Close X

ಪಡ್ಡೆ ಹುಡುಗರ ನಿದ್ದೆ ಕೆಡಿಸಿಲು ಪ್ರಿಯಾಮಣಿ ಐಟಂ ಡ್ಯಾನ್ಸ್ ಮಾಡಲಿದ್ದಾರೆ…

ಬಹುಭಾಷಾ ನಟಿ ಪ್ರಿಯಾಮಣಿ ತಮ್ಮ ನೆಚ್ಚಿನ ನಟ ಶಾರುಖ್ ಖಾನ್‌ರ ಹೊಸ ಚಿತ್ರ ಚೆನೈ ಎಕ್ಸ್‌ಪ್ರೆಸ್‌ನಲ್ಲಿ ಐಟಂ ಡ್ಯಾನ್ಸ್ ಒಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ರೋಹಿತ್ ಶೆಟ್ಟಿ ನಿರ್ದೇಶಿಸುತ್ತಿದ್ದು, ಕನ್ನಡದ ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಮೊದಲು ನಯನ್‌ತಾರರನ್ನು ಕೇಳಲಾಗಿತ್ತು. ಆದರೆ ಅವರು ಐಟಂ ಡ್ಯಾನ್ಸ್ ಮಾಡಲು ನಿರಾಕರಿಸಿದರ ಪರಿಣಾಮ ಪ್ರಿಯಾಮಣಿಗೆ ತಮ್ಮ ನೆಚ್ಚಿನ ನಾಯಕ ಶಾರುಖ್ ಖಾನ್‌ರ ಜೊತೆ ಕುಣಿಯಲು ಛಾನ್ಸ್ ಸಿಕ್ಕಿದೆ.

tamil-actress-priyamani-stunning-masala-photosಬಹುಭಾಷಾ ನಟಿ, ರಾಷ್ಟ್ರೀಯ ಪ್ರಶಸ್ತಿ ವಿಜೇತೆ ಪ್ರಿಯಾಮಣಿ, ಈ ನ್ಯೂಸ್‌ನ್ನು ದೃಢೀಕರಿಸಿದ್ದಾರೆ. ಪ್ರಿಯಾಮಣಿ ಶಾರುಖ್ ಖಾನ್‌ರ ದೊಡ್ಡ ಅಭಿಮಾನಿಯಾಗಿದ್ದು, ಈ ಹಿಂದೆ ರಾಷ್ಟ್ರೀಯ ಪ್ರಶಸ್ತಿ ಪಡೆಯುವಾಗಲು, ತಮ್ಮ ನೆಚ್ಚಿನ ನಟ ಪ್ರಶಸ್ತಿ ಪಡೆಯುವ ದಿನದಂದೆ ತಾನು ಪ್ರಶಸ್ತಿ ಪಡೆಯುತ್ತಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದ್ದರು. ಈ ಐಟಂ ಹಾಡಿನೊಂದಿಗೆ ತಮ್ಮ ನೆಚ್ಚಿನ ನಟ ಶಾರುಖ್ ಖಾನ್‌ ಜೊತೆ ನಟಿಸುವ ಭಾಗ್ಯ ದೊರೆತಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಈ ಮೊದಲೆ ಪ್ರಿಯಾಮಣಿ ಬಾಲಿವುಡ್‌ನಲ್ಲಿ ಮಣಿರತ್ನಂರ ರಾವನ್ ಚಿತ್ರದಲ್ಲಿ ನಟಿಸಿದ್ದು, ಶಾರುಖ್ ಖಾನ್‌ರ ಜೊತೆಗಿನ ಚಿತ್ರ ಅವರಿಗೆ ಇನ್ನೂ ಹೆಚ್ಚು ಯಶಸ್ಸನ್ನು ತಂದುಕೊಡಲೆಂದು ಆಶಿಸುತ್ತೇವೆ.

ಚಿತ್ರದ ಹೆಸರೆ ಹೇಳುವಂತೆ ಇದು ದಕ್ಷಿಣ ಭಾರತದ ಚಿತ್ರವಾಗಿರುವುದರಿಂದ ಚಿತ್ರದ ತಯಾರಕರು, ದಕ್ಷಿಣ ಭಾರತದ ನಟಿಯನ್ನೇ ಹುಡುಕುತಿದ್ದು, ಪ್ರಿಯಾಮಣಿಯ ಒಪ್ಪಿಗೆಯೊಂದಿಗೆ ಅವರ ಆಶಯ ಈಡೇರಿದೆ.

ಇತ್ತೀಚಿನ ದಿನಗಳಲ್ಲಿ ಗ್ಲಾಮ್‌ರಸ್ ನಟಿಯಾಗಿ ಪರಿಣಮಿಸಿದ್ದು, ಇದಕ್ಕಾಗಿಯೇ ಕೆಲವು ದಿನಗಳ ಹಿಂದೆ ತೆಳ್ಳಗೆ ಸಣ್ಣಗೆ ಕಾಣಲು ತಮ್ಮ ದೇಹ ತೂಕವನ್ನು ಸಹ ಇಳಿಸಿಕೊಂಡಿದ್ದಾರೆ. ಸದ್ಯಕ್ಕೆ ತೆಲುಗಿನಲ್ಲಿ ಸ್ತ್ರೀ ಕೇಂದ್ರಿತ ಚಿತ್ರವೊಂದರಲ್ಲಿ ಪ್ರಿಯಾಮಣಿ ಬ್ಯುಸಿಯಾಗಿದ್ದಾರೆ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech