Close X
Kannadahanigalu - Daily Astrology in Kannada
Daily Astrology
September 22,2017
aries
ಮೇಷ - Aries

ಪತ್ರಿಕೋದ್ಯಮಿಗಳಿಗೆ ವಿಶೇಷ ದಿನ. ಹೆಚ್ಚಿನ ಕೆಲಸಗಳ ಜವಾಬ್ದಾರಿ ನಿಮಗೊಪ್ಪಿಸುವರು. ಸಂಜೆ ಮನೆಯವರೊಂದಿಗೆ ದೇವಸ್ಥಾನಕ್ಕೆ ಹೋಗುವಿರಿ.

taurus
ವೃಷಭ - Taurus

ತಾಳ್ಮೆಯಿಂದ ನಡೆದುಕೊಂಡಲ್ಲಿ ಜಾಹಿರಾತು ಕ್ಷೇತ್ರದಲ್ಲಿ ಉತ್ತಮ ಅವಕಾಶಗಳು ಸಿಗಲಿವೆ. ಗೃಹಿಣಿಯರಿಗೆ ವಿಶೇಷ ದಿನ. ಆಕಸ್ಮಿಕ ಧನಲಾಭ.

gemini
ಮಿಥುನ - Gemini

ನಿಮ್ಮ ಇಂದಿನ ಹೆಚ್ಚಿನ ಸಮಯವೆಲ್ಲವನ್ನು ನಿಶ್ಚಿತ ಗುರಿ ತಲುಪಲು ಮೀಸಲಾಗಿಡುವಿರಿ. ಸದ್ಯದ ಪರಿಸ್ಥಿತಿಯಲ್ಲಿ ಹಣದ ಬಗ್ಗೆ ಯೋಚಿಸಬೇಕಾಗಿಲ್ಲ.

cancer
ಕರ್ಕಾಟಕ - Cancer

ಸ್ನೇಹ ಸಂಬಂಧಗಳಿಗೆ ಹೆಚ್ಚಿನ ಪ್ರಾಶಸ್ತ್ಯನೀಡುವಿರಿ. ಹಿಡಿದ ಕಾರ್ಯಗಳು ಕೈಗೂಡಲಿವೆ. ಜಮೀನು ಕೊಳ್ಳುವ ವಿಚಾರದಲ್ಲಿ ಯಾರ ಮಧ್ಯಸ್ತಿಕೆಯೂ ಬೇಡ.

leo
ಸಿಂಹ - Leo

ಪ್ರಮುಖ ನಿರ್ಧಾರಗಳನ್ನು ಆತುರವಾಗಿ ತೆಗೆದುಕೊಳ್ಳುವ ಪ್ರಯತ್ನ ಬೇಡ. ಮಗನ ವ್ಯವಹಾರಕ್ಕೆ ಸಂಬಂಧಿಸಿದ ಶುಭ ಸುದ್ಧಿ ಬರಲಿದೆ.

virgo
ಕನ್ಯಾ - Virgo

ಪುಟ್ಟದೊಂದು ಪ್ರಯಾಣ ಹೆಚ್ಚಿನ ಹುರುಪು ತುಂಬಲಿದೆ. ಸಾಮಾಜಿಕ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ಪ್ರಶಂಸೆಗೆ ಒಳಗಾಗುವಿರಿ.

libra
ತುಲಾ - Libra

ಸಾಹಿತ್ಯಾಸಕ್ತರ ವಲಯದಲ್ಲಿ ನೀವು ಗಂಭೀರ ಚರ್ಚೆ ನಡೆಸುವಿರಿ. ಹೆಚ್ಚಿನ ಸೌಲಭ್ಯ ಬೇಕೆಂಬ ಕಾರ್ಮಿಕರ ಬೇಡಿಕೆ ಬಗ್ಗೆ ಮಾಹಿತಿ ಸಂಗ್ರಹಿಸುವಿರಿ.

scorpio
ವೃಶ್ಚಿಕ - Scorpio

ನಿಮ್ಮ ಆಂತರಿಕ ಶಕ್ತಿಯನ್ನು ಅರಿತುಕೊಂಡು ಕನಸಿನ ಯೋಜನೆಗಳಿಗೆ ಸ್ಪಷ್ಟ ರೂಪ ನೀಡುವಿರಿ. ನಿಮ್ಮ ಉತ್ತಮ ಕೆಲಸಗಳು ಅಭಿನಂದನೆಗೆ ಪಾತ್ರವಾಗಲಿವೆ.

sagittarius
ಧನು - Sagittarius

ನೀವು ಕೈಗೊಳ್ಳಲಿರುವ ನಿರ್ಧಾರಗಳು ನಿಮ್ಮ ಮನೆಯವರಿಗೆ ತಿಳಿದಿರಲಿ. ಸ್ನೇಹಿತರೊಂದಿಗೆ ಹೊರಗಡೆ ಸುತ್ತಾಡಲು ಹೋಗುವಿರಿ.

capricorn
ಮಕರ - Capricorn

ಕೆಲಸದ ಒತ್ತಡ ಹೆಚ್ಚಾಗಲಿದೆ. ಹಲವು ಯೋಜನೆಗಳಲ್ಲಿ ಕೊನೆ ನಿಮಿಷದ ಬದಲಾವಣೆಗಳಾಗುವ ಸಾಧ್ಯತೆಗಳಿವೆ. ನಿಗದಿತ ಸಮಯದಲ್ಲಿ ಕೆಲಸ ಮುಗಿಸಲು ಯತ್ನಿಸುವಿರಿ.

aquarius
ಕುಂಭ - Aquarius

ಕಲಿತಿರುವ ವಿಷಯಗಳನ್ನು ಪ್ರಾಯೋಗಿಕವಾಗಿ ಬಳಕೆಗೆ ತರಲು ಸುದಿನ. ವ್ಯಾಪಾರಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ನಾನಾ ಮೂಲಗಳಿಂದ ಮಾಹಿತಿ ಸಂಗ್ರಹಿಸುವಿರಿ.

pisces
ಮೀನ - Pisces

ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವಲ್ಲಿ ಯಶಸ್ವಿಯಾಗುವಿರಿ. ವಾಸ್ತವ ಮತ್ತು ಭಾವನೆಗಳ ನಡುವೆ ಸಮತೋಲನ ಕಾಪಾಡಿಕೊಳ್ಳಲು ಪ್ರಯತ್ನಿಸುವಿರಿ.

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech