Close X

ರೆಬೆಲ್ ಸ್ಟಾರ್ ಅಂಬರೀಷ್ ಈಗ ಡಾ||ಅಂಬರೀಷ್

ನಮ್ಮ ನಿಮ್ಮೆಲ್ಲರ ನೆಚ್ಚಿನ ನಾಗರಹಾವೂ ಚಿತ್ರದ ಜಲೀಲಾ ಖ್ಯಾತಿಯ ರೆಬೆಲ್ ಸ್ಟಾರ ಅಂಬರೀಷ್ ಈಗ ಬರೀ ಅಂಬರೀಷ್ ಅಲ್ಲ, ಡಾ|| ಅಂಬರೀಷ್. ಚಿತ್ರರಂಗಕ್ಕೆ ಅಂಬರೀಷ್‌ರ 40 ವರ್ಷದ ಸುದೀರ್ಘ ಸೇವೆಯನ್ನು ಗುರುತಿಸಿ ಕರ್ನಾಟಕ ಯುನಿವರ್ಸಿಟಿನವರು ತಮ್ಮ 63ನೇ ಘಟಿಕೋತ್ಸವದಲ್ಲಿ ಅಂಬರೀಷ್‌ರವರಿಗೆ ಡಾಕ್‌ಟರೇಟ್ ಕೊಟ್ಟ ಇದೇ ಫೆ. 15ರಂದು ದಾರವಾಢದಲ್ಲಿ ಸನ್ಮಾನಿಸಲಾಯಿತು.

Actor Ambareesh honoured Doctorateಅಂಬರೀಷ್ ಚಿತ್ರರಂಗದಲ್ಲಿ ಅಲ್ಲದೇ ರಾಜಕೀಯದಲ್ಲೂ ಸಕ್ರೀಯವಾಗಿ ತಮ್ಮನ್ನು ತೊಡಗಿಸಿಕೊಂಡವರು. ಸಾಕಷ್ಟು ಸಮಾಜ ಸೇವೆಯಲ್ಲಿ ನಿರತರಾಗಿದ್ದಾರೆ. ಮಂಡ್ಯ ಜಿಲ್ಲೆಯ ಕ್ಷೇತ್ರದಿಂದ ಎಂ. ಪಿ ಯಾಗಿ ಹಲವು 3 ವರ್ಷಗಳ ಕಾಲ ಸೇವೆಸಲ್ಲಿಸಿದ್ದಾರೆ. ಇಂಡಿಯಾ ಟುಡೇ ನಿಯತಕಾಲಿಕ ಪತ್ರಿಕೆಯಲ್ಲಿ ಪ್ರಕಟವಾದ ಅತ್ಯುತ್ತಮ ಸಂಸತ್ತ್ ಸದಸ್ಯರಲ್ಲಿ ಇವರು ಮೊದಲನೆಯವರಾಗಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಗೊಂದಲಗಳು ಏಳುತ್ತಿದ್ದು, ಆ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಅಂಬರೀಷ್ ಕಾರಣರಾಗಿದ್ದಾರೆ. ಎಲ್ಲರಿಗೂ ಬೇಕಾದ ವ್ಯಕ್ತಿಯಾಗಿ ಅಂಬರೀಷ್ ಬೆಳೆದಿದ್ದಾರೆ. ಇತ್ತೀಚಿನ ಯುವ ನಟರುಗಳು ಅಂಬರೀಷ್‌ರಿಂದ ಮಾರ್ಗದರ್ಶನ ಪಡೆಯುತ್ತಿದ್ದಾರೆ.

ಇಂತಹ ಹತ್ತು ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡ ಚಿರಕಾಲ ಬಾಳಲಿ ಎಂದು ಆಶಿಸುವ ಕನ್ನಡಹನಿಗಳ ಬಳಗ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech