Close X

ಪಗಡೆ ಆಡಿಯೋ ಬಿಡುಗಡೆ…..

ವಿಶ್ವಾಸ್ ಭಾರದ್ವಾಜ್ ಮತ್ತು ಗಮ್ಯ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಪಗಡೆ ಚಿತ್ರದ ಧ್ವನಿಸುರಳಿ ಬಿಡುಗಡೆ ಕಾರ್ಯಕ್ರಮವು ಇತ್ತೀಚೆಗೆ ಅದ್ದೂರಿಯಾಗಿ ನಡೆಯಿತು. ಪುರುಷೋತ್ತಮ್ ನಿರ್ದೇಶನದ, ಅಪ್ಪಣ್ಣ ನಿರ್ಮಾಣದ ಈ ಚಿತ್ರದ ಧ್ವನಿಸುರಳಿಯನ್ನು ಸ್ವಲ್ಪ ವಿಭಿನ್ನವಾಗಿಯೇ ಆಯೋಜಿಸಲಾಗಿತ್ತು. ಚಿತ್ರದ ಆಡಿಯೋ ಆಲ್ಬಮ್‌ನ್ನು ಕೆಲವು ಅಂಕಿಗಳಲ್ಲಿರುವ ಡಬ್ಬಗಳಲ್ಲಿಟ್ಟು, ನೆರೆದಿದ್ದ ವೀಕ್ಷಕರು ಯಾವ ಅಂಕಿಯ ಡಬ್ಬಿಯಲ್ಲಿ ಆಡಿಯೋ ಸಿಡಿ ಇದೆ ಎಂದು ಗುರುತಿಸುವ ಮೂಲಕ ಚಿತ್ರದ ಆಡಿಯೋವನ್ನು ಬಿಡುಗಡೆ ಮಾಡಲಾಯಿತು. ಈ ಆಟದಲ್ಲಿ ಹೊಸ ದಿಗಂತ ಪತ್ರಿಕೆಯ ಗಣೇಶ್ ರಾಣಿಬ್ಬೆನ್ನೂರು ಸರಿಯಾಗಿ ಗುರುತಿಸಿ ವಿಜೇತರಾದರು. ಚಿತ್ರದ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿರುವ ಯತಿರಾಜ್, ತಮ್ಮ ವಿಭಿನ್ನ ಶೈಲಿಯಲ್ಲಿ ಈ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.

Pagade_audio_launchಚಿತ್ರದ ನಾಯಕ ವಿಶ್ವಾಸ್ ಭಾರಧ್ವಾಜ್ ಮಾತನಾಡುತ್ತಾ ಚಿತ್ರದಲ್ಲಿ ತಮ್ಮ ಉತ್ತಮ ನಟನೆಯನ್ನು ತೋರಿದ ಹಿರಿಯ ನಟರುಗಳಾದ ರವಿಶಂಕರ್, ಅಶೋಕ್ ಮತ್ತು ಅಚ್ಯುತ್ ಕುಮಾರ್‌ರವರುಗಳಿಗೆ ಧನ್ಯವಾದವನ್ನು ತಿಳಿಸಿದರು. ಚಿತ್ರದ ತಯಾರಿಕ ಸಮಯದಲ್ಲಿ ಭೇಟಿ ನೀಡಿದ್ದ ಛಾಲೆಂಜಿಂಗ್ ಸ್ಟಾರ್ ದರ್ಶನ್‌ ಹತ್ತಿರ ಕೆಲವು ಸಲಹೆಗಳನ್ನು ಪಡೆದೆನೆಂದು ತಿಳಿಸಿದರು.

ಸಾಗರ್ ನಾಗಭೂಷನ್ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದು, ಈ ಹಾಡುಗಳನ್ನು ಕವಿರಾಜ್, ಶಿವನಂಜೆ ಗೌಡ, ಸಂತೋಷ್ ನಾಯಕ್ ಮತ್ತು ವಿಜಯ್ ಭರಮಸಾಗರ ಬರೆದಿದ್ದಾರೆ.

ಉಳಿದಂತೆ ಪಗಡೆ ಚಿತ್ರದ ತಾರಾ ಬಳಗದಲ್ಲಿ ರವಿಶಂಕರ್, ಅಶೋಕ್, ಧರ್ಮ, ಅಚ್ಯುತ್ ಕುಮಾರ್, ಟೆನ್ನಿಸ್ ಕೃಷ್ಣ, ಹೊನ್ನವಳ್ಳಿ ಕೃಷ್ಣ, ಬಿರಾದರ್, ಶ್ರೀನಿವಾಸ ಪ್ರಭು, ಮುಂತಾದವರು ನಟಿಸಿದ್ದಾರೆ.

Picture Courtesy : Chitraloka.com

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech