Close X

ಬೃಂದಾವನದಲ್ಲಿ ದರ್ಶನ್‌ಗೆ ರಾಧೆಯಾಗಿ ವೇಧಿಕಾ ಅಲ್ಲ ಮುಕ್ತ ಜಾರ್ಜ್

ಛಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಬೃಂದಾವನದಲ್ಲಿ ವೇಧಿಕಾರನ್ನು ಬದಲಿಸಿದ ಮುಕ್ತ ಜಾರ್ಜ್. ಮುಂದಿನ ದರ್ಶನ್ ಚಿತ್ರ ಬೃಂದಾವನದಲ್ಲಿ ವೇಧಿಕಾ ಹಿಂದೆ ಸರಿದಿದ್ದು, ಇದರಿಂದ ಭಾನು ಹೆಸರಿನಿಂದ ಪ್ರಖ್ಯಾತಳಾಗಿರುವ ಬಹುಭಾಷ ನಟಿ ಮುಕ್ತ ಜಾರ್ಜ್ ಅದೃಷ್ಟ ಪಡೆದಿದ್ದಾಳೆ. ಇವಳ ಜೊತೆಗೆ ಮತ್ತೊಬ್ಬ ಬಹುಭಾಷಾ ನಟಿ ಕಾರ್ತಿಕಾ ನಟಿಸುತ್ತಿದ್ದಾಳೆ. ವೇಧಿಕಾ ಹಿಂದೆ ಸರಿದಿರುವುದಕ್ಕೆ ಯಾವುದೇ ಕಾರಣ ತಿಳಿದುಬಂದಿಲ್ಲ.

ಮುಕ್ತ ಈಗಾಗಲೇ ಭಾನು ಹೆಸರಿನಿಂದ ತಮಿಳಿನಲ್ಲಿ ಪ್ರಖ್ಯಾತಳಾಗಿದ್ದಾಳೆ. ಹಾಗೆಯೇ, ಮಲಯಾಳಂ, ತೆಲುಗು ಚಿತ್ರಗಳಲ್ಲಿಯೂ ನಟಿಸಿದ್ದಾಳೆ. ಈ ಚಿತ್ರದೊಂದಿಗೆ ದಕ್ಷಿಣ ಭಾರತದ ಎಲ್ಲಾ 4 ಭಾಷೆಗಳಲ್ಲಿಯೂ ನಟಿಸಿದ ಖ್ಯಾತಿ ಇವಳದ್ದಾಗುತ್ತದೆ.

Tamil actress bhanu replaces Vedhika in Brindavanaಅವಳೆ ಹೇಳುವಂತೆ “ಇದುವರೆವಿಗೂ ನನ್ನನ್ನು ಸರಳ ಹುಡುಗಿಯಾಗಿ ಬಿಂಬಿಸಲಾಗಿದೆ. ಈ ಚಿತ್ರದ ಹೊಸ ಪಾತ್ರದಿಂದಾಗಿ, ನಾನೊಂದು ಮಾಡರ್ನ್ ಹುಡುಗಿಯಾಗಿ ಕಾಣಿಸಿಕೊಳ್ಳುತ್ತೇನೆ. ಇದರಿಂದ ಬಹಳ ಖುಷಿಯಾಗಿದೆ ಹಾಗೂ ಉದ್ವೇಗ ಕೂಡ ಹೆಚ್ಚಿದೆ. ತೆಲುಗಿನಲ್ಲಿ ಸಮಂತ ಮಾಡಿದ ಪಾತ್ರವನ್ನು ನಾನು ಇಲ್ಲಿ ಮಾಡುತ್ತೇನೆ. ಫೆಬ್ರವರಿ 16ಕ್ಕೆ ದರ್ಶನ್‍ರ ಹುಟ್ಟುಹಬ್ಬದ ದಿನದಂದು ಈ ಚಿತ್ರ ಸೆಟ್ಟೇರುತ್ತಲಿದ್ದು, ಈ ಚಿತ್ರದ ಮುಹೂರ್ತದಲ್ಲಿ ಪಾಲ್ಗೊಳ್ಳುತ್ತಿದ್ದೇನೆ.”.

ಮುಕ್ತ ಮೊದಲು ಟಿ. ವಿ. ಸೀರಿಯಲ್‌ಗಳಲ್ಲಿ ತನ್ನ ನಟನೆಯನ್ನು ಶುರುಮಾಡಿದ್ದು, ನಂತರದ ದಿನಗಳಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ಅವಳ ಮೊದಲನೆಯ ಚಿತ್ರ 2005ರಲ್ಲಿ ಮಲಯಾಳಂನ “Achanurangatha Veedu”.

Mukta Else George Latest Photoshoot Gallery : Click Here

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech