Close X

ಮಾರ್ಚ್ 4ರಿಂದ “ನೀರ್‌ದೋಸೆ” ಶೂಟಿಂಗ್

ಜಗ್ಗೇಶ್ ಮತ್ತು ಕನ್ನಡದ ಲಕ್ಕಿ ಸ್ಟಾರ್ ರಮ್ಯ‌ ಜೊತೆಗೆ ನಟಿಸುತ್ತಿರುವ ನೀರ್‌ದೋಸೆ ಚಿತ್ರವು ಮಾರ್ಚ್ 4ರಿಂದ ಶೂಟಿಂಗ್ ಆರಂಭಿಸಲಿದೆ. ವಿಜಯ್ ಪ್ರಸಾದ್ ನಿರ್ದೇಶನದ ಈ ಚಿತ್ರವನ್ನು ಸುದೀಂದ್ರ ನಿರ್ಮಿಸುತ್ತಿದ್ದಾರೆ. ಸುದೀಂದ್ರ ಈ ಮೊದಲು ಕಿಶೋರ್ ನಾಯಕನಾಗಿ ನಟಿಸಿದ “ಹುಲಿ” ಚಿತ್ರವನ್ನು ನಿರ್ಮಿಸಿದ್ದರು. ಕೆಲವು ಕಾರಣಾಂತರಗಳಿಂದ ಫೆ. 28ಕ್ಕೆ ಆರಂಭವಾಗಬೇಕಿದ್ದ ಶೂಟಿಂಗ್ ಈಗ ಮಾರ್ಚ್ 4ರಿಂದ ಶುರುವಾಗುತ್ತಿದೆ.

Neer-dose-movie-shootingಈ ಮೊದಲು ರಮ್ಯ ಟ್ವೀಟ್ಸ್ ಮೂಲಕ ಈ ಚಿತ್ರದಿಂದ ಹೊರಗುಳಿಯುವ ಇಚ್ಚೆಯನ್ನು ವ್ಯಕ್ತಪಡಿಸಿದ್ದರು. ಆದರೀಗ ಅವರು ಮನಸ್ಸು ಬದಲಾಯಿಸಿದ್ದು, ಚಿತ್ರದಲ್ಲಿ ಉಳಿಯುವ ನಿರ್ದಾರ ಮಾಡಿದ್ದಾರೆ.

ಚಿತ್ರದ ನಿರ್ದೇಶಕ ವಿಜಯ್ ಪ್ರಸಾದ್ ಹೇಳುವುದು ಹೀಗೆ – “ಚಿತ್ರದ ಸ್ಕ್ರಿಪ್ಟ್‌ನಲ್ಲಿ ಅಥವಾ ತಂತ್ರಜ್ಞರಲ್ಲಿ ಯಾವುದೇ ಬದಲಾವಣೆಯಿಲ್ಲ. ಜಗ್ಗೇಶ್ ಸೇರಿಸಿ ಎಲ್ಲಾ ಕಲಾವಿದರು ಒಪ್ಪಿದ್ದ ಸ್ಕ್ರಿಪ್ಟ್‌ನ್ನೇ ಚಿತ್ರವನ್ನಾಗಿ ಮಾಡಲಾಗುವುದು. ಸಿದ್ಲಿಂಗ್ಲು ಚಿತ್ರದ ತಂತ್ರಜ್ಞರ ನೆರವನ್ನೇ ಈ ಚಿತ್ರಕ್ಕೂ ಬಳಸಲಾಗುವುದು”.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech