Close X

ಅಂದರ್ ಬಾಹರ್ ಹಾಡುಗಳು ಈಗ ಬಾಹರ್ (ಮಾರುಕಟ್ಟೆಯಲ್ಲಿ)

ಲೆಜೆಂಡ್ಸ್ ಇಂಟರ್‌ನ್ಯಾಷನಲ್ ಪ್ರೆಸೆಂಟೇಷನ್‌ನ ಸೆಂಚುರಿ ಸ್ಟಾರ್ ಶಿವಣ್ಣ ಮತ್ತು ಪಾರ್ವತಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಅಂದರ್ ಬಾಹರ್ ಚಿತ್ರದ ಧ್ವನಿಸುರಳಿ ಕಾರ್ಯಕ್ರಮವು ಭಾನುವಾರ ಸಂಜೆ ಅದ್ದೂರಿಯಾಗಿ ನೆರವೇರಿತು. ಫಣೀಶ್ ರಾಮನಾಥಪುರ ನಿರ್ದೇಶನದ ಅಂದರ್ ಬಾಹರ್ ಚಿತ್ರಕ್ಕೆ ಹಾಡುಗಾರ ವಿಜಯ್ ಪ್ರಕಾಶ್ ಮೊಟ್ಟಮೊದಲ ಬಾರಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.

audio-release-for-andar-baharಕಾರ್ಯಕ್ರಮಕ್ಕೆ ಚಿತ್ರರಂಗದ ಅತಿಥಿಗಳಲ್ಲದೇ ಭಾರತೀಯ ಕ್ರಿಕೆಟಿನಲ್ಲಿ ಮೈಲಿಗಲ್ಲು ಸಾಧಿಸಿದ ಕನ್ನಡ ಕುವರ ಜಾವಗಲ್ ಶ್ರೀನಾಥ್ ಉಪಸ್ಥಿತರಿದ್ದರು. ಇವರುಗಳಲ್ಲದೇ, ಶಿವಣ್ಣರ ಅಭಿಮಾನಿಗಳು ಕಾರ್ಯಕ್ರಮವನ್ನು ದೊಡ್ಡ ಮಟ್ಟದಲ್ಲಿ ಯಶಸ್ವಿಯನ್ನಾಗಿಸಿದರು.

ಕಾರ್ಯಕ್ರಮದಲ್ಲಿ ಶಿವಣ್ಣ, ಚಿತ್ರದಲ್ಲಿ ಸಣ್ಣ ಪಾತ್ರವನ್ನು ವಹಿಸಿರುವ ಶಶಿಕುಮಾರ್ ಮತ್ತು ಸೃಜನ್ ಲೋಕೇಶ್ ಕೂಡ ಪಾಲ್ಗೊಂಡಿದ್ದರು. ಚಿತ್ರದ ನಾಯಕಿ ಪಾರ್ವತಿ ಕಾರ್ಯಕ್ರಮಕ್ಕೆ ಸ್ವಲ್ಪ ತಡವಾಗಿ ಬಂದರೂ, ಸೀರೆಯಲ್ಲಿ ಆನಂದಪರವಶಗೊಳಿಸುವಂತೆ ಕಂಡರು. ಉಳಿದಂತೆ ನೃತ್ಯ ಸಂಯೋಜಕ ಇಮ್ರಾನ್, ಸಾಹಸ ಸಂಯೋಜಕ ಥ್ರಿಲ್ಲರ್ ಮಂಜು, ಚಿತ್ರದ ನಿರ್ಮಾಪಕರುಗಳಾದ ಭಾಸ್ಕರ್, ರಜನೀಶ್, ಅಂಬರೀಷ್ ಮುಂತಾದವರೂ ಪಾಲ್ಗೊಂಡಿದ್ದರು.

ಚಿತ್ರದಲ್ಲಿ ಐದು ಹಾಡುಗಳಿದ್ದು, ನಾಲ್ಕು ಬರಹಗಾರರು ಈ ಐದು ಹಾಡುಗಳನ್ನು ಬರೆದಿದ್ದಾರೆ. ಜಯಂತ್ ಕಾಯ್ಕಿಣಿ ಎರಡು ಹಾಡನ್ನು ಬರೆದರೆ, ಯೋಗರಾಜ್ ಭಟ್ ಮತ್ತು ಕವಿರಾಜ್ ತಲಾ ಒಂದು ಹಾಡು ಬರೆದಿದ್ದಾರೆ. ಚಿತ್ರದ ಟೈಟಲ್ ಹಾಡನ್ನು ಎ. ಪಿ. ಅರ್ಜುನ್ ಬರೆದಿದ್ದಾರೆ.

ಚಿತ್ರದ ಟ್ರೈಲರ್ ಮತ್ತು ಹಾಡಿನ ತುಣುಕುಗಳನ್ನು ಕಾರ್ಯಕ್ರಮದಲ್ಲಿ ತೋರಿಸಲಾಯಿತು.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech