Close X

ಯೋಗರಾಜ್ ಭಟ್ ಮತ್ತು ಗಣೇಶ್ ಮತ್ತೊಂದು ಮುಂಗಾರು ಮಳೆಯನ್ನು ನೀಡಲು ಒಂದಾಗಲಿದ್ದಾರೆಯೇ ?

ಮುಂಗಾರು ಮಳೆಯಿಂದಾಗಿ ಗಣೇಶ್ ಗೋಲ್ಡನ್ ಸ್ಟಾರ್ ಆದರೆ, ಯೋಗರಾಜ್ ಭಟ್ ದೊಡ್ಡ ಸ್ಟಾರ್ ಡೈರೆಕ್ಟರ್ ಆದರು. ಇವರಿಬ್ಬರ ಕಾಂಬಿನೇಷನ್ನಲ್ಲಿ ಬಂದದ್ದೇ ಎರಡು ಚಿತ್ರಗಳು. ಮತ್ತೊಂದು ಚಿತ್ರ ಅಂದ್ರೆ ಗಾಳಿಪಟ. ಎರಡು ಸೂಪರ್ ಹಿಟ್ ಚಿತ್ರವಾಯಿತು. ಆಮೇಲೆ ಯಾಕೋ ಇಬ್ಬರು ಸೇರಲೆ ಇಲ್ಲ. ಅಭಿಮಾನಿಗಳು ಇವರಿಬ್ಬರು ಯಾವಾಗ ಒಂದಾಗಿ ಸೇರಿ ಮತ್ತೊಂದು ಮುಂಗಾರು ಮಳೆಯನ್ನು ಕೊಡುತ್ತಾರೋ ಎಂದು ಹಾತೊರೆಯುತ್ತಿದ್ದಾರೆ. ಅವರುಗಳಿಗೆಲ್ಲಾ ಇಲ್ಲಿ ಒಂದು ಚಿಕ್ಕ ಸಂತೋಷದ ಗಾಳಿ ಸುದ್ದಿಯಿದೆ.

Yograj bhat and Golden star Ganesh together againಮಣಿ ಚಿತ್ರದ ನಿರ್ಮಾಪಕ ಕರಿಸುಬ್ಬು ಮತ್ತು ರಂಗ ಎಸ್. ಎಸ್. ಎಲ್. ಸಿ ಚಿತ್ರದ ನಿರ್ಮಾಪಕ ಎನ್. ಕುಮಾರ್ ಇವರಿಬ್ಬರ ಜಂಟಿ ನಿರ್ಮಾಣದಲ್ಲಿ ಯೋಗರಾಜ್ ಭಟ್ ಚಿತ್ರವೊಂದನ್ನು ನಿರ್ದೇಶಿಸಲಿದ್ದಾರೆ. ಮಣಿ ಮತ್ತು ರಂಗಾ ಎಸ್. ಎಸ್. ಎಲ್. ಸಿ ಚಿತ್ರಗಳು ಯೋಗರಾಜ್ ಭಟ್‌ರ ಮುಂಗಾರು ಮಳೆಯ ಮೊದಲಿನ ಚಿತ್ರಗಳು. ಇವರಿಬ್ಬರು ನಿರ್ಮಾಪಕರುಗಳು ಯೋಗರಾಜ್ ಭಟ್‌ಗೆ ಒಳ್ಳೆ ಉತ್ತೇಜನ ಕೊಟ್ಟ ಸಿನಿಮಾ ಇಂಡಸ್ಟ್ರೀನಲ್ಲಿ ಬೆಳೆಸಿದರಿಂದ, ಯೋಗರಾಜ್ ಭಟ್ ಸ್ವತಃ ತಾವೇ ಎನ್. ಕುಮಾರ್‌ರವನ್ನು ತಮ್ಮ ಆಫೀಸಿಗೆ ಕರೆದು ಚಿತ್ರ ಮಾಡುವುದಾಗಿ ತಿಳಿಸಿದರು ಎಂದಿದ್ದಾರೆ ಎನ್. ಕುಮಾರ್. ಈ ಚಿತ್ರ ಏಪ್ರಿಲ್ 15ಕ್ಕೆ ಸೆಟ್ಟೇರಲಿದೆಯಂತೆ.

ಚಿತ್ರದ ನಾಯಕ ಆಯ್ಕೆಯನ್ನು ನಿರ್ಮಾಪಕರುಗಳಿಗೆ ಬಿಟ್ಟಿದ್ದು, ಚಿತ್ರದ ಸ್ಕ್ರಿಪ್ಟ್‌ನ್ನು 45 ದಿನಗಳಲ್ಲಿ ತಯಾರಿಸುವುದಾಗಿ ಯೋಗರಾಜ್ ಭಟ್ ಹೇಳಿದ್ದಾರೆ. ಉಳಿದ ಕಲಾವಿದರ ಮತ್ತು ತಂತ್ರಜ್ಞರ ಆಯ್ಕೆಯನ್ನು ಯೋಗರಾಜ್ ಭಟ್ ನೋಡಿಕೊಳ್ಳುತ್ತಾರಂತೆ.

ಯೋಗರಾಜ್ ಭಟ್ ಗಣೇಶ್‌ನನ್ನೇ ತಮ್ಮ ಹೊಸ ಚಿತ್ರದ ನಾಯಕನನ್ನಾಗಿ ಆಯ್ಕೆ ಮಾಡಲೆಂದು ಗೋಲ್ಡನ್ ಸ್ಟಾರ್ ಗಣೇಶ್ ಅಭಿಮಾನಿಗಳ ಪ್ರಾರ್ಥನೆ. ಇದರಿಂದಾಗಿ ಮತ್ತೊಂದು ಮಹೋನ್ನತ ಚಿತ್ರವಾಗಲಿ ಎಂಬುದು ಪ್ರೇಕ್ಷಕರ ಆಸೆ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech