಾಗಲಿದೆ. ದುಂದು ವೆಚ್ಚ ನಿಮಗೆ ಸಂಕಷ್ಟ ತರಲಿದೆ ಎನ್ನುವುದು ಮರೆಯಬೇಡಿ. ರೇಷ್ಮೆ ಸ್ಕಾರ್ಫ್ ಮತ್ತು ಅಲಂಕೃತ ಕುಶನ್‌ಗಳು ಅಥವಾ ಇಷ್ಟದ ಕಲಾಕಾರನ ಪೇಟಿಂಗ್ ಚಿತ್ರಗಳು ನೀಡಬಹುದು. ಸುಗಂಧ ದೃವ್ಯಗಳನ್ನು ನೀಡಬಹುದು.

pisces
ಮೀನ - Pisces

ಹಿತಚಿಂತಕರ ನೆರವಿನಿಂದ ಕುಟುಂಬ ಸುವ್ಯವಸ್ಥೆಗೆ ಮಾರ್ಗೋಪಾಯಗಳು. ಔದ್ಯೋಗಿಕ ರಂಗದಲ್ಲಿ ಏರುಪೇರುಗಳ ಭೀತಿ. ಸಾಲದಾತರ ಸೊಕ್ಕು ಮುರಿಯಲು ದಿಟ್ಟ ನಿರ್ಧಾರ. ಸಮಸ್ಯೆಗಳ ನಿಮಿತ್ತ ಸುತ್ತಾಟ. ಅದೃಷ್ಟ ಸಂಖ್ಯೆ 2.

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech