Close X

CCL season 3 ಫೆಬ್ರವರಿ 3ರಿಂದ ಚಾಲನೆ

ನಿಮಗೆಲ್ಲಾ ತಿಳಿದಿರುವಂತೆ, ಸೆಲೆಬ್ರಿಟಿಗಳೂ ಈಗ ಕ್ರಿಕೆಟ್ ಮೂಲಕ ಜನರನ್ನು ಮನರಂಜಿಸಲು ಶುರುಮಾಡಿದ್ದಾರೆ. ಹಾಗಾಗಿ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL) ಅನ್ನುವುದನ್ನು ಹುಟ್ಟುಹಾಕಿ ಇದೀಗ ಮೂರನೇ ಅವತರಣಿಕೆಗೆ ಸಜ್ಜಾಗಿದೆ. ಮುಂಬಯಿಯಲ್ಲಿ ಅದ್ದೂರಿಯಾಗಿ CCL 3 ಕ್ಕೆ ಚಾಲನೆ ದೊರೆತಿದೆ. ಈ ಕಾರ್ಯಕ್ರಮವು ಸ್ಟಾರ್ ಪ್ಲಸ್‌ನಲ್ಲಿ ಇದೇ ಫೆಬ್ರವರಿ 3ರಂದು ಸಂಜೆ 6ಕ್ಕೆ ಪ್ರಸಾರಗೊಳ್ಳಲಿದೆ. ಅದರ ಪ್ರೋಮೋವನ್ನು ಈಗಾಗಲೇ ಟಿ.ವಿ ಚಾನಲ್‌ಗಳಲ್ಲಿ ನೀವು ಕಾಣಬಹುದು. ಅದರ ತುಣುಕು ನಿಮ್ಮಗಳಿಗೆ ಇಲ್ಲಿದೆ.

CCL 3 Curtain Raiser event at mumbai

CCL 3 Curtain Raiser event at mumbai

ಇದರ ಪ್ರೋಮೋ ವಿಡಿಯೋ :

CCL season 3ಯ ಪಂದ್ಯಗಳ ವೇಳಾ ಪಟ್ಟಿ ಈ ಕೆಳಕಂಡಂತಿದೆ. ನಿಮಗೆ ಸುಲಭವಾಗಲೆಂದು ಕಿಚ್ಚನ ಕರ್ನಾಟಕ ಬುಲ್ಡೋಜರ್ಸ್ ತಂಡ ಆಡುವ ಪಂದ್ಯಗಳ ದಿನಗಳನ್ನು ಗುರುತು ಮಾಡಿದ್ದೇನೆ. ಕರ್ನಾಟಕ ತಂಡ ಆಡುವ ಎಲ್ಲಾ ಪಂದ್ಯಗಳು ನಮ್ಮ ಕನ್ನಡ ಸುವರ್ಣ ಚಾನೆಲ್‌ನಲ್ಲಿ ನೇರ ಪ್ರಸಾರವಾಗುವುದು. ಸಾಧ್ಯವಾದಷ್ಟು ಕರ್ನಾಟಕ ತಂಡ ಆಡುವ ಎಲ್ಲಾ ಪಂದ್ಯಗಳ ವಿವರಣೆಯನ್ನು ಕೊಡಲು ಪ್ರಯತ್ನಿಸುತ್ತೇವೆ.

CCL-3 Schedule List

CCL-3 Schedule List

ಇಂತಹ ಅದ್ದೂರಿ ಕಾರ್ಯಕ್ರಮವನ್ನು ಮಿಸ್ ಮಾಡ್ಕೋಬೇಡಿ. ನಮ್ಮ ಕಿಚ್ಚನಿಗೆ ನಿಮ್ಮ ಬೆಂಬಲವಿರಲಿ…..

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech