Close X

CCL Season 3ಗೆ ಕರ್ನಾಟಕ ಬುಲ್ಡೋಜರ್ಸ್ ತಂಡದ ಜಾಹೀರಾತು

CCL Season 3 ಫೆಬ್ರವರಿ 3 ರಿಂದ ಅದ್ದೂರಿ ಚಾಲನೆಗೊಳ್ಳುತ್ತಿದು, ಕಿಚ್ಚ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ಈ ಅವತರಣಿಕೆಯ ನೆಚ್ಚಿನ ತಂಡವಾಗಿದೆ. ಹಿಂದೆ ನಡೆದ ಯಾವ ಕಹಿ ಘಟನೆಯನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೆ, ಕೇವಲ ಪ್ರೇಕ್ಷಕರ ಮನರಂಜನೆಗಾಗಿ ಆಡಲು ಕರ್ನಾಟಕ ಬುಲ್ಡೋಜರ್ಸ್ ತಂಡ ಸಜ್ಜಾಗಿದೆ. ಹಾಗೆಂದು ಪ್ರತಿಷ್ಟೆ ಬೇಡ ಅಂತಲ್ಲಾ. ಪಂದ್ಯವನ್ನು ಯಾವ ಅಂತರಾಷ್ಟೀಯ ಮಟ್ಟಕ್ಕೂ ಕಡಿಮೆ ಇಲ್ಲದಂತೆ ಆಡಲು ಸೆಲೆಬ್ರಿಟಿಗಳೂ ತಮ್ಮ ಅವಿರತ ಪರಿಶ್ರಮವನ್ನು ಒಡ್ಡಿದ್ದಾರೆ. ಹಾಗಾಗಿ ಪ್ರತಿಷ್ಟೆ ಕೂಡ ಅವರ ಆ ಪರಿಶ್ರಮಕ್ಕೆ ತಕ್ಕ ಫಲ.

CCL-3 Karnataka Bulldozers Advertisement

CCL-3 Karnataka Bulldozers Advertisement

ಕಿಚ್ಚ ಸುದೀಪ್ ಈ ಜಾಹಿರಾತಿನಲ್ಲಿ ತಮ್ಮ ಬ್ಯಾಟ್‌ನ್ನು ತೋರಿಸುತ್ತ, ನಮಗೇನು ಬೇಕು ಅದನ್ನು ಪಡೆಯಲು ನಾವು ಸಜ್ಜಾಗಿದ್ದೇವೆ. ಹೋರಾಟವೊಂದೆ ನಮಗೆ ಗೊತ್ತಿರುವುದು. ಎದುರಾಳಿಗಳು ನಮ್ಮ ತನವನ್ನು ತೋರಿಸಲು ಅವಕಾಶವಷ್ಟೆ.

We are men on a Mission. We are men in action ಅನ್ನೋ ಟ್ಯಾಗ್‌ಲೈನ್ ನೊಂದಿಗೆ ತಮ್ಮ ಬಳಗ ಕಠಿಣ ಶ್ರಮದೊಂದಿದೆ ಸಜ್ಜಾಗಿದೆ ಎಂದು ಸೂಚಿಸುತ್ತದೆ.

ಕಿಚ್ಚ ನಮಗೆ ಗೊತ್ತು ನಿಮ್ಮ ತಾಕತ್ತು. ಹಾಗಾಗಿ ನಮ್ಮ ಸಂಪೂರ್ಣ ಬೆಂಬಲ ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ. ಈ ಅವತರಣಿಕೆಯ ಕಪ್ ನಿಮ್ಮದೇ ಆಗಲೆಂದು ಕೋರುವ ಕನ್ನಡಹನಿಗಳ ಬಳಗ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech