Close X

ಸುದೀಪ್‌ನ ಹೊಸ ಚಿತ್ರದ ನಿರ್ದೇಶನದಿಂದ ಹೊರಬಿದ್ದ ಪ್ರೇಮ್

“ವರದನಾಯಕ” ಚಿತ್ರದ ಪ್ರೆಸ್ ಮೀಟ್‌ನಲ್ಲಿ ಪ್ರೇಮ್ ನಿರ್ದೇಶನದಲ್ಲಿ ಕಿಚ್ಚ ಸುದೀಪ್ ಅಭಿನಯಿಸಲಿದ್ದು, ಇದನ್ನು ನಿಮಿಷಾಂಬಾ ಚಂದ್ರಶೇಖರ್ ನಿರ್ಮಿಸಲಿದ್ದರು. ಈ ಚಿತ್ರವನ್ನು ಪ್ರೇಮ್ ಹೊಸ ವರ್ಷದ ರಾತ್ರಿ ಅಂದರೆ 31ನೇ ಡಿಸೆಂಬರ್ 2012ರ ರಾತ್ರಿ 12:00 ಗಂಟೆಗೆ ಪ್ರಕಟಿಸಲಾಗುವುದೆಂದು ತಿಳಿಸಿದ್ದರು. ಹೊಸ ವರ್ಷ ಕಳೆದು ಒಂದು ತಿಂಗಳಾದರು ಚಿತ್ರದ ಪ್ರಕಟಣೆಯ ಸುದ್ದಿ ತಿಳಿಯಲೇ ಇಲ್ಲ. ಆದರೆ ಇದೀಗ ಈ ಇಬ್ಬರ ಅಭಿಮಾನಿಗಳಿಗೆ ಶಾಕ್ ನೀಡುವಂತಹ ನ್ಯೂಸ್ ಹೊರಬಿದ್ದಿದೆ. ಪ್ರೇಮ್ ಈ ಚಿತ್ರವನ್ನು ನಿರ್ದೇಶಿಸುತ್ತಿಲ್ಲವಂತೆ.

Director Prem out from sudeep new movieಕರ್ಪೂರದ ಗೊಂಬೆ, ಅಣ್ಣಯ್ಯ ಮತ್ತು ಬಿಂದಾಸ್‌ನಂತಹ ಹಿಟ್ ಚಿತ್ರಗಳನ್ನು ನಿರ್ಮಿಸಿರುವ ನಿಮಿಷಾಂಬಾ ಚಂದ್ರಶೇಖರ್ ಕಿಚ್ಚ ಸುದೀಪ್ ಅಭಿನಯದ ಪ್ರೇಮ್ ನಿರ್ದೇಶನದ ಈ ಚಿತ್ರವನ್ನು ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಕೆ. ಸಿ. ಎನ್ ಕುಮಾರ್‌ರ ನಿರ್ಮಾಣದ ಚಿತ್ರದ ಶೂಟಿಂಗ್ ಮುಗಿದ ಮೇಲೆ ಶುರುವಾಗಬೇಕಿತ್ತು. ಆದರೆ ಇದೀಗ ಈ ಚಿತ್ರದ ನಿರ್ದೇಶಕನ ಸ್ಥಾನದಿಂದ ಪ್ರೇಮ್ ಹೊರಬಿದ್ದಿದ್ದು, ಚಂದ್ರಶೇಖರ್ ಹೊಸ ನಿರ್ದೇಶಕನ ಹುಡುಕಾಟದಲ್ಲಿದ್ದಾರೆ.

ಸೌಂದರ್ಯ ಜಗದೀಶ್ ನಿರ್ಮಾಣದ ಚಿತ್ರವೊಂದನ್ನು ಪ್ರೇಮ್ ನಿರ್ದೇಶಿಸಲಿದ್ದು, ಮತ್ತೆರೆಡು ಚಿತ್ರಗಳಲ್ಲಿ ಪ್ರೇಮ್ ಬೇರೆ ನಿರ್ದೇಶಕರಡಿಯಲ್ಲಿ ಅಭಿನಯಿಸಲಿದ್ದಾರೆ. ಏತನ್ಮಧ್ಯೆ, ಪ್ರೇಮ್‌ಗೆ, ಕಿಚ್ಚ ಸುದೀಪ್‌ರಿಂದ ಒಂದು ಹೊಸ ಆಫರ್ ಬಂದಿದೆಯಂತೆ. ಸುದೀಪ್‌ರ ಹೋಮ್ ಬ್ಯಾನರ್‌ಗೆ ಪ್ರೇಮ್ ಚಿತ್ರವೊಂದನ್ನು ನಿರ್ದೇಶಿಸುವ ಆಫರ್. !!!

ಪ್ರೇಮ್ ಸುದೀಪ್‌ರನ್ನು ನಿರ್ದೇಶಿಸಲು ಆಗದಿದ್ದರೇನಂತೆ, ಅವರ ಹೋಮ್ ಬ್ಯಾನರ್‌ನ ಚಿತ್ರವನ್ನು ನಿರ್ದೇಶಿಸಲು ಚಾನ್ಸ್ ಸಿಕ್ಕಿದೆಯಲ್ಲ. ಅಷ್ಟೆ ಸಾಕು !

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech